AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರೆದೊಯ್ಯಲು ಗಡಿಗೆ ಬಾರದ ಪಾಕ್​ ಪತಿರಾಯ: ಮದ್ವೆಗೆಂದು ಮೈಸೂರಿಗೆ ಬಂದಿದ್ದ ಮಹಿಳೆ ತೊಳಲಾಟ

ಪೆಹಲ್ಗಾಮ್ ಹತ್ಯೆ ಪ್ರಕರಣದ ಬಳಿಕ ಭಾರತದಲ್ಲಿ ಪಾಕ್ ಪ್ರಜೆಗಳಿಗೆ ಭಾರತ ವಾಪಸ್ಸು ಹೋಗುವುದಕ್ಕೆ ಗಡುವು ನೀಡಿದೆ. ಈ ಮಧ್ಯೆ ಪಾಕ್ ಗೆ ಮದುವೆಯಾಗಿದ್ದ ಮೈಸೂರಿನ ಯುವತಿ ಮದುವೆಗೆ ಬಂದು, ಪಾಕಿಸ್ತಾನಕ್ಕೆ ಹೋಗಲಾಗದೆ, ಇಲ್ಲೂ ಇರಲಾಗದೆ ತನ್ನ ಮೂವರು ಮಕ್ಕಳ ಜೊತೆಗೆ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಮಕ್ಕಳು ಪಾಕ್ ಪ್ರಜೆಗಳಾದ್ರೆ, ಈಕೆಗೆ ಪಾಕಿಸ್ಥಾನ ಪೌರತ್ವ ನೀಡದೆ ಇರೋದು ಸಮಸ್ಯೆಗೆ ಕಾರಣವಾಗಿದೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಕರೆದೊಯ್ಯಲು ಗಡಿಗೆ ಬಾರದ ಪಾಕ್​ ಪತಿರಾಯ: ಮದ್ವೆಗೆಂದು ಮೈಸೂರಿಗೆ ಬಂದಿದ್ದ ಮಹಿಳೆ ತೊಳಲಾಟ
Mysuru Woman
ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ|

Updated on: May 04, 2025 | 12:15 PM

Share

ಮೈಸೂರು, (ಮೇ 04): ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ನರಮೇಧ (Pahalgam Terror Attack )ಇದೀಗ ಪಾಕಿಸ್ತಾನದ  (Pakistan)ಮೇಲೆ ಭಾರತ ಯುದ್ಧ ಸಾರೋ ತವಕದಲ್ಲಿದೆ. ಈ ನಡುವೆ ಭಾರತದಲ್ಲಿರುವ ಪಾಕ್ ಪ್ರಜೆಗಳನ್ನು ವಾಪಸ್ಸು ಪಾಕಿಸ್ಥಾನಕ್ಕೆ ಹಿಂತಿರುಗುವಂತೆ ಹೇಳಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ, ತಂಗಿಯ ಮದುವೆಗೆಂದು(Marriage)  ಪಾಕಿಸ್ತಾನದಿಂದ ತನ್ನ ಮೂವರು ಮಕ್ಕಳೊಂದಿಗೆ ಮೈಸೂರಿಗೆ ಬಂದಿರುವ ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಮೈಸೂರಿನ ರಾಜೀವ್‌ ನಗರದ ನಿವಾಸಿ ರಂಷಾ ಎಂಬಾಕೆ ಪಾಕ್ ಪ್ರಜೆ ಮಹಮದ್ ಫಾರೂಕ್ ಜೊತೆ 8 ವರ್ಷಗಳ ಹಿಂದೆ ಮದುವೆಯಾಗಿದ್ದಳು. ಈಕೆಗೆ 2 ವರ್ಷದ ಒಂದು ಮಗು 4 ವರ್ಷದ ಒಂದು ಮಗು ಹಾಗೂ 7 ವರ್ಷದ ಒಂದು ಮಗುವಿದೆ. ಇದೀಗ ಭಾರತ ಹೊರಡಿಸಿರುವ ಆದೇಶದಿಂದ ಈಕೆ ಈಗ ಇಲ್ಲಿಯೂ ಇರಲಾಗದೆ, ಅಲ್ಲಿಗೂ ಹೋಗಲಾರದೆ ಅತಂತ್ರವಾಗಿದ್ದಾಳೆ

ರಂಷಾಗೆ ಪಾಕಿಸ್ತಾನ ವಿಸಾ ತೊಂದರೆಯಾದ ಹಿನ್ನೆಲೆ ಪಾಕಿಸ್ತಾನಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಇತ್ತ ಮೂರು ಮಕ್ಕಳ ವಿಸಾ ಜುಲೈವರೆಗೆ ಇದ್ದರೂ ಕೇಂದ್ರ ಸರ್ಕಾರದ ಆದೇಶ ಹಿನ್ನೆಲೆ ವಾಪಸ್ ಕಳುಹಿಸಲಾಗುತ್ತಿದೆ. ಆದರೆ ಮಕ್ಕಳು ಜೊತೆ ತಾಯಿಯೂ ಪಾಕಿಸ್ತಾನಕ್ಕೆ ಬರುವುದಾದರೆ ಸೇರಿಸಿಕೊಳ್ಳುವುದಾಗಿ ಗಂಡ ಷರತ್ತು ಹಾಕಿದ್ದಾನಂತೆ. ಗಂಡನ ಒಪ್ಪಿಗೆಗಾಗಿ ಮೂರು ದಿನಗಳ ಗಡಿಯಲ್ಲೇ ರಂಷಾ ಹಾಗೂ ಮಕ್ಕಳು‌ ಕಾದು ಕುಳಿತಿದ್ದರು. ಈ ಬಗ್ಗೆ ಟಿವಿ9 ವರದಿ ಸಹಾ ಪ್ರಸಾರ ಮಾಡಿತ್ತು. ಇನ್ನು ಮಹಿಳೆಯ ಪತಿ ಫಾರೂಖ್ ಪಾಕಿಸ್ತಾನ ವಿಧಾನಸಭೆಯಲ್ಲಿ ಉದ್ಯೋಗದಲ್ಲಿದ್ದಾನಂತೆ. ಅದ್ರೆ ವೀಸಾ ಸಮಸ್ಯೆ ಬಗೆಹರಿಸಿಕೊಳ್ಳಲು ಹೈಕೋರ್ಟಗೆ ರಂಷಾ ಕುಟುಂಬಸ್ಥರು ಈಗ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಪೆಹಲ್ಗಾಮ್​ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಕೋಲಾರದ ರೈತರು..!

ಇದೀಗ ಮಹಿಳೆಯ ಸಂಬಂಧಿ ರಿಜ್ವಾನ್‌ ಆಕೆಯ ಸಹಾಯಕ್ಕೆ ನಿಂತಿದ್ದಾರೆ. ಆಕೆ ರಿಜ್ವಾನ್ ಭಾವಿ ಪತ್ನಿಯ ಅಕ್ಕ. ಇವರ ಮದುವೆಗಾಗಿಯೇ ಅವರು ಭಾರತಕ್ಕೆ ಬಂದಿದ್ರು. ಕಾಶ್ಮೀರ ಗಲಾಟೆಯಾದ ಹಿನ್ನಲೆ ತಕ್ಷಣವೇ ವಾಪಸ್ ಪಾಕಿಸ್ತಾನಕ್ಕೆ ಹೋಗಬೇಕೆಂದು ಪೊಲೀಸರು ತಿಳಿಸಿದ್ರು, ಹೀಗಾಗಿ ರಂಷಾ ಹಾಗೂ ಮಕ್ಕಳನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಪಾಕ್ ಅಟ್ಟಾರಿಯ ಗಡಿಗೆ ಹೋಗಿದ್ದರು. ವೀಸಾ ಎಲ್ಲವನ್ನೂ ಚೆಕ್ ಮಾಡಿ ಪಾಕಿಸ್ತಾನಕ್ಕೆ ಕಳುಹಿಸಲು ಅಧಿಕಾರಿಗಳ ರೆಡಿ ಇದ್ರು. ಆದರೆ ಅವರ ಗಂಡ ಪಾಕಿಸ್ತಾನದಿಂದ ಅವರನ್ನ ಕರೆದುಕೊಂಡು ಹೋಗಲು ಬರಲಿಲ್ಲ. ರಾಯಭಾರಿಯ ಅಧಿಕಾರಿಗಳು ಕಾಲ್ ಮಾಡಿದ್ರು ರಂಷಾ ಪತಿ ಫಾರೂಖ್ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಗಡಿಯಲ್ಲಿ ಮಕ್ಕಳ ಸಂಬಂಧಿಕರು ಯಾರು ಬಾರದ ಕಾರಣ ಅವರನ್ನ ಒಳಗೆ ಕರೆದುಕೊಳ್ಳಲಿಲ್ಲ. ಮಕ್ಕಳು ನಿಮ್ಮ ಬಳಿಯೇ ಇರಲಿ ಎಂದು ಹೇಳಿದ್ದಾರೆ. ಅದಕ್ಕಾಗಿ ವೀಸಾ ವಿಸ್ತರಣೆಗಾಗಿ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ
Image
ಭಾರತ ಔಷಧಗಳ ಪೂರೈಕೆ ನಿಲ್ಲಿಸಿದ್ರೆ ಪಾಕ್​ ಪರಿಸ್ಥಿತಿ ಏನಾಗುತ್ತೆ?
Image
ಪಾಕ್​ಗೆ ಹೋಗುವ ಸಂಪೂರ್ಣ ನೀರನ್ನು ಭಾರತ ತಡೆಹಿಡಿಯಲು ಸಾಧ್ಯವಿಲ್ಲ
Image
ಕದನ ವಿರಾಮ ಉಲ್ಲಂಘನೆಗಳ ವಿರುದ್ಧ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ
Image
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ

ಪತಿ ಎಲ್ಲರೂ ಬಂದ್ರೆ ಬನ್ನಿ. ಬರೀ ಮಕ್ಕಳನ್ನ ಮಾತ್ರ ನಾನು ಕರೆದುಕೊಳ್ಳಲ್ಲ ಎಂದು ಹೇಳಿದ್ದಾನಂತೆ. ಆದರೆ ರಂಷಾ ಅವರ ಬಳಿ ಭಾರತದ ಪಾಸ್ ಪೋರ್ಟ್ ಇದೆ. ಮಕ್ಕಳು ಪಾಕಿಸ್ತಾ‌ನದ ಪ್ರಜೆಗಳಾಗಿದ್ದಾರೆ ಇದರಿಂದ ತೊಂದರೆಯಾಗುತ್ತಿದೆ. ರಂಷಾಗೆ ಪಾಕಿಸ್ತಾನದ ಪೌರತ್ವ ಸಿಕ್ಕಿಲ್ಲ. ಭಾರತದ ಪಾಸ್ ಪೋರ್ಟ್ ಅವಧಿ ಮುಕ್ತಾಯವಾಗಿದೆ. ಈಗಾಗಿ ರಿನಿವಲ್ ಗಾಗಿ ರಂಷಾ ತತ್ಕಾಲ್ ನಲ್ಲಿ ಅಪ್ಲೈ ಮಾಡಿದ್ದಾರೆ.

ಒಂದುವರೆ ವರ್ಷರ ಹಿಂದೆಯೇ ರಂಷಾ ತಂಗಿಯ ಜೊತೆ ರಿಜ್ವಾನ್ ನಿಶ್ಚಿತಾರ್ಥ ಆಗಿತ್ತು. ರಂಷಾ ಅವರು ಪಾಕಿಸ್ತಾನದಿಂದ ಬರುವಿಕೆಗಾಗಿ ಒಂದುವರೆ ವರ್ಷ ಕಾದಿದ್ದರು. ಈಗ ಅವರು ಮತ್ತು ಮಕ್ಕಳು ಬಂದಿದ್ದಾರೆ. ಇದೇ ತಿಂಗಳ 11ರಂದು ನನ್ನ ಮದುವೆ ಸಹ ಇತ್ತು. ಆದರೆ ಅವರಿಗೆ ಮದುವೆ ಇರಲು ಆಗುತ್ತಿಲ್ಲ, ಇದು ಎಲ್ಲರಿಗೂ ಬೇಸರದ ತರಿಸಿದೆ. ಇನ್ನು ರಂಷಾ ತಂದೆ ಮೂಲತಃ ಪಾಕಿಸ್ತಾನದವರು.ಇಂಡಿಯಾ ಪಾಕಿಸ್ತಾನ ವಿಭಜನೆಯಾದಾಗ ಇವರ ಕಡೆಯವರು ಕೆಲವರು ಪಾಕಿಸ್ತಾನದಲ್ಲಿ ಸ್ವಲ್ಪ ಜನ ಭಾರತದಲ್ಲಿ ಉಳಿದುಕೊಂಡರು. ಅಂದಿನಿಂದಲೂ ಕೂಡ ಇಬ್ಬರ ನಡುವೆ ಸಂಬಂಧ ಹಾಗೇ ಇದೆ.

ಈ ಬಗ್ಗೆ ರಿಜ್ವಾನ್ ಪ್ರತಿಕ್ರಿಯಿಸಿ, ಸದ್ಯದ ಪರಿಸ್ಥಿತಿಯಲ್ಲಿ ನನ್ನ‌ ಮದುವೆಗಿಂತ ಮಕ್ಕಳ ಭವಿಷ್ಯ ಬಹಳ ಮುಖ್ಯ. ಅಭಿಪ್ರಾಯ. ಕೇಂದ್ರ ಸರ್ಕಾರ ಈ ಸಮಸ್ಯೆಯನ್ನ ಕೂಡಲೇ ಬಗೆಹರಿಸಬೇಕು. ಗಡಿಯಲ್ಲಿ ಪಾಕಿಸ್ತಾನದಿಂದ ಬಂದವರನ್ನ ಭಾರತದವರು ಸಮಯಕ್ಕೆ ಸರಿಯಾಗಿ ಬಂದು ಕರೆದುಕೊಳ್ಳುತ್ತಿದ್ದಾರೆ. ಆದರೆ ಭಾರತದಿಂದ ಪಾಕಿಸ್ತಾನಕ್ಕೆ ಹೋಗುವವರನ್ನ ಕರೆದುಕೊಳ್ಳಲು ಯಾರು ಸಹ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ‌ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಮಹಿಳೆ ವೀಸಾಗಾಗಿ ಮಕ್ಕಳ ಜೊತೆ ದೆಹಲಿಗೆ ತೆರಳಿದ್ದಾರೆ. ಎಲ್ಲವೂ ಸರಿಯಾದ್ರೆ ಸರಿ ಇಲ್ಲವಾದ್ರೆ ಏನು ಅನ್ನೋದು ಸದ್ಯ ಎಲ್ಲರ ಆತಂಕಕ್ಕೆ ಕಾರಣವಾಗಿದೆ.