ಪರಸ್ಪರ ಹಿತಾಸಕ್ತಿಯೇ ಭಾರತ-ಬಾಂಗ್ಲಾದೇಶ ಸಂಬಂಧದ ಅಡಿಪಾಯ: ವಿದೇಶಾಂಗ ಸಚಿವರ ರಾಜತಾಂತ್ರಿಕ ಸಂದೇಶ

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭಾರತ-ಬಾಂಗ್ಲಾದೇಶ ಸಂಬಂಧಕ್ಕೆ ಪರಸ್ಪರ ಹಿತಾಸಕ್ತಿ ಮತ್ತು ಗೌರವವೇ ಅಡಿಪಾಯ ಎಂದಿದ್ದಾರೆ. ಶೇಖ್ ಹಸೀನಾ ಹಸ್ತಾಂತರ ವಿವಾದದ ನಡುವೆಯೂ, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳು ಸ್ಥಿರವಾಗಿ ಮುಂದುವರೆಯಲು ಸಮತೋಲನ ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. ಬಾಂಗ್ಲಾದೇಶದ ಸ್ಥಿರತೆ ಭಾರತದ ಭದ್ರತೆ, ವ್ಯಾಪಾರ ಮತ್ತು ಸಂಪರ್ಕಕ್ಕೆ ನಿರ್ಣಾಯಕವಾಗಿದೆ.

ಪರಸ್ಪರ ಹಿತಾಸಕ್ತಿಯೇ ಭಾರತ-ಬಾಂಗ್ಲಾದೇಶ ಸಂಬಂಧದ ಅಡಿಪಾಯ: ವಿದೇಶಾಂಗ ಸಚಿವರ ರಾಜತಾಂತ್ರಿಕ ಸಂದೇಶ
ಜೈಶಂಕರ್

Updated on: Aug 23, 2026 | 11:27 AM

ನವದೆಹಲಿ, ಆಗಸ್ಟ್​ 23: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ಅವರನ್ನು ಹಸ್ತಾಂತರಿಸುವಂತೆ ಢಾಕಾ ಪದೇ ಪದೇ ಒತ್ತಾಯಿಸುತ್ತಿರುವ ನಡುವೆಯೇ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧವು ಪರಸ್ಪರ ಹಿತಾಸಕ್ತಿಯ ಪರೀಕ್ಷೆಯನ್ನು ಎದುರಿಸಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಪ್ರತಿಪಾದಿಸಿದ್ದಾರೆ.

ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಂನಲ್ಲಿ ಮಾತನಾಡಿದ ಅವರು, ಯಾವುದೇ ಅಂತಾರಾಷ್ಟ್ರೀಯ ದ್ವಿಪಕ್ಷೀಯ ಸಂಬಂಧ ಸರಾಗವಾಗಿ ಸಾಗಲು ಎರಡೂ ದೇಶಗಳ ನಡುವೆ ಸಮತೋಲನವಿರಬೇಕು ಎಂದು ಸ್ಪಷ್ಟಪಡಿಸಿದರು.

ಪರಸ್ಪರ ಹಿತಾಸಕ್ತಿಯೇ ಮುಖ್ಯ: ಯಾವುದೇ ಸಂಬಂಧ ಕೆಲಸ ಮಾಡಬೇಕಾದರೆ ಅದು ಪರಸ್ಪರ ಹಿತಾಸಕ್ತಿಯ ಪರೀಕ್ಷೆಯನ್ನು ಎದುರಿಸಬೇಕು. ನೆರೆಹೊರೆಯವರು ನಮ್ಮ ಇಷ್ಟ ಮತ್ತು ಹಿತಾಸಕ್ತಿಗೆ ಅನುಗುಣವಾಗಿ ಮಾತ್ರ ನಡೆದುಕೊಳ್ಳಬೇಕೆಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ನಾವು ಅವರ ಹಿತಾಸಕ್ತಿಯನ್ನು ಗೌರವಿಸಬೇಕು, ಹಾಗೆಯೇ ಅವರೂ ನಮ್ಮ ಹಿತಾಸಕ್ತಿಯನ್ನು ಗೌರವಿಸಬೇಕು ಎಂದು ಜೈಶಂಕರ್ ಹೇಳಿದರು.

ಭಿನ್ನಾಭಿಪ್ರಾಯಗಳ ನಡುವೆ ಸಮನ್ವಯ: ಉಭಯ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪರಸ್ಪರ ಗೌರವ ನೀಡಿದಾಗ ಮಾತ್ರ ರಾಜತಾಂತ್ರಿಕ ಸಂಬಂಧಗಳು ಸ್ಥಿರವಾಗಿ ಮುಂದುವರಿಯುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಮತ್ತಷ್ಟು ಓದಿ: Sheikh Hasina: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಪ್ರತಿಭಟನೆ; ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ, ಭಾರತಕ್ಕೆ ಪಲಾಯನ

ಶೇಖ್ ಹಸೀನಾ ಹಸ್ತಾಂತರ ವಿವಾದ: 2024 ರ ಆಗಸ್ಟ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಬಳಿಕ ಅಧಿಕಾರ ಕಳೆದುಕೊಂಡು ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಅವರನ್ನು ವಿಚಾರಣೆಗಾಗಿ ಹಸ್ತಾಂತರಿಸಬೇಕೆಂದು ಬಾಂಗ್ಲಾದೇಶದ ನೂತನ ಆಡಳಿತ ನಿರಂತರವಾಗಿ ಬೇಡಿಕೆ ಇಡುತ್ತಿದೆ. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ (BNP) ಉನ್ನತ ನಾಯಕ ತಾರಿಕ್ ರೆಹಮಾನ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬ ವರದಿಗಳ ನಡುವೆ ಈ ಮಾತುಗಳು ಹೊರಬಂದಿವೆ.

ಭಾರತೀಯ ಹೈಕಮಿಷನರ್ ಮಾತುಕತೆ: ಬಾಂಗ್ಲಾದೇಶದಲ್ಲಿರುವ ಭಾರತೀಯ ಹೈಕಮಿಷನರ್ ಅವರು ಅಲ್ಲಿನ ಉನ್ನತ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಗಡಿ ಸಹಕಾರವನ್ನು ಪುನರಾರಂಭಿಸಲು ಯತ್ನಿಸುತ್ತಿದ್ದಾರೆ.

ಬಾಂಗ್ಲಾದೇಶದೊಂದಿಗೆ ಭಾರತವು 4,096 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿದ್ದು, ಈಶಾನ್ಯ ರಾಜ್ಯಗಳ ಭದ್ರತೆ, ಸಾರಿಗೆ ಸಂಪರ್ಕ ಮತ್ತು ಗಡಿಯಾಚೆಗಿನ ವ್ಯಾಪಾರಕ್ಕೆ ಬಾಂಗ್ಲಾದೇಶದ ಸ್ಥಿರತೆ ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ.

ಬಾಂಗ್ಲಾದೇಶಕ್ಕೆ ಭಾರತದಿಂದ ವಿದ್ಯುತ್ ರಫ್ತು ಹಾಗೂ ಅಭಿವೃದ್ಧಿ ಸಾಲ ನೆರವಿನ ಯೋಜನೆಗಳು ನಡೆಯುತ್ತಿದ್ದು, ರಾಜಕೀಯ ಬದಲಾವಣೆಯ ನಂತರ ಈ ಯೋಜನೆಗಳನ್ನು ಸುರಕ್ಷಿತವಾಗಿ ಮುಂದುವರೆಸುವುದು ಭಾರತದ ಪ್ರಮುಖ ಆದ್ಯತೆಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:27 am, Sun, 23 August 26

Loading...
Unable to load recommendations.
Follow Us