IBPS Recruitment 2027: ಗ್ರಾಮೀಣ ಬ್ಯಾಂಕುಗಳಲ್ಲಿ 13,706 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರಿಗೆ ಸುವರ್ಣವಕಾಶ

IBPS RRB ಅಧಿಸೂಚನೆ: ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ 13,706 ಗ್ರೂಪ್ 'ಎ' ಅಧಿಕಾರಿ ಮತ್ತು ಗ್ರೂಪ್ 'ಬಿ' ಕಚೇರಿ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರರಿಗೆ ಇದೊಂದು ಭಾರಿ ಉದ್ಯೋಗಾವಕಾಶವಾಗಿದ್ದು, ಆನ್‌ಲೈನ್ ಅರ್ಜಿ ಪ್ರಕ್ರಿಯೆ ಸೆಪ್ಟೆಂಬರ್ 1 ರಿಂದ 21 ರವರೆಗೆ ನಡೆಯಲಿದೆ. ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಜೊತೆಗೆ ಅಂತಿಮ ಹಂತವಾಗಿ ಸಂದರ್ಶನವನ್ನು (Interview) ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

IBPS Recruitment 2027: ಗ್ರಾಮೀಣ ಬ್ಯಾಂಕುಗಳಲ್ಲಿ 13,706 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರಿಗೆ ಸುವರ್ಣವಕಾಶ
IBPS RRB ನೇಮಕಾತಿ
Image Credit source: Getty Images

Updated on: Sep 01, 2026 | 4:28 PM

ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಪಡೆದುಕೊಳ್ಳಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಭಾರಿ ಉದ್ಯೋಗಾವಕಾಶವನ್ನು ತಂದಿದೆ. ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ (RRBs) ಗ್ರೂಪ್ ‘ಎ’ ಅಧಿಕಾರಿ ಮತ್ತು ಗ್ರೂಪ್ ‘ಬಿ’ ಕಚೇರಿ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ನೇಮಕಾತಿ ಪ್ರಕ್ರಿಯೆ ‘CRP RRBs XV’ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 13,706 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಹುದ್ದೆಗಳ ವಿವರಗಳು:

ಈ ಬೃಹತ್ ನೇಮಕಾತಿಯಲ್ಲಿ ಕಚೇರಿ ಸಹಾಯಕ (ಬಹುಪಯೋಗಿ) ಹುದ್ದೆಗಳಿಗೆ ಗರಿಷ್ಠ ಅಂದರೆ 8,183 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಆಫೀಸರ್ ಸ್ಕೇಲ್-I (ಸಹಾಯಕ ವ್ಯವಸ್ಥಾಪಕ) ಹುದ್ದೆಗಳಿಗೆ 4,256 ಹುದ್ದೆಗಳಿದ್ದು, ಆಫೀಸರ್ ಸ್ಕೇಲ್-II ಜನರಲ್ ಬ್ಯಾಂಕಿಂಗ್ ಆಫೀಸರ್ ವಿಭಾಗದಲ್ಲಿ 666 ಹುದ್ದೆಗಳಿವೆ. ಇದರ ಜೊತೆಗೆ ಆಫೀಸರ್ ಸ್ಕೇಲ್-III ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ 220, ಆಫೀಸರ್ ಸ್ಕೇಲ್-II ಐಟಿ ವಿಭಾಗಕ್ಕೆ 182, ಚಾರ್ಟರ್ಡ್ ಅಕೌಂಟೆಂಟ್ (CA) ಹುದ್ದೆಗೆ 81, ಕಾನೂನು ಅಧಿಕಾರಿಗೆ 46, ಕೃಷಿ ಅಧಿಕಾರಿಗೆ 38, ಖಜಾನೆ ವ್ಯವಸ್ಥಾಪಕರಿಗೆ 18 ಮತ್ತು ಮಾರ್ಕೆಟಿಂಗ್ ಆಫೀಸರ್ ಹುದ್ದೆಗೆ 16 ಹುದ್ದೆಗಳು ಲಭ್ಯವಿವೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ, ಚಾರ್ಟರ್ಡ್ ಅಕೌಂಟೆಂಟ್ (CA), ಅಥವಾ ಸಂಬಂಧಿತ ವಿಭಾಗದಲ್ಲಿ MBA/ಕಾನೂನು ಪದವಿ ಪಡೆದಿರಬೇಕು. ವಯೋಮಿತಿಗೆ ಸಂಬಂಧಿಸಿದಂತೆ, ಆಫೀಸ್ ಅಸಿಸ್ಟೆಂಟ್ ಹುದ್ದೆಗೆ 18 ರಿಂದ 28 ವರ್ಷ, ಆಫೀಸರ್ ಸ್ಕೇಲ್-I ಗೆ 18 ರಿಂದ 30 ವರ್ಷ, ಆಫೀಸರ್ ಸ್ಕೇಲ್-II ಗೆ 21 ರಿಂದ 32 ವರ್ಷ ಹಾಗೂ ಆಫೀಸರ್ ಸ್ಕೇಲ್-III ಹುದ್ದೆಗೆ 21 ರಿಂದ 40 ವರ್ಷಗಳಾಗಿರಬೇಕು. ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇರಲಿದೆ.

ಇದನ್ನೂ ಓದಿ: 15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ; ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ

ಅರ್ಜಿ ಶುಲ್ಕ ಹಾಗೂ ಆಯ್ಕೆ ಪ್ರಕ್ರಿಯೆ:

ಸಾಮಾನ್ಯ ಮತ್ತು ಇತರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 850 ರೂ. ನಿಗದಿಪಡಿಸಲಾಗಿದ್ದು, ಎಸ್‌ಸಿ/ಎಸ್‌ಟಿ/ದಿವ್ಯಾಂಗ ಅಭ್ಯರ್ಥಿಗಳಿಗೆ 175 ರೂ. ಶುಲ್ಕವಿರುತ್ತದೆ. ಕಚೇರಿ ಸಹಾಯಕ (ಆಫೀಸ್ ಅಸಿಸ್ಟೆಂಟ್) ಹುದ್ದೆಗಳಿಗೆ ಆನ್‌ಲೈನ್ ಮೂಲಕ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅದೇ ರೀತಿ ಆಫೀಸರ್ ಹುದ್ದೆಗಳಿಗೆ ಪ್ರಿಲಿಮಿನರಿ ಹಾಗೂ ಮುಖ್ಯ ಪರೀಕ್ಷೆಯ ಜೊತೆಗೆ ಅಂತಿಮ ಹಂತವಾಗಿ ಸಂದರ್ಶನವನ್ನು (Interview) ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು ಮತ್ತು ವೇಳಾಪಟ್ಟಿ:

ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 21 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಶುಲ್ಕ ಪಾವತಿಸಲು ಕೂಡ ಸೆಪ್ಟೆಂಬರ್ 21 ಕೊನೆಯ ದಿನಾಂಕವಾಗಿದೆ. ಪ್ರಿಲಿಮಿನರಿ ಪರೀಕ್ಷೆಗಳು ನವೆಂಬರ್/ಡಿಸೆಂಬರ್ 2026 ರಲ್ಲಿ ನಡೆಯಲಿದ್ದು, ಇದರ ಫಲಿತಾಂಶಗಳು ಡಿಸೆಂಬರ್ 2026 ಅಥವಾ ಜನವರಿ 2027 ರಲ್ಲಿ ಪ್ರಕಟವಾಗಲಿವೆ. ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಪ್ರಕ್ರಿಯೆಗಳು ಜನವರಿ/ಫೆಬ್ರವರಿ 2027 ರೊಳಗೆ ಪೂರ್ಣಗೊಂಡು, ಆಯ್ಕೆಯಾದ ಅಭ್ಯರ್ಥಿಗಳಿಗೆ ಫೆಬ್ರವರಿ ಅಥವಾ ಮಾರ್ಚ್ 2027 ರ ವೇಳೆಗೆ ಹುದ್ದೆಗಳ ತಾತ್ಕಾಲಿಕ ಹಂಚಿಕೆ (Provisional Allotment) ನಡೆಯಲಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:27 pm, Tue, 1 September 26

Loading...
Unable to load recommendations.
Follow Us