6,000 ರೂ. ಹಣಕ್ಕಾಗಿ ಹೆತ್ತ ಮಗುವನ್ನೇ ಮಾರಲು ಹೋದ ತಾಯಿ
ಆ ಭಿಕ್ಷುಕಿ ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದು, ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಗಡಿಭಾಗದ ನಿಮ್ದಿಹ್‌ನಲ್ಲಿ ಮಗುವಿಗೆ ಜನ್ಮ ನೀಡಿರುವುದಾಗಿ ಆರೋಪಿ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳ ಮೂಲದ ತಾಯಿಯೊಬ್ಬರು ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ತನ್ನ ನವಜಾತ ಶಿಶುವನ್ನು 6,000 ರೂ.ಗೆ ಮಾರಾಟ ಮಾಡಲು ಯತ್ನಿಸಿದ ವಿಚಿತ್ರ ಮತ್ತುನ ಆಘಾತಕಾರಿ ಘಟನೆ ನಡೆದಿದೆ. ಮಗುವನ್ನು ಖರೀದಿಸುವ ನಾಟಕವಾಡಿದ ವ್ಯಕ್ತಿಯೊಬ್ಬರು ಆ ಮಗುವನ್ನು ಸುರಕ್ಷಿತವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೂರು ನೀಡಿದ್ದಾರೆ. ಬಳಿಕ ಆ ತಾಯಿಯನ್ನು ಬಂಧಿಸಲಾಗಿದೆ.
ಹಣದಾಸೆಗೆ ಹೆತ್ತ ಕೂಡಲೇ ಮಗುವನ್ನು ಬೇರೆಯವರಿಗೆ ಮಾರಲು ಹೊರಟಿದ್ದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಮ್ಶೆಡ್‌ಪುರ ಎಸ್‌ಡಿಒ ಪಿಯೂಷ್ ಮಿಶ್ರಾ ಹೇಳಿದ್ದಾರೆ. ನನಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಈ ಪ್ರಕರಣವನ್ನು ಸಕ್ಚಿ ಪೊಲೀಸರಿಗೆ ವರ್ಗಾಯಿಸಿದೆ. ಮಾರಾಟ ಮಾಡಿದ ಮಹಿಳೆ ಮತ್ತು ಖರೀದಿಸಿದ ಮಹಿಳೆಯರನ್ನು ಅಲ್ಲಿಗೆ ಕಳುಹಿಸಿದೆ ಎಂದು ಮಿಶ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು? ಮಗುವಿನ ಆರೋಗ್ಯಕ್ಕೆ ಈ ಆಹಾರ ಬಳಸಿ
ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಬಲರಾಮ್‌ಪುರದ ಮಹಿಳೆ ನವಜಾತ ಶಿಶುವಿನ ತಾಯಿ ಎನ್ನಲಾಗಿದೆ. ಆ ಮಹಿಳೆ ಭಿಕ್ಷುಕಿ ಎಂದು ಪೊಲೀಸರು ಮಾಹಿತಿ ಪಡೆದಿದ್ದಾರೆ. ಆಕೆ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಾಳೆ ಮತ್ತು ರೈಲಿನಲ್ಲಿಯೇ ಓಡಾಡುತ್ತಾರೆ. ಆಕೆಯಿಂದ ಮಗುವನ್ನು ರಕ್ಷಿಸಿ ಮಕ್ಕಳ ರಕ್ಷಣಾ ಸೇವೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಗಂಡನ ಜತೆ ಖುಷಿಯಾಗಿರಬೇಕು ಎಂದು ಮಗುವನ್ನು ಹೊತ್ತು ಬಾಂಗ್ಲಾದಿಂದ ಭಾರತಕ್ಕೆ ಬಂದ ಮಹಿಳೆ, ಆದರೆ ನಡೆದಿದ್ದೇ ಬೇರೆ
ಆ ಭಿಕ್ಷುಕಿ ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದು, ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಗಡಿಭಾಗದ ನಿಮ್ದಿಹ್‌ನಲ್ಲಿ ಮಗುವಿಗೆ ಜನ್ಮ ನೀಡಿರುವುದಾಗಿ ಆರೋಪಿ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ನಾನೇ ಭಿಕ್ಷೆ ಬೇಡಿ ತಿನ್ನುತ್ತಿದ್ದೇನೆ. ನನಗೆ ಮಗುವನ್ನು ಬೆಳೆಸಲು ಆಗುವುದಿಲ್ಲ. ನನಗೆ ಆ ಸಾಮರ್ಥ್ಯವಿಲ್ಲ. ಹೀಗಾಗಿ ಮಗುವನ್ನು ಮಾರಲು ಯತ್ನಿಸುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನಷ್ಟು ಕ್ರೈಮ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:23 pm, Sat, 2 September 23