ವಿದ್ಯಾರ್ಥಿನಿಗೆ ತರಗತಿಯಲ್ಲಿ ತನ್ನೊಂದಿಗೆ ಕುಳಿತು ವೋಡ್ಕಾ ಕುಡಿಯಲು ಒತ್ತಾಯಿಸಿದ ಶಿಕ್ಷಕ!
Gujarat News: ಬುಧವಾರ ಟ್ಯೂಷನ್ ಸಮಯದ ನಂತರ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಕರೆದ ಶಿಕ್ಷಕರು ತನ್ನೊಂದಿಗೆ ಕುಳಿತು ವೋಡ್ಕಾ ಕುಡಿಯುವಂತೆ ಒತ್ತಾಯಿಸಿದ್ದಾರೆ.
ವಡೋದರಾ: ತನ್ನ ವಿದ್ಯಾರ್ಥಿನಿಯೊಬ್ಬಳ ಮೇಲೆ ದೈಹಿಕ ಹಲ್ಲೆ ನಡೆಸಿ, ತರಗತಿ ವೇಳೆ ವೋಡ್ಕಾ ಕುಡಿಯುವಂತೆ ಒತ್ತಾಯಿಸಿದ ಟ್ಯೂಷನ್ ಶಿಕ್ಷಕನನ್ನು ವಡೋದರಾ (Vadodara) ಪೊಲೀಸರು ಬಂಧಿಸಿದ್ದಾರೆ. ಬುಧವಾರ ರಾತ್ರಿ ಈ ಘಟನೆ ಬೆಳಕಿಗೆ ಬಂದಿದ್ದು, ಆ ದಿನ ಮಧ್ಯಾಹ್ನದ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಆ ಶಿಕ್ಷಕನಿಗೆ ಕೊವಿಡ್ (COVID-19) ತಪಾಸಣೆ ನಡೆಸಿ, ಕೊರೊನಾ ನೆಗೆಟಿವ್ ದೃಢಪಟ್ಟ ನಂತರ ಗುರುವಾರ ರಾತ್ರಿ ಆತನನ್ನು ಬಂಧಿಸಲಾಗಿದೆ.
ಫತೇಗಂಜ್ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ ಪರ್ಮಾರ್ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಿಜಾಂಪುರದಲ್ಲಿ ಆರೋಪಿ ಪ್ರಶಾಂತ್ ಖೋಸ್ಲಾ ಟ್ಯೂಷನ್ ತರಗತಿಗಳನ್ನು ನಡೆಸುತ್ತಿದ್ದಾರೆ. ಅವರು ಬುಧವಾರ ಟ್ಯೂಷನ್ ಸಮಯದ ನಂತರ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಕರೆದು, ತನ್ನೊಂದಿಗೆ ಕುಳಿತು ವೋಡ್ಕಾ ಕುಡಿಯುವಂತೆ ಒತ್ತಾಯಿಸಿದ್ದಾರೆ. ಆ ಬಾಲಕಿಯನ್ನು ತನ್ನೊಂದಿಗೆ ಕರೆದುಕೊಂಡು ಬರುವಂತೆ ಒತ್ತಾಯಿಸಿ ಮದ್ಯ ಸೇವಿಸಿದ್ದಾರೆ. ಆ ದಿನ ರಾತ್ರಿ 9.30ರ ಸುಮಾರಿಗೆ ಆ ಬಾಲಕಿ ಪ್ರಜ್ಞಾಹೀನಳಾಗುತ್ತಿದ್ದಂತೆ ಆಕೆಯನ್ನು ಮನೆಗೆ ಡ್ರಾಪ್ ಮಾಡಿದ್ದಾರೆ. ಆಕೆಯ ಪೋಷಕರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: Kaali Movie Row: ನನಗೆ ಕಾಳಿಯೆಂದರೆ ಮಾಂಸ ತಿನ್ನುವ, ಆಲ್ಕೋಹಾಲ್ ಸ್ವೀಕರಿಸುವ ದೇವತೆ; ಸಂಸದೆ ಮಹುವಾ ಮೊಯಿತ್ರಾ
ಪ್ರಜ್ಞೆ ಬಂದ ನಂತರ ಆ ಬಾಲಕಿ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎ.ಕೆ ವಾಲ್ವಿ ಅವರಿಗೆ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾಳೆ. ಅದಾದ ಬಳಿಕ ಟ್ಯೂಷನ್ ಶಿಕ್ಷಕ ಪ್ರಶಾಂತ್ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದ್ದು, ವಿಚಾರಣೆ ವೇಳೆ ಆತ ಕುಡಿದು ತಮ್ಮ ಮೇಲಿನ ಹಿಡಿತ ಕಳೆದುಕೊಂಡಿದ್ದರು ಎಂದು ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.