AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶತಮಾನಗಳಷ್ಟು ಹಳೆಯದಾದ ಕಾಚಿಗುಡ ರೈಲು ನಿಲ್ದಾಣಕ್ಕೆ ಶಾಶ್ವತ ವಿದ್ಯುತ್​ ದೀಪಾಲಂಕಾರ: ಸೋಮವಾರ ಲೋಕಾರ್ಪಣೆ

ಶತಮಾನಗಳಷ್ಟು ಹಳೆಯದಾದ ಕಾಚಿಗುಡ ರೈಲು ನಿಲ್ದಾಣಕ್ಕೆ 2.3 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಜೂನ್ 9 ರಂದು ಕೇಂದ್ರ ಸಚಿವರು ಲೋಕಾರ್ಪಣೆಗೊಳಿಸಲಿದ್ದಾರೆ. ಈ ದೀಪಗಳು ನಿಲ್ದಾಣದ ಸೌಂದರ್ಯವನ್ನು ಹೆಚ್ಚಿಸಿ, ಅದರ ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿಸುತ್ತವೆ. 785 ಲೈಟಿಂಗ್ ಫಿಕ್ಸ್ಚರ್‌ಗಳು ನಿಲ್ದಾಣದ ಭವ್ಯವಾದ ವಾಸ್ತುಶಿಲ್ಪವನ್ನು ಪ್ರದರ್ಶಿಸುತ್ತವೆ.

ಶತಮಾನಗಳಷ್ಟು ಹಳೆಯದಾದ ಕಾಚಿಗುಡ ರೈಲು ನಿಲ್ದಾಣಕ್ಕೆ ಶಾಶ್ವತ ವಿದ್ಯುತ್​ ದೀಪಾಲಂಕಾರ: ಸೋಮವಾರ ಲೋಕಾರ್ಪಣೆ
ಕಾಚೆಗುಡ ರೈಲು ನಿಲ್ದಾಣ
ವಿವೇಕ ಬಿರಾದಾರ
|

Updated on:Jun 08, 2025 | 9:14 PM

Share

ಹೈದರಾಬಾದ್​, ಜೂನ್​ 08: ಶತಮಾನಗಳಷ್ಟು ಹಳೆಯದಾದ ಕಾಚಿಗುಡ ರೈಲು ನಿಲ್ದಾಣದ ಮುಂಭಾಗವು ಅತ್ಯಾಧುನಿಕ ಶಾಶ್ವತ ವಿದ್ಯುತ್​ ದೀಪಾಲಂಕಾರದಿಂದ (Kacheguda Facade Lighting) ಶೃಂಗಾರಗೊಂಡಿದೆ. ಈ ವಿದ್ಯುತ್​ ದೀಪಾಲಂಕಾರವನ್ನು ಸೋಮವಾರ (ಜೂ.9) ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್​ ರೆಡ್ಡಿ (Kishn Reddy) ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಐತಿಹಾಸಿಕ ಕಾಚಿಗುಡ ರೈಲು ನಿಲ್ದಾಣಕ್ಕೆ 2.3 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯುತ್​ ದೀಪಗಳನ್ನು ಹಾಕಲಾಗಿದೆ. ಈ ವಿದ್ಯುತ್​ ದೀಪಗಳು ರೈಲು ನಿಲ್ದಾಣ ಮುಂಭಾಗದ ಸೌಂದರ್ಯವನ್ನು ಹೆಚ್ಚಿಸಿವೆ. ಈ ದೀಪಾಲಂಕಾರದಿಂದ ಸಾರ್ವಜನಿಕರು ತಮ್ಮ ಸಾಂಸ್ಕೃತಿಕ ಮತ್ತು ಐತಿಹಾಸಿಕ ಕಟ್ಟಡದ ಮಹತ್ವದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಲಿದ್ದಾರೆ.

ಕಾಚಿಗುಡ ರೈಲು ನಿಲ್ದಾಣವನ್ನು 1916ರಲ್ಲಿ ನಿಜಾಮರ ಕಾಲದಲ್ಲಿ ಗೋಥಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಂತಹ ಐತಿಹಾಸಿಕ ರೈಲು ನಿಲ್ದಾಣಕ್ಕೆ 785 ಲೈಟಿಂಗ್​ ಫಿಕ್ಸ್ಚರ್ಸ್​ಗಳಿಂದ ಅಲಂಕಾರ ಮಾಡಲಾಗಿದೆ. ಈ ವಿದ್ಯುತ್​ ದೀಪಗಳು ನಿಲ್ದಾಣದ ಭವ್ಯ ವಾಸ್ತುಶಿಲ್ಪ ಮತ್ತು ಪರಂಪರೆಯ ಆಕರ್ಷಣೆಯನ್ನು ಹೆಚ್ಚಿಸುತ್ತವೆ.

ಕಾಚಿಗುಡ ರೈಲು ನಿಲ್ದಾಣ ನಗರದ ಮಧ್ಯ ಭಾಗದಲ್ಲಿದೆ. ಅಲ್ಲದೆ, ಹೈದರಾಬಾದ್​ನ ಪ್ರಮುಖ ಟರ್ಮಿನಲ್​ಗಳಲ್ಲಿ ಒಂದಾಗಿದ್ದು, ನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಬಂದು ಹೋಗುತ್ತಾರೆ. ವಿದ್ಯುತ್ ದೀಪಾಲಂಕಾರದಿಂದ ಈ ರೈಲು ನಿಲ್ದಾಣದ ಐತಿಹಾಸಿಕ ಮಹತ್ವ ಬಗ್ಗೆ ಜನರು ತಿಳಿದುಕೊಳ್ಳಲು ಮುಂದಾಗುತ್ತಾರೆ ಮತ್ತು ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ
Image
ದಸರಾ ಹಬ್ಬಕ್ಕೆ ಕೊಮುರವೆಲ್ಲಿ ರೈಲು ನಿಲ್ದಾಣ ಉದ್ಘಾಟನೆ;ಸಚಿವ ಕಿಶನ್ ರೆಡ್ಡಿ
Image
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
Image
ನೈಋತ್ಯ ರೈಲ್ವೆ ವಲಯದ 15 ನಿಲ್ದಾಣಗಳಿಗೆ ಸ್ಮಾರ್ಟ್​ ಟಚ್​
Image
ಅಭಿವೃದ್ಧಿ ಮಾಡಿದ ಸ್ಥಳದಲ್ಲೇ ಮತ್ತೊಮ್ಮೆ ಕಾಮಗಾರಿ; ಅಮೃತ್ ನಗರೋತ್ಥಾನ ಯೋಜನೆಯಡಿ 10 ಕೋಟಿ ಅನುದಾನಕ್ಕೆ ಕನ್ನ

ಕಾಚಿಗುಡ ರೈಲು ನಿಲ್ದಾಣವು ಹಸಿರು ರೈಲು ನಿಲ್ದಾಣವಾಗಿದೆ. ಹಸಿರು ಇಂಧನ ಬಳಕೆಯ ಮೂಲಕ ಪರಿಸರ ಸುಸ್ಥಿರತೆಗೆ ಅದರ ಬದ್ಧತೆಗಾಗಿ ರೈಲು ನಿಲ್ದಾಣಕ್ಕೆ ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್ಸ್‌ (IGBC) ಪ್ಲಾಟಿನಂ ರೇಟಿಂಗ್ ನೀಡಿದೆ. ಇಷ್ಟೇ ಅಲ್ಲದೆ, ಇದನ್ನು ಇಂಧನ ದಕ್ಷತೆಯುಳ್ಳ ರೈಲು ನಿಲ್ದಾಣ ಎಂದೂ ಭಾರತೀಯ ರೈಲ್ವೆ ಗುರುತಿಸಿದೆ. ಗಮನಾರ್ಹವಾಗಿ, ಇದು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪರಿಚಯಿಸಿದ ಮೊದಲ ರೈಲು ನಿಲ್ದಾಣವಾಗಿದೆ.

ಇದನ್ನೂ ನೋಡಿ: ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ

ಇದಲ್ಲದೆ, ಅಮೃತ್ ಭಾರತ್ ಯೋಜನೆಯಡಿಯಲ್ಲಿ, ಈ ನಿಲ್ದಾಣವನ್ನು 421.66 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲು ಸರ್ಕಾರ ಮುಂದಾಗಿದೆ. ಈ ಮೂಲಕ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದು ಮತ್ತು ಸಾಂಪ್ರದಾಯಿಕ ಪರಂಪರೆಯನ್ನು ಸಂರಕ್ಷಿಸುವುದು ಮುಖ್ಯ ಗುರಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:49 pm, Sun, 8 June 25

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ