ಬ್ರಿಟನ್ ಜತೆ ವ್ಯಾಪಾರ ಮಾತುಕತೆ ನಿಲ್ಲಿಸಲಾಗಿದೆ ಎಂಬ ವರದಿ ಆಧಾರರಹಿತ: ಭಾರತ ಸರ್ಕಾರ

ಯುಕೆಯಲ್ಲಿ ಸಿಖ್ ಪ್ರತಿಭಟನೆ ನಂತರ ಭಾರತೀಯರು ವ್ಯಾಪಾರದ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಬ್ರಿಟಿಷ್ ಮಾಧ್ಯಮ ಹೇಳಿದ್ದು ಮಾರ್ಚ್ 19 ರ ಘಟನೆಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ.

ಬ್ರಿಟನ್ ಜತೆ ವ್ಯಾಪಾರ ಮಾತುಕತೆ ನಿಲ್ಲಿಸಲಾಗಿದೆ ಎಂಬ ವರದಿ ಆಧಾರರಹಿತ: ಭಾರತ ಸರ್ಕಾರ
ಖಲಿಸ್ತಾನಿ ಬೆಂಬಲಿಗರ ಪ್ರತಿಭಟನೆ
Follow us
ರಶ್ಮಿ ಕಲ್ಲಕಟ್ಟ
|

Updated on:Apr 10, 2023 | 2:20 PM

ದೆಹಲಿ: ಕಳೆದ ತಿಂಗಳು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ (Indian High Commission) ಮೇಲೆ ದಾಳಿ ನಡೆಸಿದ ಸಿಖ್ ಉಗ್ರಗಾಮಿ ಗುಂಪನ್ನು ಖಂಡಿಸಲು ವಿಫಲವಾದ ಕಾರಣಕ್ಕಾಗಿ ಭಾರತವು ಬ್ರಿಟನ್‌ನೊಂದಿಗಿನ (United Kingdom) ವ್ಯಾಪಾರ ಮಾತುಕತೆಯಿಂದ ದೂರ ಸರಿದಿದೆ ಎಂಬ ವರದಿಗಳನ್ನು ಸರ್ಕಾರಿ ಮೂಲಗಳು ನಿರಾಕರಿಸಿವೆ. ವರದಿಗಳು ಆಧಾರರಹಿತ ಎಂದು ಭಾರತದ ಮೂಲಗಳು ತಿಳಿಸಿವೆ. ಬ್ರಿಟಿಷ್ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಯುಕೆ ಮೂಲದ ದಿ ಟೈಮ್ಸ್ ಸೋಮವಾರ ವರದಿ ಮಾಡಿದ ನಂತರ ಭಾರತ ಇದನ್ನು ನಿರಾಕರಿಸಿದೆ. ಯುಕೆಯಲ್ಲಿ ಸಿಖ್ ಪ್ರತಿಭಟನೆ ನಂತರ ಭಾರತೀಯರು ವ್ಯಾಪಾರದ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಬ್ರಿಟಿಷ್ ಮಾಧ್ಯಮ ಹೇಳಿದ್ದು ಮಾರ್ಚ್ 19 ರ ಘಟನೆಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ಅಂದಹಾಗೆ ಮಹಡಿಯ ಬಾಲ್ಕನಿಯಿಂದ ಭಾರತೀಯ ಧ್ವಜವನ್ನು ತೆಗೆದು ಹಾಕಿದ ಘಟನೆಗೆ ಪ್ರತಿಕ್ರಿಯಿಸಿದ್ದ ಭಾರತ ಬ್ರಿಟಿಷ್ ಪೊಲೀಸರ ಭದ್ರತೆಯ ಕೊರತೆಯಿಂದ ಇದು ಸಂಭವಿಸಿದೆ ಎಂದಿತ್ತು.

ಬ್ರಿಟಿಷ್ ರಾಜಕಾರಣಿಗಳು ಈ ದಾಳಿಯನ್ನು ಖಂಡಿಸಿದ್ದು ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಕನ್ಸರ್ವೇಟಿವ್ ಮತ್ತು ಲೇಬರ್ ಸಂಸದರು ಪ್ರಧಾನ ಮಂತ್ರಿ ರಿಷಿ ಸುನಕ್ ಅವರ ಸರ್ಕಾರಕ್ಕೆ ಕರೆ ನೀಡಿದ್ದಾರೆ.

ದಿ ಟೈಮ್ ಮೂಲಗಳ ಪ್ರಕಾರ, ವ್ಯಾಪಾರ ಮಾತುಕತೆಗಳನ್ನು ಪುನರಾರಂಭಿಸುವ ಪ್ರಯತ್ನದಲ್ಲಿ ಯುಕೆ ಗೃಹ ಸಚಿವಾಲಯವು ಆ ದೇಶದಲ್ಲಿ ಖಲಿಸ್ತಾನಿ ನಾಯಕರು ಮತ್ತು ಗುಂಪುಗಳ ಮೇಲೆ ದಮನವನ್ನು ಯೋಜಿಸುತ್ತಿದೆ.

ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ವಿರುದ್ಧ ಭಾರೀ ದಮನದ ವಿರುದ್ಧ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ಮಾರ್ಚ್ 19 ರಂದು ಖಾಲಿಸ್ತಾನ್ ಸಹಾನುಭೂತಿಗಳು ಪ್ರತಿಭಟನೆ ನಡೆಸಿದ್ದರು. ಅಂದು ಪ್ರತಿಭಟನಾಕಾರರು ಕಟ್ಟಡದ ಮೊದಲ ಮಹಡಿಯ ಬಾಲ್ಕನಿಯಿಂದ ಭಾರತೀಯ ಧ್ವಜವನ್ನು ಕೆಳಗಿಳಿಸಿದ್ದರು. ಇದಾದ ನಂತರ ಭಾರತೀಯ ಹೈಕಮಿಷನ್ ಅದಕ್ಕಿಂತ ದೊಡ್ಡ ಧ್ವಜವನ್ನು ಅಲ್ಲಿ ಹಾಕಿತ್ತು.

ಯುಕೆಯಲ್ಲಿ ಖಲಿಸ್ತಾನ್ ಉಗ್ರವಾದವನ್ನು ಖಂಡಿಸುವ ಸಾರ್ವಜನಿಕ ಪ್ರದರ್ಶನದ ನಂತರ ಭಾರತೀಯರು ವ್ಯಾಪಾರದ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ವೈಟ್‌ಹಾಲ್ ಮೂಲವೊಂದು ಹೇಳಿರುವುದಾಗಿ ಟೈಮ್ಸ್ ವರದಿ ಮಾಡಿತ್ತು.

ಇದನ್ನೂ ಓದಿ: Papalpreet Singh: ಖಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್​ ಸಿಂಗ್​ನ ಆಪ್ತ ಪಪಲ್​ಪ್ರೀತ್​ ಸಿಂಗ್ ಬಂಧನ

ಲಂಡನ್‌ನಲ್ಲಿರುವ ಭಾರತೀಯ ಮಿಷನ್‌ನಲ್ಲಿ ನಡೆದ ಘಟನೆಯ ಒಂದು ದಿನದ ನಂತರ, ವಿದೇಶಾಂಗ ಸಚಿವಾಲಯವು ದೆಹಲಿಯಲ್ಲಿರುವ ಬ್ರಿಟನ್‌ನ ಹಿರಿಯ ರಾಜತಾಂತ್ರಿಕರನ್ನು ಕರೆಸಿತ್ತು. ಸಚಿವಾಲಯವು ಹೈಕಮಿಷನ್ ಆವರಣದಲ್ಲಿ ಭದ್ರತೆಯ ಅನುಪಸ್ಥಿತಿ ಬಗ್ಗೆ ವಿವರಣೆಯನ್ನು ಕೋರಿತು.

ಸ್ವೀಕಾರಾರ್ಹವಲ್ಲದ ಹಿಂಸಾಚಾರದ ನಂತರ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ದೇಶವು ಭದ್ರತೆಯನ್ನು ಪರಿಶೀಲಿಸುತ್ತದೆ ಎಂದು ಬ್ರಿಟಿಷ್ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:50 pm, Mon, 10 April 23