Breaking News ದೆಹಲಿಯಲ್ಲಿ ರೊಹಿಂಗ್ಯಾ ನಿರಾಶ್ರಿತರಿಗೆ ಫ್ಲಾಟ್ ನೀಡುವುದಿಲ್ಲ : ಕೇಂದ್ರ ಸರ್ಕಾರ
ಗೃಹ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿ ನಿರ್ಧಾರವನ್ನು ಶ್ಲಾಘಿಸಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಭಾರತದ ವಲಸೆಗಾರರ ನೀತಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದವರಿಗೆ ಇದರಿಂದ ನಿರಾಸೆಯಾಗಿದೆ ಎಂದಿದ್ದರು.
ವಸತಿ ಮತ್ತು ನಗರ ವ್ಯವಹಾರಗಳ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ(Hardeep Singh Puri) ಅವರು ರೊಹಿಂಗ್ಯಾ ನಿರಾಶ್ರಿತರನ್ನು (Rohingya refugees ) ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ ಶಿಫ್ಟ್ ಮಾಡಲು ನಿರ್ಧರಿಸಿದ್ದು, ಅವರಿಗೆ ಪಶ್ಚಿಮ ದೆಹಲಿಯ ಬಕ್ಕರ್ವಾಲಾದಲ್ಲಿ ಫ್ಲಾಟ್ ನೀಡಲಾಗುವುದು ಎಂದು ಬಧುವಾರ ಬೆಳಗ್ಗೆ ಟ್ವೀಟ್ ಮಾಡಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಹೇಳಿಕೆ ಹೊರಡಿಸಿದ ಕೇಂದ್ರ ಗೃಹ ಸಚಿವಾಲಯ ಅಂಥಾ ಯಾವುದೇ ನಿರ್ದೇಶನವನ್ನು ನೀಡಿಲ್ಲ. ಅಕ್ರಮ ವಿದೇಶಿಯರನ್ನು ಕಾನೂನು ಮೂಲಕ ದೇಶದಿಂದ ಗಡಿಪಾರು ಮಾಡುವ ವರಗೆ ಅವರನ್ನು ಬಂಧನದಲ್ಲೇ ಇರಿಸಲಾಗುವುದು ಎಂದಿದೆ.ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕೇಂದ್ರ ಸಚಿವಾಲಯ ರೊಹಿಂಗ್ಯಾಗಳನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸಲು ದೆಹಲಿ ಸರ್ಕಾರ ಮುಂದಾಗಿದೆ. ರೊಹಿಂಗ್ಯಾ ಅಕ್ರಮ ವಿದೇಶಿಗರು ಪ್ರಸ್ತುತ ಸ್ಥಳದಲ್ಲಿಯೇ ಮುಂದುವರಿಯುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಗೃಹ ಸಚಿವಾಲಯ GNCTD ಗೆ ನಿರ್ದೇಶನ ನೀಡಿದೆ.ಯಾಕೆಂದರೆ ಗೃಹಸಚಿವಾಲ ಈಗಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಲಕ ಸಂಬಂಧಪಟ್ಟ ದೇಶದೊಂದಿಗೆ ಅವರನ್ನು ಗಡೀಪಾರು ಮಾಡುವ ವಿಷಯ ಚರ್ಚಿಸುತ್ತಿದೆ ಎಂದಿದೆ.
ಬೆಳಗ್ಗೆ ಟ್ವೀಟ್ ಮಾಡಿದ ಪುರಿ, ದೇಶದಲ್ಲಿ ಆಶ್ರಮ ಬೇಡಿ ಬಂದ ನಿರಾಶ್ರಿತರನ್ನು ಭಾರತ ಸದಾ ಸ್ವಾಗತಿಸಿದೆ. ಮಹತ್ವದ ನಿರ್ಧಾರ ಏನೆಂದರೆ ಎಲ್ಲ ರೊಹಿಂಗ್ಯಾ ನಿರಾಶ್ರಿತರನ್ನು ದೆಹಲಿಯ ಬಕ್ಕರ್ವಾಲಾದಲ್ಲಿರುವ ಇಡಬ್ಯುಎಸ್ ಫ್ಲಾಟ್ಗೆ ಶಿಫ್ಟ್ ಮಾಡಲಾಗುವುದು. ಇಲ್ಲಿ ಇವರಿಗೆ ಮೂಲ ಸೌಕರ್ಯ, ಯುಎನ್ಎಚ್ ಸಿಆರ್ ಐಡಿ ಮತ್ತು ದಿನದ 24 ಗಂಟೆ ದೆಹಲಿ ಪೊಲೀಸ್ ರಕ್ಷಣೆ ನೀಡಲಾಗುವುದು. ದೇಶದ ವಲಸೆಗಾರರ ನೀತಿಯನ್ನು ಸಿಎಎ ಜತೆ ಜೋಡಿಸಿ ಅಪಪ್ರಚಾರ ಮಾಡಿ ತಮ್ಮ ಬೇಳೆ ಬೇಯಿಸಿಕೊಂಡವರಿಗೆ ಇದರಿಂದ ನಿರಾಶೆಯಾಗಿದೆ. ಭಾರತ ಯುಎನ್ ರೆಫ್ಯೂಗಿ ಕನ್ವೆನ್ಶನ್ 1951ನ್ನು ಗೌರವಿಸುತ್ತದೆ ಮತ್ತು ಪಾಲಿಸುತ್ತದೆ. ಯಾವುದೇ ನಿರಾಶ್ರಿತರಿಗೆ ಅವರ ಜನಾಂಗ, ಧರ್ಮ ಅಥವಾ ಸಮುದಾಯದ ಭೇದವಿಲ್ಲದೆ ಆಶ್ರಯ ಒದಗಿಸುತ್ತದೆ ಎಂದು ಸಚಿವ ಪುರಿ ಟ್ವೀಟ್ ಮಾಡಿದ್ದರು.
With respect to news reports in certain sections of media regarding Rohingya illegal foreigners, it is clarified that Ministry of Home Affairs (MHA) has not given any directions to provide EWS flats to Rohingya illegal migrants at Bakkarwala in Delhi: MHA pic.twitter.com/dTBg9xKWt3
— ANI (@ANI) August 17, 2022
ರೊಹಿಂಗ್ಯಾ ನಿರಾಶ್ರಿತರು ಯಾರು?
ರೊಹಿಂಗ್ಯಾ ನಿರಾಶ್ರಿತರು ಕಳೆದ ಒಂದು ದಶಕದಿಂದ ಮದನ್‌ಪುರ ಖಾದರ್ ಮತ್ತು ಕಾಳಿಂದಿ ಕುಂಜ್‌ನಲ್ಲಿ ವಾಸಿಸುತ್ತಿದ್ದಾರೆ. 2018 ಮತ್ತು 2021 ರಲ್ಲಿ ಅವರ ಮನೆಗಳು ಎರಡು ಬಾರಿ ಬೆಂಕಿಯಲ್ಲಿ ಸುಟ್ಟುಹೋಗಿವೆ ಮತ್ತು ಅವರು ದೆಹಲಿ ಸರ್ಕಾರವು ಒದಗಿಸಿದ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ನಿರಾಶ್ರಿತರ ಪ್ರಸ್ತುತ ಸ್ಥಳವನ್ನು ಬಂಧನ ಕೇಂದ್ರವೆಂದು ಘೋಷಿಸಲು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ಕಾನೂನು ಪ್ರಕಾರ ಅಕ್ರಮ ವಿದೇಶಿಗರನ್ನು ಗಡಿಪಾರು ಮಾಡುವವರೆಗೆ ಬಂಧನ ಕೇಂದ್ರದಲ್ಲಿ ಇರಿಸಬೇಕು. ದೆಹಲಿ ಸರ್ಕಾರವು ಪ್ರಸ್ತುತ ಸ್ಥಳವನ್ನು ಬಂಧನ ಕೇಂದ್ರವೆಂದು ಘೋಷಿಸಿಲ್ಲ. ತಕ್ಷಣವೇ ಅದೇ ರೀತಿ ಮಾಡುವಂತೆ ಅವರಿಗೆ ನಿರ್ದೇಶನ ನೀಡಲಾಗಿದೆ ಎಂದು ಗೃಹ ಸಚಿವಾಲಯ ಟ್ವೀಟ್ ಮಾಡಿದೆ.
Published On - 3:44 pm, Wed, 17 August 22