Agnipath scheme: ಭಾರಿ ಚರ್ಚೆಗೆ ಆಸ್ಪದ ನೀಡಿದ್ದ ಅಗ್ನಿಪಥ್ ಯೋಜನೆಗೆ ಸುಪ್ರೀಂ ಮಾನ್ಯತೆ! ಅದು ಸರ್ಕಾರದ ಏಕಪಕ್ಷೀಯ ಯೋಜನೆ ಅಲ್ಲ ಎಂದ ಸುಪ್ರೀಂ ಕೋರ್ಟ್
Supreme Court: ಅಗ್ನಿಪಥ್ ಯೋಜನೆಯ ಸಿಂಧುತ್ವವನ್ನು ಎತ್ತಿಹಿಡಿಯುವ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿಯೇ ಹೆಚ್ಚು ಮುಖ್ಯ ಎಂದೂ ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.
ಭಾರಿ ಚರ್ಚೆಗೆ ಆಸ್ಪದ ನೀಡಿದ್ದ ಅಗ್ನಿಪಥ್ ಯೋಜನೆಗೆ ಸುಪ್ರೀಂ ಕೋರ್ಟ್ ಮಾನ್ಯತೆ (Agnipath scheme valid) ನೀಡಿದೆ. ಕೇಂದ್ರ ಸರ್ಕಾರದ ಇಷ್ಟಾನುಸಾರದ, ಏಕಪಕ್ಷೀಯ ಯೋಜನೆ ಅದಲ್ಲ ಎಂದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಅಗ್ನಿಪಥ್ ಯೋಜನೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ (ಏಕಪಕ್ಷೀಯ) ಸೋಮವಾರ ಎತ್ತಹಿಡಿದಿದೆ. ಭಾರತೀಯ ರಕ್ಷಣ ಪಡೆಗಳಲ್ಲಿ ಯುವ ಕನತೆಯನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳುವ (Recruitment) ಯೋಜನೆಯ ವಿರುದ್ಧ ಸಲ್ಲಿಸಲಾಗಿದ್ದ ಎರಡು ಮೇಲ್ಮನವಿಗಳನ್ನು ಕೋರ್ಟ್ ತಿರಸ್ಕರಿಸಿದೆ. ಅಗ್ನಿಪಥ್ ಯೋಜನೆಯನ್ನು ಪರಿಚಯಿಸುವ ಮೊದಲು ರಕ್ಷಣಾ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿಯ ಹಕ್ಕನ್ನು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಹಿಂದೆ, ಯೋಜನೆ ಜಾರಿಯಾಗುತ್ತಿದ್ದಂತೆ ಫೆಬ್ರವರಿಯಲ್ಲಿ ದೆಹಲಿ ಹೈಕೋರ್ಟ್ ನಲ್ಲಿ ಯೋಜನೆಯನ್ನು ಪ್ರಶ್ನಿಸಲಾಗಿತ್ತು. ಆದರೆ ದೆಹಲಿ ಕೋರ್ಟ್ ಅಗ್ನಿಪಥ್ ಯೋಜನೆಯ ಸಿಂಧುತ್ವವನ್ನು ಎತ್ತಿಹಿಡಿದಿತ್ತು. ಆದಾದ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ಎರಡು ಮೇಲ್ಮನವಿಗಳನ್ನು ಸಲ್ಲಿಸಲಾಯಿತು. ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಶಸ್ತ್ರ ಪಡೆಗಳು ಸುಸಜ್ಜಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅಗ್ನಿಪಥ್ ಯೋಜನೆಯನ್ನು ರೂಪಿಸಲಾಗಿದೆ ಎಂದು ದೆಹಲಿ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು ಎಂಬುದು ಗಮನಾರ್ಹ.
Also Read:
Agniveer Recruitment: ಬದಲಾಗಿದೆ ಅಗ್ನಿವೀರರ ನೇಮಕಾತಿ ಪ್ರಕ್ರಿಯೆ; ಇನ್ನು ಆನ್ಲೈನ್ ಪ್ರವೇಶ ಪರೀಕ್ಷೆ ನಂತರವೇ ಆಯ್ಕೆ
ಕ್ಷಮಿಸಿ, ನಾವು ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಹೈಕೋರ್ಟ್ ಎಲ್ಲಾ ಅಂಶಗಳೊಂದಿಗೆ ವ್ಯವಹರಿಸಿದೆ ಎಂದು ಸುಪ್ರೀಂಕೋರ್ಟ್ ಗೋಪಾಲ್ ಕ್ರಿಶನ್ ಮತ್ತು ವಕೀಲ ಎಂಎಲ್ ಶರ್ಮಾ ಅವರು ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಿದ್ದ 2 ಪ್ರತ್ಯೇಕ ಅರ್ಜಿಗಳನ್ನು ಇಂದು ವಜಾಗೊಳಿಸಿತು.
ಉದ್ಯೋಗ ನೇಮಕಾತಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Mon, 10 April 23