ದೆಹಲಿಯ ಸಾಕೇತ್ ಕೋರ್ಟ್‌ನ (Delhi’s Saket Court)ಹೊರಗೆ ಗುರುವಾರ ಜಮಾಯಿಸಿದ ವಕೀಲರು ಶ್ರದ್ಧಾ ವಾಕರ್ (Shraddha Walkar) ಹಂತಕ ಅಫ್ತಾಬ್ ಅಮೀನ್ ಪೂನಾವಾಲಾಗೆ(Aaftab Amin Poonawala) ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ದೆಹಲಿ ಪೊಲೀಸರು ಸಲ್ಲಿಸಿದ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಲು ನ್ಯಾಯಾಧೀಶರು ಒಪ್ಪಿದಾಗ ವಕೀಲರು “ಶ್ರದ್ಧಾ ಕೆ ಹತಿಯಾರ್ ಕೋ ಫಾಸಿ ದೋ, ಫಾಸಿ ದೋ” (ಶ್ರದ್ಧಾ ಹಂತಕನನ್ನು ಗಲ್ಲಿಗೇರಿಸಿ) ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಆರೋಪಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವಿರಾಲ್ ಶುಕ್ಲಾ ಅವರ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿದಾಗ ಸಾಕೇತ್ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ ಸುಮಾರು 100 ವಕೀಲರು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಒಟ್ಟುಗೂಡಿದರು ಎಂದು ವರದಿಗಳು ತಿಳಿಸಿವೆ. ಪ್ರತಿಭಟನಾನಿರತ ವಕೀಲರಲ್ಲಿ ಒಬ್ಬರಾದ ಸುರೇಂದ್ರ ಕುಮಾರ್, ಆರೋಪಿಗಳ ಘೋರ ಅಪರಾಧದ ವಿರುದ್ಧ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಈ ವಿಷಯದಲ್ಲಿ ನ್ಯಾಯಯುತ ತನಿಖೆಗೆ ನಾವು ಒತ್ತಾಯಿಸುತ್ತೇವೆ. ಇದನ್ನು ತ್ವರಿತ ನ್ಯಾಯಾಲಯದಲ್ಲಿ ತ್ವರಿತವಾಗಿ ತೀರ್ಮಾನಿಸಬೇಕು ಎಂದು ಕುಮಾರ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಪೂನಾವಾಲಾನನ್ನು ಹಾಜರುಪಡಿಸುವಂತೆ ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ಸ್ವೀಕರಿಸಿ, ಸಂಜೆ 4 ಗಂಟೆಗೆ ವಿಚಾರಣೆ ಮಾಡುವುದಾಗಿ ಹೇಳಿದ ಬಳಿಕ ಅವರು ತೆರಳಿದರು. “ನನಗೆ ವಿಷಯದ ಸೂಕ್ಷ್ಮತೆ, ಮಾಧ್ಯಮ ಪ್ರಸಾರ … ಸಾರ್ವಜನಿಕರ ಗಮನ ಈ ಬಗ್ಗೆ ತಿಳಿದಿದೆ ಎಂದು ನ್ಯಾಯಾಧೀಶರು ಹೇಳಿದರು.
WATCH: Advocates in Delhi’s Saket District Court raise slogans in the court hall demanding Aftab be hanged to death in the Shraddha Walker murder case. pic.twitter.com/4BBundIyM5
— Law Today (@LawTodayLive) November 17, 2022
10 ದಿನಗಳ ಪೊಲೀಸರ ಕೋರಿಕೆಯ ವಿರುದ್ಧ ದೆಹಲಿ ನ್ಯಾಯಾಲಯವು ಪೂನಾವಾಲಾನ ಕಸ್ಟಡಿಯನ್ನು ಐದು ದಿನಗಳವರೆಗೆ ವಿಸ್ತರಿಸಿದೆ. ನ್ಯಾಯಾಲಯವು ಆರೋಪಿಯ ನಾರ್ಕೋ-ಅನಾಲಿಸಿಸ್ ಪರೀಕ್ಷೆಗೆ ಪೊಲೀಸರಿಗೆ ಅನುಮತಿ ನೀಡಿದೆ.
ದೆಹಲಿ ಪೊಲೀಸರು ಹಿಮಾಚಲ ಪ್ರದೇಶದ ಪಾರ್ವತಿ ಕಣಿವೆ ಹಾಗೂ ದೆಹಲಿಯ ಬದರ್‌ಪುರ ಮತ್ತು ಚತ್ತರ್‌ಪುರ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಪಡೆಯಲು ಸಮಯ ಕೋರಿದ್ದರು.
ಮೇ 18 ರಂದು ಪೂನಾವಾಲಾ ಲಿವ್-ಇನ್ ಸಂಗಾತಿ ಶ್ರದ್ಧಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಹಲವಾರು ದಿನಗಳ ಅವಧಿಯಲ್ಲಿ ದೆಹಲಿಯ ಅರಣ್ಯಗಳಲ್ಲಿ ಎಸೆಯಲಾಯಿತು. ಕಳೆದ ತಿಂಗಳು ಸಂತ್ರಸ್ತೆಯ ತಂದೆ ನೀಡಿದ ದೂರಿನ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ನವೆಂಬರ್ 12ರಂದು ಪೂನಾವಾಲಾನನ್ನು ಬಂಧಿಸಲಾಗಿತ್ತು.
Published On - 8:03 pm, Thu, 17 November 22