ಅಶ್ಲೀಲ ಹೇಳಿಕೆ ವಿವಾದ; ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ವಿರುದ್ಧ ಮಹಿಳಾ ಆಯೋಗ ಸಮನ್ಸ್ ಜಾರಿ
ಇತ್ತೀಚಿನ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಎಂಬ ಯೂಟ್ಯೂಬ್ ಕಾಮಿಡಿ ಶೋನ ಎಪಿಸೋಡ್ ಒಂದರಲ್ಲಿ ಪಾಲ್ಗೊಂಡಿದ್ದ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ನೀಡಿದ ಹೇಳಿಕೆಗಳು ಬಹಳ ಅವಹೇಳನಕಾರಿಯಾಗಿದ್ದು, ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ತಂದೆ-ತಾಯಿಯ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ್ದ ರಣವೀರ್ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಇದೀಗ ಮಹಿಳಾ ಆಯೋಗ ಈ ಶೋನಲ್ಲಿ ಪಾಲ್ಗೊಂಡಿದ್ದ ರಣವೀರ್ ಅಲ್ಲಾಬಾಡಿಯಾ ಮತ್ತು ಸಮಯ್ ರೈನಾ ವಿರುದ್ಧ ಸಮನ್ಸ್ ಜಾರಿ ಮಾಡಿದೆ.

ನವದೆಹಲಿ: ತಮ್ಮ ಒಂದು ಸಂಚಿಕೆಯಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಮಹಾರಾಷ್ಟ್ರ ಸೈಬರ್ ಸೆಲ್ ಇಂದು ಯೂಟ್ಯೂಬ್ ಶೋ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ವಿರುದ್ಧ ಪ್ರಕರಣ ದಾಖಲಿಸಿದೆ. ಒಟ್ಟು 30ರಿಂದ 40 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾರ್ಯಕ್ರಮದ ಮೊದಲ ಸಂಚಿಕೆಯಿಂದ 6ನೇ ಸಂಚಿಕೆಯವರೆಗೆ ಭಾಗಿಯಾಗಿದ್ದ ಎಲ್ಲ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರ ನಡುವೆ ಈ ಶೋನಲ್ಲಿ ಪಾಲ್ಗೊಂಡು ಅಶ್ಲೀಲ ಹೇಳಿಕೆ ನೀಡಿದ್ದ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಹಾಗೂ ಸಮಯ್ ರೈನಾ ವಿರುದ್ಧ ಮಹಿಳಾ ಆಯೋಗ ಕೂಡ ಸಮನ್ಸ್ ಜಾರಿಗೊಳಿಸಿದೆ.
ಸೈಬರ್ ಇಲಾಖೆಯು ಐಟಿ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಮತ್ತು ಹಾಸ್ಯ ಕಾರ್ಯಕ್ರಮದ ಎಲ್ಲಾ ಸಂಚಿಕೆಗಳನ್ನು ಅಂದರೆ ಒಟ್ಟು 18 ಸಂಚಿಕೆಗಳನ್ನು ತೆಗೆದುಹಾಕಲು ಕೋರಿದೆ. ಸೈಬರ್ ಇಲಾಖೆಯು ನಡೆಸಿದ ತನಿಖೆಯ ಸಮಯದಲ್ಲಿ ಈ ಶೋನಲ್ಲಿ ಭಾಗವಹಿಸುವವರು ಮತ್ತು ಅತಿಥಿಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಇತರರು “ಅಶ್ಲೀಲ” ಭಾಷೆಯನ್ನು ಬಳಸುತ್ತಿರುವುದು ಕಂಡುಬಂದಿದೆ. ಈ ಕಾರ್ಯಕ್ರಮದ ತೀರ್ಪುಗಾರರು ಮತ್ತು ಅತಿಥಿಗಳು ಸೇರಿದಂತೆ ಅಂತಹ ಜನರನ್ನು ಅದು ಪಟ್ಟಿ ಮಾಡಲಾಗಿದೆ.
ಇದನ್ನೂ ಓದಿ: ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಬಗ್ಗೆ ವಿವಾದಿತ ಪೋಸ್ಟ್, ದೂರು ದಾಖಲು
ಹಾಸ್ಯನಟ ಸಮಯ್ ರೈನಾ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ನೀಡಿದ ಹೇಳಿಕೆಗಳು ಆಕ್ರಮಣಕಾರಿ ಮತ್ತು ಅವಹೇಳನಕಾರಿ ಎಂದು ಪರಿಗಣಿಸಲ್ಪಟ್ಟ ನಂತರ ವಿವಾದ ಭುಗಿಲೆದ್ದಿತು.
ರಣವೀರ್ ಅಲ್ಲಾಬಾಡಿಯಾ, ಸಮಯ್ ರೈನಾಗೆ ಸಮನ್ಸ್ ಜಾರಿ:
ರಾಷ್ಟ್ರೀಯ ಮಹಿಳಾ ಆಯೋಗ (NCW) ಯೂಟ್ಯೂಬರ್ಗಳಾದ ರಣವೀರ್ ಅಲ್ಲಾಬಾಡಿಯಾ, ಸಮಯ್ ರೈನಾ, ಅಪೂರ್ವ ಮುಖಿಜಾ, ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್ ಮತ್ತು ಕಾರ್ಯಕ್ರಮದ ನಿರ್ಮಾಪಕರಿಗೆ ಸಮನ್ಸ್ ಜಾರಿ ಮಾಡಿದೆ. ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿರುವ ಹೇಳಿಕೆ ಎಲ್ಲರಿಗೂ ಮುಜುಗರ ತರುವಂತಿದೆ. ಇದು ಸಮಾನತೆ ಮತ್ತು ಪರಸ್ಪರ ಗೌರವವನ್ನು ಎತ್ತಿಹಿಡಿಯುವ ಸಮಾಜದಲ್ಲಿ ಘನತೆ ಮತ್ತು ಗೌರವವನ್ನು ಉಲ್ಲಂಘಿಸುತ್ತವೆ ಎಂದು ಮಹಿಳಾ ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
National Commission for Women (NCW) summons YouTuber Ranveer Allahabadia, Samay Raina, and others over derogatory remarks; hearing scheduled for February 17 pic.twitter.com/m7Y9Xmez5q
— ANI (@ANI) February 11, 2025
ಮಹಿಳಾ ಸಂಸ್ಥೆಯು ಆಯೋಗದ ಮುಂದೆ ಅವರಿಗೆ ಖುದ್ದಾಗಿ ಹಾಜರಾಗಲು ಕೇಳಿಕೊಂಡಿದೆ. ಈ ವಿಚಾರಣೆಯು ಫೆಬ್ರವರಿ 17ರಂದು ಮಧ್ಯಾಹ್ನ 12 ಗಂಟೆಗೆ ನವದೆಹಲಿಯ ಮಹಿಳಾ ಆಯೋಗದ ಕಚೇರಿಯಲ್ಲಿ ನಡೆಯಲಿದೆ.
ಇದನ್ನೂ ಓದಿ: ‘ಪೋಷಕರು ಲೈಂಗಿಕ ಕ್ರಿಯೆ ನಡೆಸೋದನ್ನು ನೋಡ್ತಾ ಇರ್ತೀರಾ’; ವಿವಾದಕ್ಕೆ ಸಿಲುಕಿದ ರಣವೀರ್ ಅಲಾಹಾಬಾದಿಯಾ
ಏನಿದು ವಿವಾದ?:
ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಣವೀರ್ ಅಲ್ಲಾಬಾಡಿಯಾ ಆ ಶೋನಲ್ಲಿ ಭಾಗವಹಿಸಿದ್ದ ಯುವಕನೊಬ್ಬನ ಬಳಿ ಆತನ ತಂದೆ-ತಾಯಿಯ ಬಗ್ಗೆ ಮುಜುಗರಕಾರಿಯಾಗಿ ಮಾತನಾಡಿದ್ದರು. ನಿಮ್ಮ ತಂದೆ-ತಾಯಿ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡುತ್ತಲೇ ದಿನ ದೂಡುತ್ತೀರಾ? ಅಥವಾ ನೀವು ಕೂಡ ಅವರೊಂದಿಗೆ ಸೇರಿಕೊಳ್ಳಲು ಬಯಸುತ್ತೀರಾ? ಎಂದು ರಣವೀರ್ ಕೇಳಿದ ಪ್ರಶ್ನೆಗೆ ಆ ಯುವಕ ತಲೆ ತಗ್ಗಿಸಿ ನಿಂತಿದ್ದ. ಇದನ್ನು ಕೇಳಿದ ಇತರೆ ತೀರ್ಪುಗಾರರು ಚಪ್ಪಾಳೆ ತಟ್ಟಿ ನಕ್ಕಿದ್ದರು.
I shouldn’t have said what I said on India’s got latent. I’m sorry. pic.twitter.com/BaLEx5J0kd
— Ranveer Allahbadia (@BeerBicepsGuy) February 10, 2025
ಆದರೆ, ಈ ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸಮಾಜದಲ್ಲಿ ಗೌರವದಿಂದ ಬದುಕುತ್ತಿರುವವರು ಇಂತಹ ಶೋ ನೋಡಲು ಸಾಧ್ಯವಿಲ್ಲ. ಇದು ತೀವ್ರ ಅವಹೇಳನಕಾರಿ ಮತ್ತು ಅಗೌರವದ ಹೇಳಿಕೆಯಾಗಿದೆ ಎಂದು ಆಕ್ರೋಶ, ಟ್ರೋಲ್ ವ್ಯಕ್ತವಾಗಿತ್ತು. ಈಗಾಗಲೇ ಈ ವಿವಾದಾತ್ಮಕ ಸಂಚಿಕೆಯನ್ನು ಯೂಟ್ಯೂಬ್ನಿಂದ ತೆಗೆದುಹಾಕಲಾಗಿದೆ.
ಇದೆಲ್ಲ ಆದ ನಂತರ ತನ್ನ ಹೇಳಿಕೆ ವಿವಾದಕ್ಕೀಡಾಗಿದೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ರಣವೀರ್ ಎಕ್ಸ್ನಲ್ಲಿ ಕ್ಷಮೆ ಯಾಚಿಸುವ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ. ಆ ಜೋಕ್ ತೀರ್ಪಿನ ಲೋಪ ಎಂದು ಹೇಳಿದ್ದಾರೆ. ಅದಕ್ಕಾಗಿ ಕ್ಷಮೆ ಯಾಚಿಸಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ