7 ಮಂದಿ ಗಂಡಂದಿರು, ಮೂವರು ಮಕ್ಕಳಿದ್ದ ಮಹಿಳೆ ಮತ್ತೊಂದು ಮದುವೆಯಾಗಲು ಹೋಗಿ ಸಿಕ್ಕಿಬಿದ್ಲು

ಎಂಟನೇ ಮದುವೆಯಾಗಲು ಹೊರಟಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ, ಈ ಘಟನೆ ರಾಜಸ್ಥಾನದ ಚುರುವಿನಲ್ಲಿ ನಡೆದಿದೆ. ಆಕೆ ಯುವಕರನ್ನು ಮದುವೆಯಾಗಿ ಕೆಲ ದಿನಗಳ ಕಾಲ ಅಲ್ಲೇ ಇದ್ದು ಬಳಿಕ ಬೆಳ್ಳಿ, ಬಂಗಾರವನ್ನೆಲ್ಲಾ ದೋಚಿ ಪರಾರಿಯಾಗುತ್ತಿದ್ದಳು.

7 ಮಂದಿ ಗಂಡಂದಿರು, ಮೂವರು ಮಕ್ಕಳಿದ್ದ ಮಹಿಳೆ ಮತ್ತೊಂದು ಮದುವೆಯಾಗಲು ಹೋಗಿ ಸಿಕ್ಕಿಬಿದ್ಲು

Updated on: Jun 20, 2024 | 10:47 AM

ಏಳು ಮಂದಿ ಗಂಡಂದಿರು, ಮೂವರು ಮಕ್ಕಳಿದ್ದ ಮಹಿಳೆ ಎಂಟನೇ ಮದುವೆಯಾಗಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ರಾಜಸ್ಥಾನದ ಚುರುನಲ್ಲಿ ನಡೆದಿದೆ. ಮಹಿಳೆ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದಳು, ಆಕೆಗೆ ಮೂವರು ಮಕ್ಕಳಿದ್ದರು, ನಂತರ ಆಕೆ ಪತಿಯಿಂದ ವಿಚ್ಛೇದನ ಪಡೆದಿದ್ದಳು. ನಂತರ ಆಕೆ ಮದುವೆಯನ್ನು ದಂಧೆಯಾಗಿಸಿಕೊಂಡಿದ್ದಳು.

ಶ್ರೀಮಂತರ ಹುಡುಗರನ್ನು ಬಲೆಗೆ ಬೀಳಿಸಿ ಮದುವೆಯಾಗಿ 10,12 ದಿನಗಳ ಕಾಲ ಅದೇ ಮನೆಯಲ್ಲಿದ್ದು ಬಳಿಕ ಲೂಟಿ ಮಾಡುತ್ತಿದ್ದಳು. ಇದುವರೆಗೆ ಆಕೆ ಏಳು ಮಂದಿಯನ್ನು ಮದುವೆಯಾಗಿ ವಂಚಿಸಿದ್ದಳು, 8ನೇ ವ್ಯಕ್ತಿಯನ್ನು ಮದುವೆಯಾಗಲು ತೆರಳಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಮತ್ತಷ್ಟು ಓದಿ: ಸಪ್ತಪದಿಗೂ ಮುನ್ನ ವಧುವಿನ ಮುಖ ನೋಡಿ ಮದುವೆ ಬೇಡ ಎಂದ ವರ

ಪೋಲೀಸ್ ಸ್ಟೇಷನ್ ನಲ್ಲಿ ಆಕೆ ಪೊಲೀಸರಿಗೆ ಪೂರ್ತಿ ಕಥೆ ಹೇಳಿದಾಗ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ತಾನು ರತನ್‌ಗಢ ನಿವಾಸಿ ಎಂದು ಹೇಳಿದ್ದಾಳೆ. ಮೊದಲ ಪತಿಯಿಂದ ವಿಚ್ಛೇದನದ ನಂತರ, ಅವರು ಏಳು ಯುವಕರನ್ನು ಮದುವೆಯಾದಳು. ನಂತರ ಅವಳು ದರೋಡೆ ಮಾಡಿ ಓಡಿಹೋಗಿದ್ದಾಳೆ.

ಆಕೆಯದ್ದು ಗ್ಯಾಂಗ್​ ಕೂಡ ಇದೆ, ಗ್ಯಾಂಗ್ ಜತೆ ಸೇರಿ ಕೆಲವು ಟ್ರಕ್ ಚಾಲಕರನ್ನು ಕೂಡ ದರೋಡೆ ಮಾಡಿದ್ದಾಳೆ. ಆಕೆ ಏಪ್ರಿಲ್​ 8ರಂದು ಬಿಕಾನೇರ್​ನ ಲುಂಕಾರನ್​ಸರ್ ನಿವಾಸಿ ವೀರ್​ಪಾಲ್ ಅವರನ್ನು ವಿವಾಹವಾಗಿದ್ದಳು, ಆದರೆ ಮದುವೆಯಾಗಿ 20 ದಿನಗಳ ಬಳಿಕ ಆಕೆ ಅಲ್ಲಿಂದ ಓಡಿಹೋಗಿದ್ದಳು, ಈಗ ಎಂಟನೇ ಮದುವೆಯಾಗಲು ಯೋಜನೆ ರೂಪಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us