ಭಾರತದ ಸಂಗ್ರಹದಲ್ಲಿರುವುದು 5 ದಿನಕ್ಕಾಗುವಷ್ಟು ಕೊವಿಡ್ ಲಸಿಕೆ; ಲಸಿಕೆ ಕೊರತೆ ಇಲ್ಲ ಎಂದ ಕೇಂದ್ರ ಸರ್ಕಾರ

Covid 19 Vaccine: ಏಪ್ರಿಲ್ ತಿಂಗಳಲ್ಲಿ ದೇಶದಾದ್ಯಂತ 3.6 ದಶಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟು 19.6 ದಶಲಕ್ಷ ಡೋಸ್ ಈಗ ಸಂಗ್ರಹದಲ್ಲಿದ್ದು ಇದು ಐದೂವರೆ ದಿನಕ್ಕಾಗುವಷ್ಟಾಗಿದೆ. ಮುಂದಿನ ವಾರದಲ್ಲಿ 24.5 ದಶಲಕ್ಷ ಡೋಸ್ ಲಸಿಕೆ ತಯಾರಾಗಲಿದ್ದು ಒಂದು ವಾರಕ್ಕಾಗುವಷ್ಟಿದೆ.

ಭಾರತದ ಸಂಗ್ರಹದಲ್ಲಿರುವುದು 5 ದಿನಕ್ಕಾಗುವಷ್ಟು ಕೊವಿಡ್ ಲಸಿಕೆ; ಲಸಿಕೆ ಕೊರತೆ ಇಲ್ಲ ಎಂದ ಕೇಂದ್ರ ಸರ್ಕಾರ
ಮುಂಬೈಯಲ್ಲಿ ಕೊವಿಡ್ ಲಸಿಕೆ ವಿತರಣೆ ಕೇೆಂದ್ರ ಮುಂದೆ ನೇತು ಹಾಕಿದ ಬೋರ್ಡ್
Follow us
ರಶ್ಮಿ ಕಲ್ಲಕಟ್ಟ
|

Updated on:Apr 09, 2021 | 12:35 PM

ದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಮುಂದಿನ 5 ದಿನಗಳಿಗಾಗುವಷ್ಟು ಕೊವಿಡ್ ಲಸಿಕೆ ಸಂಗ್ರಹದಲ್ಲಿದೆ. ದೇಶದಾದ್ಯಂತ ಲಸಿಕೆ ನೀಡುವ ಪ್ರಕ್ರಿಯೆ ಮುಂದುವರಿದಿದ್ದು, ಲಸಿಕ ಕೊರತೆ ನೀಗಿಸುವಂತೆ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ. ಮುಂದಿನ ಒಂದು ವಾರದಲ್ಲಿ ಹೆಚ್ಚಿನ ಲಸಿಕೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆಂಧ್ರ ಪ್ರದೇಶ ಮತ್ತು ಬಿಹಾರದಲ್ಲಿ ಸದ್ಯ ಎರಡು ದಿನಗಳಿಗಾಗುವಷ್ಟು ಲಸಿಕೆ ಉಳಿದಿದೆ. ಒಡಿಶಾದಲ್ಲಿ ನಾಲ್ಕು ದಿನಗಳಿಗಾಗುವಷ್ಟು ಲಸಿಕೆ ಬಾಕಿ ಇದೆ. ಏಪ್ರಿಲ್ ತಿಂಗಳಲ್ಲಿ ದೇಶದಾದ್ಯಂತ 3.6 ದಶಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟು 19.6 ದಶಲಕ್ಷ ಡೋಸ್ ಈಗ ಸಂಗ್ರಹದಲ್ಲಿದ್ದು ಇದು ಐದೂವರೆ ದಿನಕ್ಕಾಗುವಷ್ಟಾಗಿದೆ. ಮುಂದಿನ ವಾರದಲ್ಲಿ 24.5 ದಶಲಕ್ಷ ಡೋಸ್ ಲಸಿಕೆ ತಯಾರಾಗಲಿದ್ದು ಒಂದು ವಾರಕ್ಕಾಗುವಷ್ಟಿದೆ.

ಆರೋಗ್ಯ ಸಚಿವಾಲಯದ ಅಧಿಕಾರಿಗಳ ಮಾಹಿತಿ ಪ್ರಕಾರ ಲಸಿಕೆ ಸಂಗ್ರಹ ಮತ್ತು ಲಸಿಕೆ ವಿತರಣೆಯ ಕಾರ್ಯಕ್ಕೆ 4ರಿಂದ 8 ದಿನಗಳು ಬೇಕಾಗುತ್ತವೆ. ಪ್ರತಿದಿನವೂ ಎಲ್ಲ ರಾಜ್ಯಗಳೊಂದಿಗೆ ಮಾತುಕತೆ ನಡೆಸಿ ಅಲ್ಲಿನ ಲಸಿಕೆ ವಿತರಣೆ, ಲಸಿಕೆ ಸಂಗ್ರಹದ ಅಂಕಿ ಅಂಶಗಳನ್ನು ಪರಿಶೀಲಿಸಲಾಗುತ್ತದೆ.

ಆಂಧ್ರ ಪ್ರದೇಶದಲ್ಲಿ ಕೇವಲ 1.4 ಲಕ್ಷ ಡೋಸ್ ಲಸಿಕೆ ಸಂಗ್ರಹದಲ್ಲಿದ. ಏಪ್ರಿಲ್ 1ರಿಂದ ಇಲ್ಲಿ ಪ್ರತಿ ದಿನ ಇಲ್ಲಿ ಸರಾಸರಿ 1.1 ಲಕ್ಷಕ್ಕಿಂತ ಡೋಸ್ ಲಸಿಕೆ ವಿತರಣೆ ನಡೆಯುತ್ತದೆ. 14.6 ಲಕ್ಷ ಡೋಸ್ ಲಸಿಕೆ ಆದಷ್ಟು ಬೇಗ ತಲುಪಲಿ ಎಂದು ಆಂಧ್ರ ಸರ್ಕಾರ ಕಾಯುತ್ತಿದೆ. ಬಿಹಾರದಲ್ಲಿಯೂ ಇದೇ ಪರಿಸ್ಥಿತಿ ಇದೆ. ಪ್ರತಿದಿನವೂ ಸರಾಸರಿ 1.7ಲಕ್ಷ ಡೋಸ್ ಲಸಿಕೆ ವಿತರಣೆಯಾಗುತ್ತಿದ್ದು 2.6 ಲಕ್ಷ ಡೋಸ್ ಲಸಿಕೆ ಸಂಗ್ರಹದಲ್ಲಿದೆ. ಅತೀ ಹೆಚ್ಚು ಜನಸಂಖ್ಯೆಯಿರುವ ತಮಿಳುನಾಡಿನಲ್ಲಿ ಕಳೆದ ವಾರ ಇ ಲಸಿಕೆ ವಿತರಣೆ ಅತೀ ಕಡಿಮೆ ಎಂದರೆ 37,000 ಆಗಿದ್ದು, ಈಗಲೂ 17 ಡೋಸ್ ಲಸಿಕೆ ಸಂಗ್ರಹದಲ್ಲಿದೆ. ಇತರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ವಾರಕ್ಕಾಗುವಷ್ಟೇ ಲಸಿಕೆ ಬಾಕಿ ಉಳಿದೆ.

ಮಹಾರಾಷ್ಟ್ರದಲ್ಲಿ ಪ್ರತಿ ದಿನ ಸರಾಸರಿ 3.9 ಲಕ್ಷ ಡೋಸ್ ಲಸಿಕೆ ವಿತರಣೆಯಾಗುತ್ತಿದೆ. ಇತರ ರಾಜ್ಯಗಳ ಪೈಕಿ ಅತೀ ಹೆಚ್ಚು ಡೋಸ್ ಲಸಿಕೆ ವಿತರಣೆಯಾಗುತ್ತಿರುವ ರಾಜ್ಯವಾಗಿದೆ ಮಹಾರಾಷ್ಟ್ರ. ಇಲ್ಲಿ 15ಲಕ್ಷ ಡೋಸ್ ಲಸಿಕೆ ಸಂಗ್ರಹದಲ್ಲಿದ್ದು, ನಾಲ್ಕು ದಿನಗಳಿಗಾಗುವಷ್ಟಾಗಿದೆ. ಉತ್ತರ ಪ್ರದೇಶ (2.5 ದಿನಗಳು ), ಉತ್ತರಾಖಂಡ (2.9), ಒಡಿಶಾ (3.2 ದಿನಗಳು), ಮಧ್ಯ ಪ್ರದೇಶದಲ್ಲಿ 3.5 ದಿನಗಳಿಗಾಗುವಷ್ಟು ಲಸಿಕೆ ಉಳಿದಿದೆ. ಮುಂದಿನ ದಿನಗಳಲ್ಲಿ ತಯಾರಾಗುವ ಲಸಿಕೆಗಳು ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಕ್ಕೆ ಸರಿಯಾದ ಸಮಯದಲ್ಲಿ ತಲುಪುವುದಾದರೆ ಅಲ್ಲಿ ಲಸಿಕೆ ಕೊರತೆ ಇರಲಾರದು. ದೇಶದಲ್ಲಿ ಏಪ್ರಿಲ್ 8, ಬೆಳಗ್ಗೆ 8.00ಗಂಟೆಯವರೆಗಿನ ಮಾಹಿತಿ ಪ್ರಕಾರ ಒಟ್ಟು 9,40,96,689 ಕೊವಿಡ್ ಲಸಿಕೆ ನೀಡಲಾಗಿದೆ. ಏಪ್ರಿಲ್ 7ರಂದು 34,73,083 ಡೋಸ್ ಲಸಿಕೆ ನೀಡಲಾಗಿದೆ.

ದೇಶದಲ್ಲಿ ಕೊವಿಡ್ ಲಸಿಕೆ ವಿತರಣೆ ಪ್ರಕ್ರಿಯೆಯ ಅಂಕಿ ಅಂಶಗಳನ್ನು ನೋಡಿದರೆ ಕರ್ನಾಟಕದಲ್ಲಿ ಒಟ್ಟು ಲಸಿಕೆ ಪಡೆದವರ ಸಂಖ್ಯೆ 54,63,774 . ಮೊದಲ ಡೋಸ್ – 49, 36,828, ಎರಡನೇ ಡೋಸ್ 5,26,946. ಕೇರಳದಲ್ಲಿ ಒಟ್ಟು ಲಸಿಕೆ ಪಡೆದವರ ಸಂಖ್ಯೆ 43,56,951 . ಮೊದಲ ಡೋಸ್ – 38,99,535 , ಎರಡನೇ ಡೋಸ್ 4,56,416. ತಮಿಳುನಾಡಿನಲ್ಲಿ ಒಟ್ಟು ಲಸಿಕೆ ಪಡೆದವರ ಸಂಖ್ಯೆ 34,02,198 . ಮೊದಲ ಡೋಸ್ – 30,62,266, ಎರಡನೇ ಡೋಸ್ 3,39,932. ಆಂಧ್ರ ಪ್ರದೇಶದಲ್ಲಿ ಒಟ್ಟು ಲಸಿಕೆ ಪಡೆದವರ ಸಂಖ್ಯೆ 34,97015 . ಮೊದಲ ಡೋಸ್ – 3020636, ಎರಡನೇ ಡೋಸ್ 4,76,379. ದೆಹಲಿಯಲ್ಲಿ ಒಟ್ಟು ಲಸಿಕೆ ಪಡೆದವರ ಸಂಖ್ಯೆ 18,97,553 . ಮೊದಲ ಡೋಸ್ – 15,65,598, ಎರಡನೇ ಡೋಸ್ 3,31,955 ಆಗಿದೆ.

ಆದಾಗ್ಯೂ,  ದೇಶದಲ್ಲಿ ಕೊವಿಡ್ ಲಸಿಕೆಯ ಕೊರತೆ ಇಲ್ಲ. ನಾವು ನಿರಂತರವಾಗಿ ನಿಗಾ ವಹಿಸಿ , ಲಸಿಕೆ ಪೂರೈಸುತ್ತಿದ್ದೇವೆ.  ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು  ಕೇಂದ್ರ ಸರ್ಕಾರ ಹೇಳಿದೆ.

ಇದನ್ನೂ ಓದಿ:  India Coronavirus Update: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,30,60,542 ಕೊರೊನಾ ಸೋಂಕಿತರು ಪತ್ತೆ; 780 ಜನರು ಸಾವು

Published On - 12:34 pm, Fri, 9 April 21

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM