Summer 2023: ಆಂಧ್ರದಲ್ಲಿ ನಿಗಿನಿಗಿ ಬಿಸಿಲು: ಕೆಂಡದಂತಹ ಬಿಸಿಲಿಗೆ ಭಾರೀ ಶಬ್ದದೊಂದಿಗೆ ಸೀಳಿದ ಬೃಹತ್ ಬಂಡೆ! ವಿಡಿಯೋ ಇದೆ
ಬಿಸಿಲಿನ ತಾಪಕ್ಕೆ ಗುಡ್ಡದ ಬಂಡೆಗಳು ಒಡೆಯುತ್ತಿರುವುದನ್ನು ನೋಡಿದರೆ.. ಅಲ್ಲಿ ಬಿಸಿಲ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ. ಬಿರು ಬಿಸಿಲು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ಅಗತ್ಯ.
ಕರ್ನೂಲ್: ಅದು ಬಟಾಬಯಲಿನಲ್ಲಿ ನೂರಾರು ವರ್ಷಗಳಿಂದ ಸ್ಥಿತಪ್ರಜ್ಞನಂತೆ ‘ಕಲ್ಲುಬಂಡೆಯಂತೆ’ ಅಲುಗಾಡದೆ ಸ್ಥಿರವಾಗಿದ್ದ ಬೃಹತ್ ಬಂಡೆ (Rock). ಜೊತೆಗೆ ತಲೆಯ, ಮೇಲೆ ಮತ್ತರಡು ಚಿಕ್ಕ ಬಂಡೆಗಳನ್ನೂ ಹೊತ್ತುಕೊಂಡಿತ್ತು. ಭಾರೀ ಗಾಳಿ, ಬಿಸಿಲನ್ನು (Summer) ತಡೆದುಕೊಂಡು ಬಂದಿತ್ತು. ಆದರೆ ಈ ಬಾರಿ ಆಂಧ್ರದಲ್ಲಿ (Andhra Pradesh) ಬಿಸಿಲು ನಿಗಿನಿಗಿ ಕೆಂಡದಂತೆ ಇದೆ. ಜನ ಜಾನುವಾರುಗಳಂತೂ ತತ್ತರಿಸಿಬಿಟ್ಟಿದ್ದಾರೆ. ಗಮನಾರ್ಹವೆಂದರೆ ಅದು ಕಲ್ಲು ಬಂಡೆಗಳನ್ನೂ ಬಿಟ್ಟಿಲ್ಲ. ಬಿಸಿಲಿನ ತಾಪಕ್ಕೆ (Heat Wave) ದೊಡ್ಡ ಬಂಡೆಯೊಂದು ಬಿರುಕು ಬಿಟ್ಟಿದೆ… ಅದೂ ಜೋರಾಗಿ ಸಿಡಿಯುವ ಸದ್ದು ಮಾಡಿಕೊಂಡು ಸೀಳಿಬಿಟ್ಟಿದೆ. ಇದಕ್ಕೆ ಸಾಕ್ಷ್ಯವಾಗಿ ಈ ವಿಡಿಯೋ ನೋಡಿ, ಮತ್ತು ಸ್ಥಳೀಯ ಹಿರಿಯರೊಬ್ಬರು ಈ ಬಗ್ಗೆ ನೀಡಿರುವ ವಿವರಣೆಯನ್ನು ತಿಳಿಯಿರಿ.
ಆಂಧ್ರದಲ್ಲಿ ಬಿರುಬೇಸಿಗೆ ತಾಪ ಜೋರಾಗಿದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ. ಹೆಚ್ಚಿನ ತಾಪಮಾನ ಎಲ್ಲೆಡೆ ದಾಖಲಾಗುತ್ತಿದೆ. ತೆಲುಗು ರಾಜ್ಯದಲ್ಲೂ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಕರ್ನೂಲು ಜಿಲ್ಲೆಯ ಗೋಣೆಗಂಡ್ಲ ಮಂಡಲ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
Also Read:
ಭಾರಿ ಚರ್ಚೆಗೆ ಆಸ್ಪದ ನೀಡಿದ್ದ ಅಗ್ನಿಪಥ್ ಯೋಜನೆಗೆ ಸುಪ್ರೀಂ ಮಾನ್ಯತೆ! ಅದು ಸರ್ಕಾರದ ಏಕಪಕ್ಷೀಯ ಯೋಜನೆ ಅಲ್ಲ ಎಂದ ಸುಪ್ರೀಂ ಕೋರ್ಟ್
ಬಿಸಿಲಿನ ತೀವ್ರತೆಗೆ ಗುಡ್ಡದ ಮೆಲಿದ್ದ ಬಂಡೆಯೊಂದು ಒಡೆದು ಸೀಳಿದೆ. ಸ್ಫೋಟದ ವೇಳೆ ಭಾರೀ ಸದ್ದು ಸಹ ಕೇಳಿಬಂದಿದೆ. ಇದರಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಯಾವ ಕ್ಷಣದಲ್ಲಾದರೂ ಸೀಳಿರುವ ಬಂಡೆ ಉರುಳುವ ಭೀತಿ ಎದುರಾಗಿದೆ.
ಬಿಸಿಲಿನ ತಾಪಕ್ಕೆ ಗುಡ್ಡದ ಬಂಡೆಗಳು ಒಡೆಯುತ್ತಿರುವುದನ್ನು ನೋಡಿದರೆ.. ಅಲ್ಲಿ ಬಿಸಿಲ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ. ಬಿರು ಬಿಸಿಲು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ಅಗತ್ಯ. ಮಕ್ಕಳು ಮತ್ತು ವೃದ್ಧರು ಬೆಳಿಗ್ಗೆ 10 ಗಂಟೆಯ ನಂತರ ಹೊರಗೆ ಹೋಗಬಾರದು. ಬಿಸಿಲಿನ ಝಳ ಹೀಗೆಯೇ ಹೆಚ್ಚಾದರೆ ಪರಿಸ್ಥಿತಿ ನಮ್ಮ ಹಿಡಿತದಲ್ಲಿಯೂ ಇರುವುದಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ