ಕೊಲೆ ಬೆದರಿಕೆ ಬರುತ್ತಿದೆ, ಅಮ್ಮನ ಕ್ಲಿನಿಕ್‌ಗೆ ನುಗ್ಗಿದ್ದಾರೆ; ರಣವೀರ್ ಅಲ್ಲಾಹಬಾಡಿಯಾ
ನನಗೆ ಕೊಲೆ ಬೆದರಿಕೆಗಳು ಬರುತ್ತಿವೆ, ನನ್ನ ತಾಯಿಯ ಕ್ಲಿನಿಕ್‌ಗೆ ಜನರು ನುಗ್ಗಿದ್ದಾರೆ ಎಂದು ಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋ ವಿವಾದದ ನಂತರ ರಣವೀರ್ ಅಲ್ಲಾಹ್ಬಾಡಿಯಾ ಆಘಾತಕಾರಿ ವಿವರಗಳನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ರಣವೀರ್ ಅಲ್ಲಾಹ್ಬಾಡಿಯಾ ವಿರುದ್ಧ ಹಲವು ಕೇಸ್ಗಳು ದಾಖಲಾಗಿವೆ. ಈಗಾಗಲೇ ಹಲವು ಬಾರಿ ರಣವೀರ್ ತನ್ನಿಂದಾದ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ. ತಮ್ಮ ಕುಟುಂಬದ ವಿರುದ್ಧದ ಕಿರುಕುಳ ಮತ್ತು ಕೊಲೆ ಬೆದರಿಕೆಗಳನ್ನು ನಿಲ್ಲಿಸುವಂತೆ ಸಾರ್ವಜನಿಕರ ಬಳಿ ಮನವಿ ಮಾಡಿದ್ದಾರೆ.

ನವದೆಹಲಿ: ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ‘ಪೋಷಕರ ಲೈಂಗಿಕತೆ’ ಹೇಳಿಕೆ ನೀಡಿದ ನಂತರ ರಣವೀರ್ ಅಲ್ಲಾಬಾಡಿಯಾ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅಶ್ಲೀಲ ಭಾಷೆಯನ್ನು ಬಳಸಿದ್ದಕ್ಕಾಗಿ ಅವರನ್ನು ಟೀಕಿಸಲಾಗುತ್ತಿತ್ತು. ರಣವೀರ್ ಮತ್ತು ಆ ಶೋನ ನಿರೂಪಕ ಸಮಯ್ ವಿರುದ್ಧ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಪೋಷಕರ ಬಗ್ಗೆ ನನ್ನ ಹೇಳಿಕೆಯು ಅಸೂಕ್ಷ್ಮ ಮತ್ತು ಅಗೌರವದಿಂದ ಕೂಡಿತ್ತು. ಉತ್ತಮವಾಗಿ ಕಾರ್ಯನಿರ್ವಹಿಸುವುದು ನನ್ನ ನೈತಿಕ ಜವಾಬ್ದಾರಿ. ಅದಕ್ಕೆ ನಾನು ನಿಜವಾಗಿಯೂ ವಿಷಾದಿಸುತ್ತೇನೆ ಎಂದು ರಣವೀರ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
ರಣವೀರ್ ಅಲ್ಲಾಹಬಾಡಿಯಾ ಒಬ್ಬ ಯೂಟ್ಯೂಬರ್ ಆಗಿದ್ದು, ಜನಪ್ರಿಯ ವ್ಯಕ್ತಿಗಳೊಂದಿಗೆ ಪಾಡ್‌ಕ್ಯಾಸ್ಟ್ ಶೋಗಳನ್ನು ಮಾಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅನುಯಾಯಿಗಳನ್ನು ಹೊಂದಿರುವ ಯೂಟ್ಯೂಬರ್ ದಿನದಿಂದ ದಿನಕ್ಕೆ ಜನಪ್ರಿಯರಾಗುತ್ತಿದ್ದರು. ಆದರೆ, ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ನಂತರ, ಅವರ ಜೀವನವು ಅಸ್ತವ್ಯಸ್ತವಾಗಿದೆ. ಯೂಟ್ಯೂಬರ್ ರಾಷ್ಟ್ರವ್ಯಾಪಿ ಮಟ್ಟದಲ್ಲಿ ಹಲವಾರು ಎಫ್‌ಐಆರ್‌ಗಳು ಮತ್ತು ಆನ್‌ಲೈನ್ ಪ್ರತಿಕ್ರಿಯೆಗಳನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಅಶ್ಲೀಲ ಹೇಳಿಕೆ ವಿವಾದ; ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ವಿರುದ್ಧ ಮಹಿಳಾ ಆಯೋಗ ಸಮನ್ಸ್ ಜಾರಿ
ಇದೀಗ ಮತ್ತೊಂದು ಕ್ಷಮೆಯಾಚನೆಯ ವಿಡಿಯೋ ಮಾಡಿರುವ ಯೂಟ್ಯೂಬರ್ ರಣವೀರ್ ಅಧಿಕಾರಿಗಳೊಂದಿಗೆ ಸಹಕರಿಸುವುದಾಗಿ ಮತ್ತು ಸೂಕ್ತ ಕಾರ್ಯವಿಧಾನವನ್ನು ಅನುಸರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ವಿವಾದದ ನಂತರ ಕೊಲೆ ಬೆದರಿಕೆಗಳ ಬಗ್ಗೆ ರಣವೀರ್ ಅಲ್ಲಾಬಾಡಿಯಾ ಬಹಿರಂಗ ಪಡಿಸಿದ್ದಾರೆ.
View this post on Instagram
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ರಣವೀರ್ ಅಲ್ಲಾಬಾಡಿಯಾ ಕ್ಷಮೆ ಯಾಚನೆಯನ್ನು ಪೋಸ್ಟ್ ಮಾಡಿದ್ದಾರೆ. ನಾನು ವಿವಾದದ ಬಗ್ಗೆ ಪೊಲೀಸರೊಂದಿಗೆ ಸಹಕರಿಸುತ್ತಿದ್ದೇನೆ ಮತ್ತು ಸೂಕ್ತ ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಫೆಬ್ರವರಿ 11ರಂದು, ರಣವೀರ್ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕುರಿತು ತಮ್ಮ ಕಾಮೆಂಟ್‌ಗಳಿಗೆ ಕ್ಷಮೆಯಾಚಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಇಂದು ಅವರು ಮತ್ತೊಮ್ಮೆ ಕ್ಷಮೆ ಯಾಚಿಸಿದ್ದಾರೆ.
ಇದನ್ನೂ ಓದಿ: ‘ಪೋಷಕರು ಕಬ್ಬಡಿ ಆಡೋದು ನೋಡಿ ಮಕ್ಕಳು ಮಲಗ್ತಾರೆ’; ರಣವೀರ್ ಬಳಿಕ ಇಕ್ಕಟಿಗೆ ಸಿಲುಕಿದ ಕಪಿಲ್ ಶರ್ಮಾ
“ನನ್ನನ್ನು ಕೊಲ್ಲಲು ಮತ್ತು ನನ್ನ ಕುಟುಂಬಕ್ಕೆ ನೋವುಂಟು ಮಾಡಲು ಬಯಸುವ ಜನರಿಂದ ಜೀವ ಬೆದರಿಕೆಗಳು ಬರುತ್ತಿದೆ. ಜನರು ರೋಗಿಗಳಂತೆ ನಟಿಸುತ್ತಾ ನನ್ನ ತಾಯಿಯ ಕ್ಲಿನಿಕ್‌ಗೆ ನುಗ್ಗಿದ್ದಾರೆ. ನನಗೆ ಭಯವಾಗುತ್ತಿದೆ ಮತ್ತು ಏನು ಮಾಡಬೇಕೆಂದು ನನಗೆ ತಿಳಿಯುತ್ತಿಲ್ಲ” ಎಂದು ರಣವೀರ್ ಬರೆದಿದ್ದಾರೆ.
ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಣವೀರ್ ಅಲ್ಲಾಬಾಡಿಯಾ ಆ ಶೋನಲ್ಲಿ ಭಾಗವಹಿಸಿದ್ದ ಯುವಕನೊಬ್ಬನ ಬಳಿ ಆತನ ತಂದೆ-ತಾಯಿಯ ಬಗ್ಗೆ ಮುಜುಗರಕಾರಿಯಾಗಿ ಮಾತನಾಡಿದ್ದರು. ನಿಮ್ಮ ತಂದೆ-ತಾಯಿ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡುತ್ತಲೇ ದಿನ ದೂಡುತ್ತೀರಾ? ಅಥವಾ ನೀವು ಕೂಡ ಅವರೊಂದಿಗೆ ಸೇರಿಕೊಳ್ಳಲು ಬಯಸುತ್ತೀರಾ? ಎಂದು ರಣವೀರ್ ಕೇಳಿದ ಪ್ರಶ್ನೆಗೆ ಆ ಯುವಕ ತಲೆ ತಗ್ಗಿಸಿ ನಿಂತಿದ್ದ. ಇದನ್ನು ಕೇಳಿದ ಇತರೆ ತೀರ್ಪುಗಾರರು ಚಪ್ಪಾಳೆ ತಟ್ಟಿ ನಕ್ಕಿದ್ದರು. ಆದರೆ, ಈ ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ