AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hijab Row: ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್​ ನಿವಾಸಕ್ಕೆ ಶಾಸಕ ಭೇಟಿ – ಐ ಫೋನ್, ಸ್ಮಾರ್ಟ್​ವಾಚ್​ ಗಿಫ್ಟ್​

ಮುಸ್ಕಾನ್​ ಘೋಷಣೆ ಕೂಗಿರುವುದು ನನಗೆ ಹೆಮ್ಮೆ ಅನಿಸಿದೆ. ಮಂಡ್ಯದಿಂದ ಇಂಡಿಯಾವರೆಗೂ ಆಕೆ ಬಗ್ಗೆ ಗರ್ವ ಪಡುತ್ತಿದೆ ಎಂದು ಇದೇ ವೇಳೆ ಬಾಂದ್ರಾ ಶಾಸಕ ಜಿಶಾನ್ ಸಿದ್ದಿಕ್​ ಹೇಳಿದ್ದಾರೆ.

Hijab Row: ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್​ ನಿವಾಸಕ್ಕೆ ಶಾಸಕ ಭೇಟಿ - ಐ ಫೋನ್, ಸ್ಮಾರ್ಟ್​ವಾಚ್​ ಗಿಫ್ಟ್​
ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್​ ನಿವಾಸಕ್ಕೆ ಶಾಸಕ ಭೇಟಿ - ಐ ಫೋನ್, ಸ್ಮಾರ್ಟ್​ವಾಚ್​ ಗಿಫ್ಟ್​
TV9 Web
| Updated By: ಸಾಧು ಶ್ರೀನಾಥ್​|

Updated on:Feb 11, 2022 | 1:55 PM

Share

ಮಂಡ್ಯ: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ (allah hu akbar) ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್​ (muskan) ನಿವಾಸಕ್ಕೆ ಮುಂಬೈನ ಬಾಂದ್ರಾ ಪೂರ್ವ ಕ್ಷೇತ್ರದ ಶಾಸಕ ಜಿಶಾನ್ ಸಿದ್ದಿಕ್​ ಭೇಟಿ ನೀಡಿದ್ದಾರೆ. ಮಂಡ್ಯದ ಪಿಇಎಸ್​ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಮುಸ್ಕಾನ್ ನಿವಾಸ ಮಂಡ್ಯದ ಗುತ್ತಲು ಬಡಾವಣೆಯಲ್ಲಿದೆ. ಭೇಟಿ ವೇಳೆ ಮಹಾರಾಷ್ಟ್ರದ ಶಾಸಕ ಜಿಶಾನ್ ಸಿದ್ದಿಕ್​ (Bandra MLA Zeeshan Siddique) ಮುಸ್ಕಾನ್​ಗೆ ಐ ಫೋನ್ ಮತ್ತು ಸ್ಮಾರ್ಟ್​ವಾಚ್​ ಉಡುಗೊರೆ ನೀಡಿ, ಸನ್ಮಾನಿಸಿದ್ದಾರೆ.

ಮುಸ್ಕಾನ್​ ಘೋಷಣೆ ಕೂಗಿರುವುದು ನನಗೆ ಹೆಮ್ಮೆ ಅನಿಸಿದೆ. ಮಂಡ್ಯದಿಂದ ಇಂಡಿಯಾವರೆಗೂ ಆಕೆ ಬಗ್ಗೆ ಗರ್ವ ಪಡುತ್ತಿದೆ. ಹಿಜಾಬ್​ ಧರಿಸುವುದು ಮುಸ್ಲಿಂ ಹೆಣ್ಣುಮಕ್ಕಳ ಹಕ್ಕು. ಹೆಣ್ಣುಮಕ್ಕಳು ತಮ್ಮ ಹಕ್ಕಿನ ಬಗ್ಗೆ ಧೈರ್ಯದಿಂದ ಧ್ವನಿ ಎತ್ತಿದ್ದಾರೆ ಎಂದು ಇದೇ ವೇಳೆ ಬಾಂದ್ರಾ ಶಾಸಕ ಜಿಶಾನ್ ಸಿದ್ದಿಕ್​ ಹೇಳಿದ್ದಾರೆ.

‘ಹಿಜಾಬ್ ಸ್ಟಾರ್’ ಮುಸ್ಕಾನ್​ಗೆ ಉಡುಗೊರೆಗಳು, ಕೆಲವರಿಂದ ವಿರೋಧ: ರಾತ್ರೋ ರಾತ್ರಿ ‘ಹಿಜಾಬ್ ಸ್ಟಾರ್’ ಆದ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಮುಸ್ಕಾನ್ ಎಂಬ ವಿದ್ಯಾರ್ಥಿನಿ​ಯತ್ತ ಹಣ ಹಾಗೂ ಬೆಲೆಬಾಳುವ ಉಡುಗೊರೆಗಳು ಹರಿದು ಬರುತ್ತಿವೆ. ವಿದ್ಯಾರ್ಥಿನಿ ಮುಸ್ಕಾನ್ ಮನೆಗೆ ಮುಸ್ಲಿಂ ಮುಖಂಡರು ಭೇಟಿ ನೀಡಿ ಹಣ ಹಾಗೂ ಉಡುಗೊರೆ ಕೊಡುತ್ತಿದ್ದಾರೆ. ಹಣ, ಚೆಕ್ ಇತ್ಯಾದಿ ಉಡುಗೊರೆ ಕೊಡುವ ವಿಡಿಯೋ ಮತ್ತು ಪೋಟೊಗಳು ಸಾಕಷ್ಟು ವೈರಲ್ ಆಗುತ್ತಿವೆ. ರಾಜ್ಯ ಹಾಗೂ ಹೊರ ರಾಜ್ಯದಿಂದಲೂ ಮುಖಂಡರು ಬಂದು ಉಡುಗೊರೆ ಕೊಟ್ಟು ಹೋಗುತ್ತಿದ್ದಾರೆ.

ಆದರೆ ವಿದ್ಯಾರ್ಥಿನಿಯ ಈ ವರ್ತನೆ,‌ ಘೋಷಣೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ ಮತ್ತೊಂದು ಕಡೆ ಕೆಲವರಿಂದ ವಿರೋಧಗಳು ವ್ಯಕ್ತವಾಗುತ್ತಿವೆ. ಹಣ ಕೊಡುವುದಾಗಿ ಘೋಷಣೆ ಮಾಡಿದ್ದ ಸಂಘಟನೆ ವಿರುದ್ಧ ಬಿಜೆಪಿ ಮುಖಂಡರು ದೂರನ್ನು ನೀಡಿತ್ತಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಉಡುಗೊರೆ ನೀಡುತ್ತಿರುವ ಬೆಳವಣಿಗೆ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಬುರ್ಖಾಧಾರಿ ವಿದ್ಯಾರ್ಥಿನಿ ಮಂಡ್ಯ: ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಕೇಸರಿ ಶಾಲು ಗಲಾಟೆ ಇತ್ತೀಚೆಗೆ ತಾರಕಕ್ಕೇರಿತ್ತು. ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಬುರ್ಖಾ ಧರಿಸಿದ ಯುವತಿಯ (ವಿದ್ಯಾರ್ಥಿನಿ ಮುಸ್ಕಾನ್​) ಎದುರು ಯುವಕರ ಗುಂಪೊಂದು ಜೈ ಶ್ರೀರಾಮ್ ಘೋಷಣೆ ಕೂಗಿತ್ತು. ತನ್ನೆದುರು ಕೇಸರಿ ಶಾಲು ಧರಿಸಿ, ಜೈ ಶ್ರೀರಾಮ್ ಘೋಷಣೆ ಕೂಗಿದ ಯುವಕರ ವರ್ತನೆಯಿಂದ ಕೋಪಗೊಂಡ ಬುರ್ಖಾಧಾರಿ ವಿದ್ಯಾರ್ಥಿನಿ ಅಲ್ಲಾ ಹು ಅಕ್ಬರ್ ಎಂದು ಕೈಗಳನ್ನು ಮೇಲೆತ್ತಿ ಘೋಷಣೆ ಕೂಗುತ್ತಾ ಮಂಡ್ಯದ ಪಿಇಎಸ್​ ಕಾಲೇಜು ಆವರಣದಲ್ಲಿ ಕಾಣಿಸಿಕೊಂಡಿದ್ದಳು. ಆ ವಿಡಿಯೋ ವೈರಲ್ ಆಗಿತ್ತು.

ಅಲ್ಲಾಹು ಅಕ್ಬರ್ ಎಂದ ಯುವತಿಗೆ 5 ಲಕ್ಷ ರೂ. ಬಹುಮಾನ ಮಂಡ್ಯದಲ್ಲಿ ಹಿಜಾಬ್ (Hijab) ಧರಿಸಿದ್ದ ವಿದ್ಯಾರ್ಥಿನಿ ಮುಸ್ಕಾನ್ ಕೇಸರಿ ಶಾಲು ಹಾಕಿದ್ದ ಹುಡುಗರ ವಿರುದ್ಧ ಸೆಟೆದು ನಿಂತಿದ್ದಳು. ಮಂಡ್ಯದ ಪಿಇಎಸ್​ ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದಕ್ಕಾಗಿ ಮುಸ್ಕಾನ್ ಎದುರು ನಿಂತ ಯುವಕರ ಗುಂಪೊಂದು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿತ್ತು. ಇದರಿಂದ ಕೋಪಗೊಂಡ ಮುಸ್ಕಾನ್ ಆ ಯುವಕರ ಎದುರು ಕೈ ಎತ್ತಿ ‘ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗಿದ್ದಳು. ಈ ವಿಡಿಯೋ ವೈರಲ್ ಆಗಿತ್ತು. ಆ ವಿದ್ಯಾರ್ಥಿನಿಗೆ ದೇಶದ ಪ್ರಮುಖ ಇಸ್ಲಾಮಿಕ್ ಸಂಘಟನೆಗಳಲ್ಲಿ ಒಂದಾದ ಜಮಿಯತ್ ಉಲಾಮಾ-ಇ-ಹಿಂದ್ ವತಿಯಿಂದ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

ಇದನ್ನೂ ಓದಿ Hijab row: ಹಿಜಾಬ್ ವಿವಾದದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಮಧ್ಯಂತರ ಆದೇಶ ಪ್ರಕಟ, ಏನಿದೆ ಲಿಖಿತ ತೀರ್ಪಿನಲ್ಲಿ?

ಇದನ್ನೂ ಓದಿ Hijab Row: ಶಾಲಾ-ಕಾಲೇಜುಗಳ ಆವರಣದಲ್ಲಿ ಮೊಬೈಲ್‌ ಬಳಕೆ ನಿಷೇಧ? ತಜ್ಞರಿಂದ ಸಲಹೆ

Published On - 1:19 pm, Fri, 11 February 22