ಭಾರತದಿಂದ ಕೊರೊನಾ ಲಸಿಕೆ ರಫ್ತಿಗೆ ಏಳು ತಿಂಗಳು ನಿಷೇಧ
ಈ ಲಸಿಕೆ ತುರ್ತು ಬಳಕೆಗೆ ಭಾನುವಾರ ಅನುಮತಿ ಸಿಕ್ಕಿದೆ. ಭಾರತದ ಜನರಿಗೆ ಮೊದಲು ಔಷಧ ಸಿಗುವಂತೆ ನೋಡಿಕೊಳ್ಳಲು ಏಳು ತಿಂಗಳ ಕಾಲ ಭಾರತ ಔಷಧ ರಫ್ತು ಮಾಡುವಂತಿಲ್ಲ.
ನವದೆಹಲಿ: ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಹಾಗೂ-ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯನ್ನು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತದಲ್ಲಿ ತಯಾರಿಸುತ್ತಿದೆ. ಆದರೆ, ಇದನ್ನು ಏಳು ತಿಂಗಳು ರಫ್ತು ಮಾಡಲು ಅನುಮತಿ ನೀಡುವುದಿಲ್ಲ ಎಂದು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಅದರ್ ಪೂನಾವಾಲಾ ತಿಳಿಸಿದ್ದಾರೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಹಾಗೂ-ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆ ತುರ್ತು ಬಳಕೆಗೆ ಭಾನುವಾರ ಅನುಮತಿ ಸಿಕ್ಕಿದೆ. ಭಾರತದ ಜನರಿಗೆ ಮೊದಲು ಔಷಧ ಸಿಗುವಂತೆ ನೋಡಿಕೊಳ್ಳಲು ಏಳು ತಿಂಗಳ ಕಾಲ ಭಾರತ ಔಷಧ ರಫ್ತು ಮಾಡುವಂತಿಲ್ಲ. ಅಲ್ಲದೆ, ಖಾಸಗಿ ಮಾರುಕಟ್ಟೆಗೆ ಇದನ್ನು ಮಾರುವಂತಿಲ್ಲ ಎನ್ನುವ ಷರತ್ತು ವಿಧಿಸಲಾಗಿದೆ ಎಂದಿರುವ ಪೂನಾವಾಲಾ ಭಾರತ ಸರ್ಕಾರಕ್ಕೆ ಮಾತ್ರ ಔಷಧ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ವಿಶ್ವದ ಅತಿ ದೊಡ್ಡ ಔಷಧ ಉತ್ಪಾದನಾ ಸಂಸ್ಥೆ ಸೆರಮ್ ಇನ್ಸ್ಟಿಟ್ಯೂಟ್ ಭಾರತದಲ್ಲಿ ಕೊರೊನಾ ಔಷಧ ಉತ್ಪಾದನೆ ಮಾಡಲಿದ್ದು, ಇದರಲ್ಲಿ ಬಹುತೇಕ ಔಷಧವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕಾಯ್ದಿರಿಸಿಕೊಂಡಿವೆ. ಹೀಗಾಗಿ, ಬಡ ರಾಷ್ಟ್ರಗಳು ಔಷಧ ಪಡೆಯಲು ಕೆಲ ವರ್ಷ ಕಾಯಬೇಕಿದೆ.
ಆಕ್ಸ್ಫರ್ಡ್ ವಿಜ್ಞಾನಿಗಳು ಸಂಶೋಧಿಸಿರುವ ಕೊರೊನಾ ಔಷಧ ಮಾನವ ಬಳಕೆಗೆ ಸಿದ್ಧ!