ತಾನು ಸಂಬಂಧ ಹೊಂದಿದ್ದವನಿಗೆ ಮಗಳ ಕೊಟ್ಟು ಮದುವೆ ಮಾಡಿದ ತಾಯಿ, ಯುವತಿ ಆತ್ಮಹತ್ಯೆ

ತಾಯಿಯೊಬ್ಬಳು ತಾನು ಅಕ್ರಮ ಸಂಬಂಧ ಹೊಂದಿದವನೊಂದಿಗೆ ಮಗಳನ್ನು ಬಲವಂತವಾಗಿ ಮದುವೆ(Marriage) ಮಾಡಿಸಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಈ ಮದುವೆಯಿಂದ ಮನನೊಂದು 19 ವರ್ಷದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. 17 ವರ್ಷದ ಕಿರಿಯ ಮಗಳು ನೀಡಿದ ದೂರಿನ ಆಧಾರದ ಮೇಲೆ, ತನ್ನ ಮಗಳ ಆತ್ಮಹತ್ಯೆಗೆ ತಾಯಿಯೇ ಕಾರಣ ಎಂದು ತಿಳಿದುಬಂದಿದ್ದು ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಾನು ಸಂಬಂಧ ಹೊಂದಿದ್ದವನಿಗೆ ಮಗಳ ಕೊಟ್ಟು ಮದುವೆ ಮಾಡಿದ ತಾಯಿ, ಯುವತಿ ಆತ್ಮಹತ್ಯೆ
ಸಾವು
Image Credit source: Hindustan Times

Updated on: May 04, 2025 | 1:19 PM

ಹೈದರಾಬಾದ್, ಮೇ 04: ತಾಯಿಯೊಬ್ಬಳು ತಾನು ಅಕ್ರಮ ಸಂಬಂಧ ಹೊಂದಿದವನೊಂದಿಗೆ ಮಗಳನ್ನು ಬಲವಂತವಾಗಿ ಮದುವೆ(Marriage) ಮಾಡಿಸಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಈ ಮದುವೆಯಿಂದ ಮನನೊಂದು 19 ವರ್ಷದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

17 ವರ್ಷದ ಕಿರಿಯ ಮಗಳು ನೀಡಿದ ದೂರಿನ ಆಧಾರದ ಮೇಲೆ, ತನ್ನ ಮಗಳ ಆತ್ಮಹತ್ಯೆಗೆ ತಾಯಿಯೇ ಕಾರಣ ಎಂದು ತಿಳಿದುಬಂದಿದ್ದು ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರಿನಲ್ಲಿರುವ ವಿವರಗಳ ಪ್ರಕಾರ, ಹುಡುಗಿಯ ತಾಯಿ ತಂದೆಯಿಂದ ಬೇರ್ಪಟ್ಟ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ಒಬ್ಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ.

ಆಕೆಯ ತಾಯಿ ಅನಿತಾ ಪೆರಂ ನವೀನ್ ಕುಮಾರ್ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರು. ಅವರು ಆಗಾಗ ತಮ್ಮ ಮನೆಗೆ ಭೇಟಿ ನೀಡುತ್ತಿದ್ದ ಎಂದು ಬಾಲಕಿ ಹೇಳಿಕೊಂಡಿದ್ದಾಳೆ. ತಮ್ಮ ಸಂಬಂಧವನ್ನು ಮುಂದುವರಿಸಲು, ತಾಯಿ ತನ್ನ ಹಿರಿಯ ಮಗಳನ್ನು ತನ್ನ ಪ್ರಿಯಕರನಿಗೆ ಮದುವೆ ಮಾಡಿಕೊಟ್ಟರು.

ಇದನ್ನೂ ಓದಿ
ಎರಡೇ ವಾರಕ್ಕೆ ಮುರಿದು ಬಿತ್ತು ಹಿಂದೂ ಯುವಕ, ಮುಸ್ಲಿಂ ಯುವತಿ ಪ್ರೇಮ ವಿವಾಹ!
ವರ್ಷದ ಈ ತಿಂಗಳಿನಲ್ಲಿ ಮದುವೆ ಮಾಡಿಕೊಳ್ಳಲ್ಲ… ಏಕೆ ಗೊತ್ತಾ?
ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತ
ಅನ್ಯಕೋಮಿನವನೊಂದಿಗೆ ಹಿಂದೂ ಯುವತಿ ಮದುವೆ: ವಿವಾಹ ಮಾಡಿಸಿದ್ದವನಿಗೆ ಬೆದರಿಕೆ

ಈ ಪರಿಸ್ಥಿತಿಯಿಂದ ಬೇಸತ್ತು ಹಿರಿಯ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಿರಿಯ ಮಗಳು ಹೇಳಿಕೊಂಡಿದ್ದಾರೆ. ಮೃತ ಮಹಿಳೆ ಹೈದರಾಬಾದ್‌ನಲ್ಲಿರುವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮದುವೆಯ ನಂತರವೂ ತನ್ನ ತಾಯಿಯೊಂದಿಗೆ ತನ್ನ ಗಂಡನ ಸಂಬಂಧದ ಬಗ್ಗೆ ತಿಳಿದಾಗ ಆಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮತ್ತಷ್ಟು ಓದಿ: ಭಾವಿ ಅಳಿಯನ ಅತ್ತೆ ಪರಾರಿ ಪ್ರಕರಣ, ಎಲ್ಲವೂ ಸರಿ ಇದ್ದಿದ್ರೆ ಇಂದು ಶಿವಾನಿ ಮದುವೆ ನಡೀತಿತ್ತು

ತನ್ನ ಸಹೋದರಿ ತನ್ನ ಗಂಡನ ಮನೆ ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕಿದ್ದಳು ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ.ಗಂಡನಿಂದ ದೂರವಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾಯಿ ಮಗಳಿಗೆ ಬೆದರಿಕೆ ಹಾಕಿದ್ದಳು.

ಮೀರ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಆರೋಪಿ ಮಹಿಳೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 306 ಮತ್ತು 420 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. Newsd.in ಈ ಕುರಿತು ವರದಿ ಮಾಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ