Uttarakhand Landslide ಡೆಹ್ರಾಡೂನ್-ಹೃಷಿಕೇಶ್ ಹೆದ್ದಾರಿಯಲ್ಲಿ ಮುರಿದು ಬಿದ್ದ ರಾಣಿ ಪೋಖರಿ ಸೇತುವೆ; ಹಲವೆಡೆ ಭೂಕುಸಿತ
Uttarakhand Rains: ಡೆಹ್ರಾಡೂನ್-ರಿಷಿಕೇಶ್ ರಸ್ತೆಯ ರಾಣಿ ಪೋಖರಿಯಲ್ಲಿ ಜಖಾನ್ ನದಿಯ ಮೇಲಿನ ಸೇತುವೆಯ ಒಂದು ಭಾಗವು ಭಾರೀ ಮಳೆ ಮತ್ತು ಬಲವಾದ ಪ್ರವಾಹದಿಂದಾಗಿ ಕುಸಿದಿದೆ. ಸಾರ್ವಜನಿಕರು ದಯವಿಟ್ಟು ಮೇಲಿನ ಮಾರ್ಗವನ್ನು ಬಳಸಬೇಡಿ ಮತ್ತು ಇತರ ಪರ್ಯಾಯ ಮಾರ್ಗಗಳನ್ನು ಬಳಸಿ" ಎಂದು ಉತ್ತರಾಖಂಡ್ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಡೆಹ್ರಾಡೂನ್: ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತವುಂಟಾಗಿದ್ದು ಹೃಷಿಕೇಶ್-ದೇವಪ್ರಯಾಗ್, ಹೃಷಿಕೇಶ್-ತೆಹ್ರಿ ಮತ್ತು ಡೆಹ್ರಾಡೂನ್-ಮಸ್ಸೂರಿ ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಉತ್ತರಾಖಂಡ್ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಹವಾಮಾನ ಸಹಜ ಸ್ಥಿತಿಗೆ ಬರುವವರೆಗೆ ಈ ಪ್ರದೇಶಗಳಲ್ಲಿ ಓಡಾಡುವುದು ಬೇಡ ಎಂದು ಪೊಲೀಸರು ಪ್ರಯಾಣಿಕರಿಗೆ ಸೂಚಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 58 ಕೂಡ ತಪೋವನದಿಂದ ಮಲೆತಾಗೆ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಮುಚ್ಚಲಾಗಿದೆ. ಏತನ್ಮಧ್ಯೆ, ಡೆಹ್ರಾಡೂನ್ ಹೃಷಿಕೇಶ್ ಹೆದ್ದಾರಿಯಲ್ಲಿ ರಾಣಿ ಪೋಖರಿ ಸೇತುವೆ ಕುಸಿದಿದ್ದು ಕಾರುಗಳು ಕೊಚ್ಚಿಕೊಂಡು ಹೋಗಿವೆ.
“ಡೆಹ್ರಾಡೂನ್-ರಿಷಿಕೇಶ್ ರಸ್ತೆಯ ರಾಣಿ ಪೋಖರಿಯಲ್ಲಿ ಜಖಾನ್ ನದಿಯ ಮೇಲಿನ ಸೇತುವೆಯ ಒಂದು ಭಾಗವು ಭಾರೀ ಮಳೆ ಮತ್ತು ಬಲವಾದ ಪ್ರವಾಹದಿಂದಾಗಿ ಕುಸಿದಿದೆ. ಸಾರ್ವಜನಿಕರು ದಯವಿಟ್ಟು ಮೇಲಿನ ಮಾರ್ಗವನ್ನು ಬಳಸಬೇಡಿ ಮತ್ತು ಇತರ ಪರ್ಯಾಯ ಮಾರ್ಗಗಳನ್ನು ಬಳಸಿ” ಎಂದು ಉತ್ತರಾಖಂಡ್ ಪೊಲೀಸರು ಟ್ವೀಟ್ ಮಾಡಿದ್ದಾರೆ.
Uttarakhand: Rescue and deep diving teams of State Disaster Response Force (SDRF) have reached the site where parts of a bridge collapsed on Dehradun-Rishikesh Highway in Ranipokhari earlier today. SDRF has started its rescue and relief operation pic.twitter.com/JzI4vrtXe4
— ANI (@ANI) August 27, 2021
ಮಾಲ್ದೇವತಾ-ಸಹಸ್ರಧಾರ ಲಿಂಕ್ ರಸ್ತೆಯು ಡೆಹ್ರಾಡೂನ್ ನಲ್ಲಿ ನಿರಂತರ ಮಳೆಯಿಂದಾಗಿ ಜಲಾವೃತವಾಗಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ಉತ್ತರಾಖಂಡದಲ್ಲಿ ಆಗಸ್ಟ್ 29 ರವರೆಗೆ ಭಾರೀ ಮಳೆ ಮುಂದುವರಿಯುವ ಸೂಚನೆಯನ್ನು ನೀಡಿದೆ.
#WATCH | A bridge at Jakhan river on Ranipokhari-Rishikesh highway collapses in Dehradun, Uttarakhand
District Magistrate R Rajesh Kumar says traffic on the route has been halted. pic.twitter.com/0VyccMrUky
— ANI (@ANI) August 27, 2021
ಕಾರು ಕಮರಿಗೆ ಬಿದ್ದು ದೆಹಲಿಯ ಇಬ್ಬರು ಪ್ರವಾಸಿಗರು ದುರ್ಮರಣ
ಬುಧವಾರದಂದು ಉತ್ತರಾಖಂಡದ ಪೌರಿ ಜಿಲ್ಲೆಯ ಲಾನ್ಸ್‌ಡೌನ್ ಮತ್ತು ಜೈಹರಿಕಾಲ್ ನಡುವೆ ಕಾರು ಆಳವಾದ ಕಮರಿಗೆ ಬಿದ್ದು ದೆಹಲಿಯ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದಾರೆ. ಇನ್ನೊಬ್ಬ ವ್ಯಕ್ತಿಗೆ ಗಾಯಗಳಾಗಿವೆ. ಪಿಟಿಐ ವರದಿ ಪ್ರಕಾರ, ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.
ದ್ವಾರಕಾ ಸೆಕ್ಟರ್ 22 ರ ನಿವಾಸಿ ತರುಣ್ ಶರ್ಮಾ (32) ಮತ್ತು ದೆಹಲಿಯ ಕಪಶೇಡಾದ ವಿಕಾಸ್ ರಾಣಾ (33) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಅಪಘಾತದಲ್ಲಿ ಗಾಯಗೊಂಡ ನಜಾಫ್‌ಗಡದ ನಿವಾಸಿ ಅನುಜ್ ವತ್ಸಾ (32) ಅವರನ್ನು ಕೋಟ್ವಾರ್‌ನ ಸರ್ಕಾರಿ ಬೇಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಲ್ಯಾನ್ಸ್‌ಡೌನ್ ಕೊಟ್ವಾಲಿ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸಂತೋಷ್ ಕುನ್ವಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ವಕೀಲರ ಮುಷ್ಕರ ಮತ್ತು ಕೋರ್ಟ್ ಬಹಿಷ್ಕಾರಗಳನ್ನು ತಡೆಯಲು ನಿಯಮ ರೂಪಿಸಲಿದ್ದೇವೆ: ಬಾರ್ ಕೌನ್ಸಿಲ್ ಆಫ್ ಇಂಡಿಯಾ
ಇದನ್ನೂ ಓದಿ: ಗ್ಯಾಂಗ್ ರೇಪ್: ಹುಡುಗಿಯದ್ದೇ ತಪ್ಪು ಅನ್ನೋರಿಗೆ ರಮ್ಯಾ ಛೀಮಾರಿ; ಪರಿಸ್ಥಿತಿ ಬದಲಾಗ್ಬೇಕು ಎಂದ ನಟಿ
(Heavy rains in Uttarakhand Rani Pokhari Bridge collapsed on Dehradun Rishikesh Highway)
Published On - 3:26 pm, Fri, 27 August 21