ಹರ್ಯಾಣ ಚುನಾವಣೆ: ಎಎಪಿಯಿಂದ 10 ಸೀಟುಗಳ ಬೇಡಿಕೆ, 7 ಸ್ಥಾನಗಳ ನೀಡಲು ಕಾಂಗ್ರೆಸ್​ ಸಿದ್ಧ

ಹರ್ಯಾಣ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಪ್ರಯತ್ನಗಳು ತೀವ್ರಗೊಂಡಿವೆ. ಸೀಟು ಹಂಚಿಕೆ ಕುರಿತು ಉಭಯ ಪಕ್ಷಗಳ ನಡುವೆ ಮಾತುಕತೆ ನಡೆಯುತ್ತಿದೆ. ಮಾಹಿತಿ ಪ್ರಕಾರ, ಆಮ್ ಆದ್ಮಿ ಪಕ್ಷವು 90 ರಲ್ಲಿ 10 ಸ್ಥಾನಗಳನ್ನು ಕೇಳುತ್ತಿದೆ, ಆದರೆ ಕಾಂಗ್ರೆಸ್ ಕೇವಲ ಏಳು ಸ್ಥಾನಗಳನ್ನು ನೀಡಲು ಸಿದ್ಧವಾಗಿದೆ.

ಹರ್ಯಾಣ ಚುನಾವಣೆ: ಎಎಪಿಯಿಂದ 10 ಸೀಟುಗಳ ಬೇಡಿಕೆ, 7 ಸ್ಥಾನಗಳ ನೀಡಲು ಕಾಂಗ್ರೆಸ್​ ಸಿದ್ಧ
ಅರವಿಂದ್ ಕೇಜ್ರಿವಾಲ್, ರಾಹುಲ್ ಗಾಂಧಿImage Credit source: Hindustan Times
Follow us
ನಯನಾ ರಾಜೀವ್
|

Updated on: Sep 04, 2024 | 9:22 AM

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಮುಂಬರುವ ಹರ್ಯಾಣ ವಿಧಾನಸಭೆ ಚುನಾವಣೆಗೆ 10 ಸ್ಥಾನಗಳನ್ನು ನೀಡುವಂತೆ ಒತ್ತಾಯಿಸುತ್ತಿದೆ, ಆದರೆ ಕಾಂಗ್ರೆಸ್ ಲಭ್ಯವಿರುವ 90 ಸ್ಥಾನಗಳಲ್ಲಿ ಏಳನ್ನು ಮಾತ್ರ ನೀಡಲು ಸಿದ್ಧವಾಗಿದೆ ಎಂದು ಎಎಪಿ ಮೂಲಗಳು ತಿಳಿಸಿವೆ.

ಎರಡೂ ಪಕ್ಷಗಳು ಪ್ರಸ್ತುತ ಸೀಟು ಹಂಚಿಕೆಯ ತೀವ್ರ ಮಾತುಕತೆಯಲ್ಲಿ ತೊಡಗಿವೆ. ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯು ಹರ್ಯಾಣ ವಿಧಾನಸಭಾ ಚುನಾವಣೆಗೆ 90 ಸ್ಥಾನಗಳ ಪೈಕಿ 66 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅನುಮೋದಿಸಿವೆ.

ಎಎಪಿ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಈಗಾಗಲೇ ಹಿರಿಯ ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಅವರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇನ್ನೆರಡು ದಿನದಲ್ಲಿ ಮತ್ತೆ ಭೇಟಿಯಾಗುವ ನಿರೀಕ್ಷೆ ಇದೆ.

ಮತ್ತಷ್ಟು ಓದಿ: ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿ ಸಾಧ್ಯತೆ; ಬಿಜೆಪಿಯನ್ನು ಸೋಲಿಸುವುದೇ ನಮ್ಮ ಆದ್ಯತೆ: ಎಎಪಿ

ಎಎಪಿಯ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮಾತನಾಡಿ, ಅಕ್ಟೋಬರ್ 5 ರಂದು ಚುನಾವಣೆ ನಡೆಯಲಿರುವ ಹರ್ಯಾಣದಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಸಕ್ತಿ ತೋರಿಸಿದ್ದಾರೆ ಬಿಜೆಪಿಯನ್ನು ಸೋಲಿಸುವುದು ಆದ್ಯತೆಯಾಗಿದೆ ಎಂದು ಪ್ರತಿಪಾದಿಸಿದರು.

ಅಬಕಾರಿ ನೀತಿ ಸಂಬಂಧಿತ ಪ್ರಕರಣಗಳಲ್ಲಿ ಪ್ರಸ್ತುತ ಜೈಲಿನಲ್ಲಿರುವ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಅನುಮೋದನೆಯೊಂದಿಗೆ ಮೈತ್ರಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಹರ್ಯಾಣ ಮತ್ತು ಗುಜರಾತ್‌ನಲ್ಲಿ ಲೋಕಸಭೆ ಚುನಾವಣೆಗೆ ಸೀಟು ಹೊಂದಾಣಿಕೆ ಮಾಡಿಕೊಂಡಿದ್ದವು. ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಎಎಪಿ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದವು. ಹರಿಯಾಣದಲ್ಲಿ ಅಕ್ಟೋಬರ್ 5 ರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

ಹರ್ಯಾಣದಲ್ಲಿ ಪ್ರಸ್ತುತ ಸರ್ಕಾರದ ಅವಧಿ ನವೆಂಬರ್ 3, 2024 ರಂದು ಕೊನೆಗೊಳ್ಳಲಿದೆ ಮತ್ತು 90 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 2019 ರ ಚುನಾವಣೆಯಲ್ಲಿ, 90 ಸದಸ್ಯ ಬಲದ ವಿಧಾನಸಭೆಯಲ್ಲಿ 40 ಸ್ಥಾನಗಳೊಂದಿಗೆ ಬಿಜೆಪಿ, ಜೆಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರವನ್ನು ರಚಿಸಿತು. ಜೆಜೆಪಿ 10 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 31 ಸ್ಥಾನಗಳನ್ನು ಗೆದ್ದಿತ್ತು. ಈ ವರ್ಷದ ಆರಂಭದಲ್ಲಿ ಬಿಜೆಪಿ-ಜೆಜೆಪಿ ಮೈತ್ರಿ ಮುರಿದುಬಿದ್ದಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ