ಹೈದರಾಬಾದ್: ಬಂಜಾರಾ ಹಿಲ್ಸ್ನಲ್ಲಿ ₹3.35 ಕೋಟಿ ನಗದು ವಶ, ಮೂವರ ಬಂಧನ
ರೋಡ್ ನಂಬರ್ 3ರಲ್ಲಿ ವಾಹನ ತಪಾಸಣೆ ವೇಳೆ ಅನುಮಾನಾಸ್ಪದ ಕಿಯಾ ಕಾರು ಪತ್ತೆಯಾಗಿದ್ದು, ಅದರಿಂದ ₹3.35 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಹಣವನ್ನು ಹವಾಲಾ ಹಣ ಎಂದು ಗುರುತಿಸಲಾಗಿದೆ ಎಂದು ಡೇವಿಸ್ ಹೇಳಿದ್ದಾರೆ. ಹನುಮಂತ ರೆಡ್ಡಿ, ಬಚ್ಚಲ ಪ್ರಭಾಕರ್, ಮಂಡಲ್ ಶ್ರೀರಾಮುಲ ರೆಡ್ಡಿ ಮತ್ತು ಉದಯ್ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ
ಹೈದರಾಬಾದ್ ಅಕ್ಟೋಬರ್ 10: ಹೈದರಾಬಾದ್ ಪೊಲೀಸರು (Hyderabad Police) ಮಂಗಳವಾರ ಬಂಜಾರಾ ಹಿಲ್ಸ್ (Banjara Hills) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ₹3.35 ಕೋಟಿ ರೂಪಾಯಿ ಮೌಲ್ಯದ ನಗದನ್ನು ವಶಪಡಿಸಿಕೊಂಡಿದ್ದು, ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಟಿವಿ 9 ತೆಲುಗು ವರದಿ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ ಪಶ್ಚಿಮ ವಲಯ ಡಿಸಿಪಿ ಜೋಯಲ್ ಡೇವಿಸ್ ಮಾತನಾಡಿ, ಸೋಮವಾರದಿಂದ ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ವ್ಯಾಪಕವಾಗಿ ವಾಹನ ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ರೋಡ್ ನಂಬರ್ 3ರಲ್ಲಿ ವಾಹನ ತಪಾಸಣೆ ವೇಳೆ ಅನುಮಾನಾಸ್ಪದ ಕಿಯಾ ಕಾರು ಪತ್ತೆಯಾಗಿದ್ದು, ಅದರಿಂದ ₹3.35 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಹಣವನ್ನು ಹವಾಲಾ ಹಣ ಎಂದು ಗುರುತಿಸಲಾಗಿದೆ ಎಂದು ಡೇವಿಸ್ ಹೇಳಿದ್ದಾರೆ. ಹನುಮಂತ ರೆಡ್ಡಿ, ಬಚ್ಚಲ ಪ್ರಭಾಕರ್, ಮಂಡಲ್ ಶ್ರೀರಾಮುಲ ರೆಡ್ಡಿ ಮತ್ತು ಉದಯ್ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ.ಈ ಗ್ಯಾಂಗ್ ವಿವಿಧ ಪ್ರದೇಶಗಳಲ್ಲಿ ಹವಾಲಾ ಹಣವನ್ನು ಸಾಗಿಸುತ್ತಿತ್ತು ಎಂದು ಅವರು ಹೇಳಿದರು.
ಮಂಗಳವಾರ, ಪ್ರಭಾಕರ್ ಅವರ ಆದೇಶದ ಮೇರೆಗೆ, ಹನುಮಂತ ರೆಡ್ಡಿ ಮತ್ತು ಇತರರು ಬೇಗಂಬಜಾರ್, ನಾಂಪಲ್ಲಿ, ಗೋಶಾಮಹಲ್ ಮತ್ತು ಜುಬಿಲಿ ಹಿಲ್ಸ್‌ನಿಂದ ಹವಾಲಾ ಹಣ ವಶ ಪಡಿಸಿದ್ದಾರೆ. ಬಂಜಾರ ಹಿಲ್ಸ್‌ನ ಸಾಯಿಕೃಪಾ ಬಿಲ್ಡಿಂಗ್ ಪ್ಲಾಟ್ ನಂ.583, ಅರೋರಾ ಕಾಲೋನಿಯಲ್ಲಿರುವ ತಮ್ಮ ಕಚೇರಿಗೆ ಹವಾಲಾ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಇದನ್ನು ವಶಪಡಿಸಿಕೊಂಡಿದ್ದೇವೆ. ಹವಾಲಾ ಹಣಕ್ಕಾಗಿ 25,000 ರೂ.ಗಳನ್ನು ಕಮಿಷನ್ ನೀಡಲಾಗುತ್ತದೆ ಎಂದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಭಾರತೀಯ ಅಥ್ಲೀಟ್‌ಗಳ ಕಠಿಣ ಪರಿಶ್ರಮ ಮತ್ತು ಸಾಧನೆಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ಮಂಗಳವಾರ ಬೆಳಗ್ಗೆ ಅದಿಲಾಬಾದ್ ಮತ್ತು ಸೆರಿಲಿಂಗಂಪಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಮಹಿಳೆಯರಿಗೆ ಪ್ರೆಶರ್ ಕುಕ್ಕರ್ ವಿತರಿಸಿದ್ದು, ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅದೇ ವೇಳೆ ಹೈದರಾಬಾದ್ ಮತ್ತು ಇತರ ಜಿಲ್ಲೆಗಳ ವಿವಿಧೆಡೆ ನಗದು ವಶಪಡಿಸಿಕೊಳ್ಳಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ