ಕೊಚ್ಚಿ: ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೆ ತರುತ್ತೇವೆ ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನದಿಂದ ರಾಜ್ಯದಲ್ಲಿ ನ್ಯಾಯಸಮ್ಮತವಾಗಿ ನೆಲೆಸಿರುವವರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸಚಿವರು ಹೇಳಿದ್ದಾರೆ. ಸೋಮವಾರ ಬೆಳಗ್ಗೆ ಕೊಚ್ಚಿ ಮತ್ತು ತ್ರಿಶ್ಶೂರ್ನಲ್ಲಿ ರೋಡ್ ಶೋ ನಡೆಸಿದ ಗೋಯಲ್, ಎಲ್ಡಿಫ್ ಮತ್ತು ಯುಡಿಎಫ್ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕೋಮುವಾದವನ್ನು ತಂದಿದೆ. ಕೇರಳದಲ್ಲಿ ಉತ್ತಮ, ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರ ತರಲು ಬಿಜೆಪಿಗೆ ಅವಕಾಶ ನೀಡಿ ಎಂದು ಮತದಾರರಲ್ಲಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಜನರು ಮನಸ್ಸು ಬದಲಿಸಿದ್ದು, ಬಿಜೆಪಿಯನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ. ಪಶ್ಚಿಮ ಬಂಗಾಳದ ಜನರು ಟಿಎಂಸಿ ಮತ್ತು ಕಮ್ಯುನಿಸ್ಟ್ ಸರ್ಕಾರದ ಅವ್ಯವಸ್ಥೆಯನ್ನು ನೋಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆರಿ 200ಕ್ಕಿಂತ ಹೆಚ್ಚು ಕ್ಷೇತ್ರಗಳನ್ನುವ ಗೆಲ್ಲುವ ನಿರೀಕ್ಷೆಇದೆ.
ಎಲ್ಡಿಎಫ್ ಮತ್ತು ಯುಡಿಎಫ್ ಒಂದೇ ನಾಣ್ಯದ ಮುಖಗಳು. ಯುಡಿಎಫ್ ಸೋಲಾರ್ ಹಗರಣ ಮಾಡಿತ್ತು, ಎಲ್ಡಿಎಫ್ ಚಿನ್ನ ಹಗರಣ ಮಾಡಿದೆ. ಇದನ್ನು ಕೇರಳದ ಜನರು ಇನ್ನುಮಂದೆ ಸಹಿಸಿಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಜ್ಯಕ್ಕೆ ದುಪ್ಪಟ್ಟು ಸಾಮರ್ಥ್ಯ ಸಿಗಲಿದೆ. ಇಲ್ಲಿ ಅಭಿವೃದ್ಧಿಯಾಗಲಿದೆ. ಉತ್ತಮ ಆಡಳಿತ ನೀಡುವ ಮೂಲಕ ಭ್ರಷ್ಟಾಚಾರದ ಕೂಪವಾಗಿರುವ ಕೇರಳ ರಾಜ್ಯವನ್ನು ನಾವು ಅಭಿವೃದ್ಧಿ ಪಡಿಸುತ್ತೇವೆ. ಕೇರಳದಲ್ಲಿ ಇಂದು ಇರುವ ಸಮಸ್ಯೆಗಳೆಂದರೆ ಎಲ್ಡಿಎಫ್ ಸರ್ಕಾರದ ಭ್ರಷ್ಟಾಚಾರ, ಚಿನ್ನ ಹಗರಣ, ಹಿಂದೂಗಳ ಮೇಲಿನ ಕಿರುಕುಳ ಎಂದು ಸಚಿವರು ಹೇಳಿದ್ದಾರೆ.
Under PM @NarendraModi ji’s leadership, the State will have a double engine & this will ensure a new, developed, self-reliant and a prosperous Kerala.
Good governance and good intention will transform the State from the hub of corruption to a hub of development. pic.twitter.com/tFscj7SdYV
— Piyush Goyal (@PiyushGoyal) March 29, 2021
ಚಿನ್ನಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೆಸರು ಉಲ್ಲೇಖಿಸುವಂತೆ ಆರೋಪಿಗಳ ಮೇಲೆ ಜಾರಿ ನಿರ್ದೇಶನಾಲಯ ಒತ್ತಡ ಹೇರಿದೆ ಎಂದು ಆರೋಪಿಸಿ ಕೇರಳ ಸರ್ಕಾರ ಜಾರಿ ನಿರ್ದೇಶನಾಲಯದ ವಿರುದ್ಧವೇ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಕೇರಳ ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ನಾಯಕರಾದ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಂಡಿಸಿದ್ದರು.
ಇದೊಂದು ಕೆಟ್ಟ ಬೆಳವಣಿಗೆ. ಕೇರಳ ಸರ್ಕಾರ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ವಿರುದ್ಧ ತನಿಖೆಗೆ ಆದೇಶಿಸುವುದಾದರೂ ಹೇಗೆ? ಇದು ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು ಎಂದು ಭಾನುವಾರ ಕೇರಳದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ್ದ ರಾಜನಾಥ್ ಸಿಂಗ್ ಹೇಳಿದ್ದರು.
Live from a Road Show in Thrissur, Keralahttps://t.co/YO4tiQhSPQ
— Piyush Goyal (@PiyushGoyal) March 29, 2021
ಕೇಂದ್ರ ಸಚಿವ ಸಂಪುಟದಲ್ಲಿ ರೈಲ್ವೆ ಖಾತೆ ಹೊಂದಿರುವ ಗೋಯಲ್, ಕೇರಳದಲ್ಲಿ ಶಬರಿಮಲೆ ರೈಲು ಸಂಪರ್ಕ ಯೋಜನೆ ತರಲು ಕೇಂದ್ರ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ. ಕೇರಳದಲ್ಲಿರುವ ವಿವಿಧ ರೈಲು ಯೋಜನೆಗಳನ್ನು ನೋಡಿದಾಗ, ಶಬರಿಮಲೆಗಿರುವ ರೈಲು ಸಂಪರ್ಕವನ್ನು ಅವರು ಮಾಡದೇ ಇರುವುದು ಯಾಕೆ ಎಂಬುದು ಅಚ್ಚರಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.