ಭಾರತ ಜೋಡೋ ಯಾತ್ರೆಯಲ್ಲಿ ಸಚಿನ್ ಪೈಲಟ್ ರಾಜಸ್ಥಾನ ಸಿಎಂ ಆಗಲಿ ಎಂದು ಘೋಷಣೆ ಕೂಗಿದ ಕಾರ್ಯಕರ್ತರು

ಸಚಿನ್ ಪೈಲಟ್ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವಿನ ಭಿನ್ನಾಭಿಪ್ರಾಯಗಳ ಊಹಾಪೋಹಗಳು ಆಗಾಗ ಕೇಳಿ ಬರುತ್ತಿದ್ದು ಪಕ್ಷಕ್ಕೆ ಆಂತರಿಕ ಕಲಹವನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ಭಾರತ ಜೋಡೋ ಯಾತ್ರೆಯಲ್ಲಿ ಸಚಿನ್ ಪೈಲಟ್ ರಾಜಸ್ಥಾನ ಸಿಎಂ ಆಗಲಿ ಎಂದು ಘೋಷಣೆ ಕೂಗಿದ ಕಾರ್ಯಕರ್ತರು
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಜತೆ ಸಚಿನ್ ಪೈಲಟ್ ಮತ್ತು ಗೆಹ್ಲೋಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 18, 2022 | 12:55 PM

ರಾಹುಲ್ ಗಾಂಧಿಯವರ (Rahul Gandhi) ಭಾರತ್ ಜೋಡೋ ಯಾತ್ರೆ (Bharat Jodo Yatra)100 ದಿನಗಳನ್ನು ಪೂರೈಸಿದೆ. ಭಾನುವಾರ, ರಾಹುಲ್ ಗಾಂಧಿ ರಾಜಸ್ಥಾನದ ದೌಸಾದಿಂದ ದಿನದ ಪಾದಯಾತ್ರೆಯನ್ನು ಪ್ರಾರಂಭಿಸುತ್ತಿದ್ದಂತೆ, ಸಚಿನ್ ಪೈಲಟ್ (Sachin Pilot) ಅವರನ್ನು ಬೆಂಬಲಿಸುವ ನಿರೀಕ್ಷಿತ ಘೋಷಣೆಗಳು ಕೇಳಿಬಂದವು ಎಂದು ವರದಿಯಾಗಿದೆ. ಸಚಿನ್ ಪೈಲಟ್ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವಿನ ಭಿನ್ನಾಭಿಪ್ರಾಯಗಳ ಊಹಾಪೋಹಗಳು ಆಗಾಗ ಕೇಳಿ ಬರುತ್ತಿದ್ದು ಪಕ್ಷಕ್ಕೆ ಆಂತರಿಕ ಕಲಹವನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದ ವಿಡಿಯೊದಲ್ಲಿ, ಪಕ್ಷದ ಧ್ವಜಗಳನ್ನು ಹಿಡಿದುಕೊಂಡಿದ್ದ ಕೆಲವರು “ಸಚಿನ್ ಪೈಲಟ್ ಜಿಂದಾಬಾದ್. (ಸಚಿನ್ ಪೈಲಟ್ ಜಯವಾಗಲಿ). ಹಮಾರಾ ಸಿಎಂ ಕೈಸಾ ಹೋ? ಸಚಿನ್ ಪೈಲಟ್ ಜೈಸಾ ಹೋ. (ನಮ್ಮ ಮುಖ್ಯಮಂತ್ರಿ ಹೇಗಿರಬೇಕು? ಸಚಿನ್ ಪೈಲಟ್​​ನಂತಿರಬೇಕು ) ಎಂದು ಕೂಗಿದ್ದಾರೆ. ಕಾಂಗ್ರೆಸ್‌ನ ಮೆಗಾ ಪಾದಯಾತ್ರೆ ನಡೆಸುತ್ತಿರುವ ಎಂಟನೇ ರಾಜ್ಯವಾಗಿದೆ ರಾಜಸ್ಥಾನ. ಬಹು ರಾಜ್ಯ ಚುನಾವಣೆಗಳು ಮತ್ತು 2024 ರ ರಾಷ್ಟ್ರೀಯ ಚುನಾವಣೆಗಳ ದೃಷ್ಟಿಯಿಂದ ಕೈಗೊಳ್ಳಲಾಗುತ್ತಿರುವ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರವರೆಗೆ ನಡೆಸುತ್ತಿರುವ ಈ ಪಾದಯಾತ್ರೆ ಈ ಹಿಂದೆ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ವಿವಾದಗಳನ್ನು ಎದುರಿಸಿದೆ. ಒಂದು ಸಿನಿಮಾ ಹಾಡು ಬಳಕೆಗೆ ಸಂಬಂಧಿಸಿದಂತೆ ಒಂದು ವಿವಾದವಾದರೆ, ಇನ್ನೊಂದು ಪಾಕಿಸ್ತಾನಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಕೂಗಲಾಗಿದೆ ಎಂಬ ಆರೋಪವಿದೆ.

ಇದು ಇತ್ತೀಚೆಗೆ ರಾಜಸ್ಥಾನವನ್ನು ಪ್ರವೇಶಿಸಿದಾಗ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎನ್​​ಡಿಟಿವಿಗೆ ನೀಡಿದ  ಸಂದರ್ಶನದಲ್ಲಿ ತಮ್ಮ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನ್ನು “ಗದ್ದರ್ (ದೇಶದ್ರೋಹಿ)” ಎಂದು ಕರೆದಿದ್ದರು.

ಇದನ್ನೂ ಓದಿ: ತ್ರಿಪುರಾ,ಮೇಘಾಲಯಕ್ಕೆ ಇಂದು ನರೇಂದ್ರ ಮೋದಿ ಭೇಟಿ; ₹6,800 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ

ಶುಕ್ರವಾರ, ಪಕ್ಷವು ಯಾತ್ರೆಯ 100 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ, ಯಾರನ್ನೂ ಬಾಯ್ಮುಚ್ಚಿಸುವುದು ಪಕ್ಷದ ಸಂಪ್ರದಾಯವಲ್ಲ ಮತ್ತು ಇದು ರಾಜಸ್ಥಾನದಲ್ಲಿ ಮಾತ್ರವಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ನಮ್ಮ ಪಕ್ಷ ಫ್ಯಾಸಿಸ್ಟ್, ಸರ್ವಾಧಿಕಾರಿ ಪಕ್ಷವಲ್ಲ. ನಾವು ಮಾತುಕತೆ ಮತ್ತು ಚರ್ಚೆಗೆ ಮುಕ್ತವಾಗಿದ್ದೇವೆ. ನಾವು ಇದನ್ನು ಸಹಿಸಿಕೊಳ್ಳುತ್ತೇವೆ. ಪಕ್ಷದ ನಾಯಕರು ಏನಾದರೂ ಹೇಳಲು ಬಯಸಿದರೆ ನಾವು ಅವರನ್ನು ಹೆದರುವುದಿಲ್ಲ ಮತ್ತು ಅವರ ಬಾಯ್ಮುಚ್ಚಿಸುವುದಿಲ್ಲ ಎಂಬುದು ಕಾಂಗ್ರೆಸ್‌ನ ಸಂಪ್ರದಾಯವಾಗಿದೆ. ನಿಸ್ಸಂಶಯವಾಗಿ, ಭಿನ್ನಾಭಿಪ್ರಾಯವು ಪಕ್ಷಕ್ಕೆ ಹೆಚ್ಚು ಹಾನಿ ಮಾಡಬಾರದು ಎಂದು ಸುದ್ದಿಗಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ