ಸ್ವಿಸ್​ಬ್ಯಾಂಕ್​ಗಳಲ್ಲಿ ಹೊಸದಾಗಿ ಖಾತೆ ತೆರೆದಿರುವ ಭಾರತೀಯರೆಷ್ಟು?, ಬ್ಯಾಂಕ್ ನೀಡಿರುವ ವಿವರ ಇಲ್ಲಿದೆ

ಸ್ವಿಸ್​ ಬ್ಯಾಂಕ್(Swiss Bank)​ಗಳಲ್ಲಿರುವ ಭಾರತೀಯರ ಹೊಸ ಖಾತೆಗಳ ಬಗ್ಗೆ ಸ್ವಿಸ್ಜರ್​ಲೆಂಡ್ ಮಾಹಿತಿ ನೀಡಿದೆ. ಇದು ದ್ವಿಟ್ಜರ್​ಲೆಂಡ್ ಹಾಗೂ ಭಾರತದ ನಡುವಿನ ಐದನೇ ವಾರ್ಷಿಕ ಮಾಹಿತಿ ವಿನಿಮಯವಾಗಿದೆ. ಭಾರತೀಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾದ ಹೊಸ ವಿವರಗಳು ನೂರಾರು ಖಾತೆಗಳಿಗೆ ಸಂಬಂಧಿಸಿದೆ, ಹಾಗೂ ಕೆಲವು ವ್ಯಕ್ತಿಗಳು, ಕಾರ್ಪೊರೇಟ್​ ಕಂಪನಿಗಳು, ಟ್ರಸ್ಟ್​ಗಳಿಗೆ ಸಂಬಂಧಿಸಿದ್ದಾಗಿದೆ. ಸ್ವಿಟ್ಜರ್​ಲೆಂಡ್ 104 ದೇಶಗಳೊಂದಿಗೆ ಸುಮಾರು 36 ಲಕ್ಷ ಖಾತೆಗಳ ವಿವರಗಳನ್ನು ಹಂಚಿಕೊಂಡಿದೆ. ವಿವರಗಳೇನು? ಭಾರತೀಯ ಅಧಿಕಾರಿಗಳೊಂದಿಗೆ ವ್ಯಕ್ತಿಗಳು, ಕಾರ್ಪೊರೇಟ್ ಕಂಪನಿಗಳು, ಟ್ರಸ್ಟ್​ಗಳ ಹೆಸರು, ವಿಳಾಸ, ವಾಸಿಸುವ ದೇಶ ಹಾಗೂ […]

ಸ್ವಿಸ್​ಬ್ಯಾಂಕ್​ಗಳಲ್ಲಿ ಹೊಸದಾಗಿ ಖಾತೆ ತೆರೆದಿರುವ ಭಾರತೀಯರೆಷ್ಟು?, ಬ್ಯಾಂಕ್ ನೀಡಿರುವ ವಿವರ ಇಲ್ಲಿದೆ
ಸ್ವಿಸ್ ಬ್ಯಾಂಕ್Image Credit source: Millenium Post
Follow us
ನಯನಾ ರಾಜೀವ್
|

Updated on:Oct 10, 2023 | 12:13 PM

ಸ್ವಿಸ್​ ಬ್ಯಾಂಕ್(Swiss Bank)​ಗಳಲ್ಲಿರುವ ಭಾರತೀಯರ ಹೊಸ ಖಾತೆಗಳ ಬಗ್ಗೆ ಸ್ವಿಸ್ಜರ್​ಲೆಂಡ್ ಮಾಹಿತಿ ನೀಡಿದೆ. ಇದು ದ್ವಿಟ್ಜರ್​ಲೆಂಡ್ ಹಾಗೂ ಭಾರತದ ನಡುವಿನ ಐದನೇ ವಾರ್ಷಿಕ ಮಾಹಿತಿ ವಿನಿಮಯವಾಗಿದೆ. ಭಾರತೀಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾದ ಹೊಸ ವಿವರಗಳು ನೂರಾರು ಖಾತೆಗಳಿಗೆ ಸಂಬಂಧಿಸಿದೆ, ಹಾಗೂ ಕೆಲವು ವ್ಯಕ್ತಿಗಳು, ಕಾರ್ಪೊರೇಟ್​ ಕಂಪನಿಗಳು, ಟ್ರಸ್ಟ್​ಗಳಿಗೆ ಸಂಬಂಧಿಸಿದ್ದಾಗಿದೆ. ಸ್ವಿಟ್ಜರ್​ಲೆಂಡ್ 104 ದೇಶಗಳೊಂದಿಗೆ ಸುಮಾರು 36 ಲಕ್ಷ ಖಾತೆಗಳ ವಿವರಗಳನ್ನು ಹಂಚಿಕೊಂಡಿದೆ.

ವಿವರಗಳೇನು? ಭಾರತೀಯ ಅಧಿಕಾರಿಗಳೊಂದಿಗೆ ವ್ಯಕ್ತಿಗಳು, ಕಾರ್ಪೊರೇಟ್ ಕಂಪನಿಗಳು, ಟ್ರಸ್ಟ್​ಗಳ ಹೆಸರು, ವಿಳಾಸ, ವಾಸಿಸುವ ದೇಶ ಹಾಗೂ ತೆರಿಗೆ, ಖಾತೆ ಹಾಗೂ ಹಣಕಾಸಿನ ವಿವರಗಳನ್ನು ಹಂಚಿಕೊಂಡಿದ್ದಾರೆ. ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಸೇರಿದಂತೆ ಎಲ್ಲಾದರೂ ಈ ಹಣ ಬಳಕೆಯಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ಅಧಿಕಾರಿಗಳು ಹೇಳಿದ್ದೇನು? ಕಳೆದ ತಿಂಗಳು ವಿನಿಮಯ ನಡೆದಿದೆ, ಸ್ವಿಟ್ಜರ್​ಲೆಂಡ್​ 2024ರಲ್ಲಿ ಮತ್ತೆ ಮಾಹಿತಿಯನ್ನು ಹಂಚಿಕೊಳ್ಳಲಿದೆ ಈ ಮಾಹಿತಿಯ ಆಧಾರದ ಮೇಲೆ ತೆರಿಗೆದಾರರು ಮತ್ತು ಆದಾಯ ತೆರಿಗೆ ರಿಟರ್ನ್ಸ್​ನಲ್ಲಿ ತಮ್ಮ ಹಣಕಾಸು ಖಾತೆಗಳನ್ನು ಸರಿಯಾಗಿ ಘೋಷಿಸಿದ್ದಾರೆಯೇ ಎಂದು ಪರಿಶೀಲಿಸುವುದು ಅಧಿಕಾರಿಗಳಿಗೆ ಸಾಧ್ಯವಾಗುತ್ತದೆ.

ಮತ್ತಷ್ಟು ಓದಿ: ಸ್ವಿಸ್ ಬ್ಯಾಂಕ್​ನಲ್ಲಿ ಖಾತೆ ತೆರೆಯೋದು ಹೇಗೆ? ಎಷ್ಟು ಗೌಪ್ಯತೆ ಕಾಯ್ದುಕೊಳ್ಳಲಾಗುತ್ತದೆ? ಇಲ್ಲಿದೆ ಡೀಟೇಲ್ಸ್

ಸಿಟ್ಜರ್​ಲೆಂಡ್ಮ ರಾಜಧಾನಿ ಬರ್ನ್​ನಲ್ಲಿ ಫೆಡರಲ್ ಟ್ಯಾಕ್ಸ್​ ಅಡ್ಮಿನಿಸ್ಟ್ರೇಷನ್ ಹೊರಡಿಸಿರುವ ಹೇಳಿಕೆಯಲ್ಲಿ ಹಣಕಾಸು ಖಾತೆ ವಿವರಗಳನ್ನು ಜಾಗತಿಕ ಮಾನದಂಡದ ಚೌಕಟ್ಟಿನೊಳಗೆ 104 ದೇಶಗಳೊಂದಿಗೆ ಹಂಚಿಕೊಳ್ಳಲಾಗಿದೆ. ಈ ವರ್ಷ ಕಜಕಿಸ್ತಾನ, ಮಾಲ್ಡೀವ್ಸ್​ ಮತ್ತು ಓಮನ್ ಅನ್ನು ಹಿಂದಿನ 101 ದೇಶಗಳ ಪಟ್ಟಿಗೆ ಸೇರಿಸಲಾಗಿದೆ. ಹಣಕಾಸು ಖಾತೆಗಳ ಸಂಖ್ಯೆ ಸುಮಾರು 2 ಲಕ್ಷದಷ್ಟು ಹೆಚ್ಚಾಗಿದೆ.

ಸ್ವಿಟ್ಜರ್ಲೆಂಡ್ ಸುಮಾರು 36 ಲಕ್ಷ ಹಣಕಾಸು ಖಾತೆಗಳ ವಿವರಗಳನ್ನು ಹಂಚಿಕೊಂಡಿದೆ. ಗಮನಾರ್ಹವಾಗಿ, ಇದು ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವೆ ಐದನೇ ಬಾರಿ ಮಾಹಿತಿ ವಿನಿಮಯವನ್ನು ನಡೆಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:13 pm, Tue, 10 October 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್