
ಚೆನ್ನೈ, ಜನವರಿ 2: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಇಂದು (ಶುಕ್ರವಾರ) ಪಾಕಿಸ್ತಾನದ ಮೇಲೆ ತೀಕ್ಷ್ಣವಾದ ದಾಳಿ ನಡೆಸಿದರು. ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು ಮುಂದುವರಿಸುವ “ಕೆಟ್ಟ ನೆರೆಹೊರೆಯವರು” ಎಂದು ಪಾಕಿಸ್ತಾನವನ್ನು ಟೀಕಿಸಿದ್ದಾರೆ. ಅಂತಹ ಬೆದರಿಕೆಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಎಲ್ಲಾ ಹಕ್ಕನ್ನು ಭಾರತ ಹೊಂದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಐಐಟಿ ಮದ್ರಾಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಎಸ್. ಜೈಶಂಕರ್, ಭಾರತವು ತನ್ನ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಭಯೋತ್ಪಾದನೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ಹೊರಗಿನ ದೇಶದ ಸಲಹೆಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅಂತ್ಯಕ್ರಿಯೆ; ಕುಟುಂಬಕ್ಕೆ ಪ್ರಧಾನಿ ಮೋದಿಯ ಪತ್ರ ನೀಡಿದ ಸಚಿವ ಜೈಶಂಕರ್
“ಭಯೋತ್ಪಾದನೆಯನ್ನು ಮುಂದುವರಿಸುವ ಕೆಟ್ಟ ನೆರೆಹೊರೆಯವರ ವಿಷಯಕ್ಕೆ ಬಂದಾಗ ಭಾರತವು ತನ್ನ ಜನರನ್ನು ರಕ್ಷಿಸುವ ಎಲ್ಲಾ ಹಕ್ಕನ್ನು ಹೊಂದಿದೆ ಮತ್ತು ಅಗತ್ಯವಿರುವ ಎಲ್ಲವನ್ನೂ ಮಾಡುತ್ತದೆ. ನಮ್ಮ ನೀರನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಮತ್ತು ನಮ್ಮ ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
VIDEO | Chennai: EAM S. Jaishankar (@DrSJaishankar), speaking at an IIT Madras event, says, “I was in Bangladesh just two days ago to represent India at the funeral of former Prime Minister Begum Khaleda Zia. But more broadly, our approach to the neighbourhood is guided by common… pic.twitter.com/8GgEmG1rOz
— Press Trust of India (@PTI_News) January 2, 2026
ಅಗತ್ಯದ ಸಮಯದಲ್ಲಿ ಭಾರತವು ತನ್ನ ನೆರೆಹೊರೆಯವರನ್ನು ನಿರಂತರವಾಗಿ ಬೆಂಬಲಿಸಿದೆ. ಆದರೆ, ನೆರೆಹೊರೆಯ ಬಗ್ಗೆ ನಮ್ಮ ವಿಧಾನವು ಸಾಮಾನ್ಯ ಜ್ಞಾನದಿಂದ ಮಾರ್ಗದರ್ಶಿಸಲ್ಪಡುತ್ತದೆ. ಉತ್ತಮ ನೆರೆಹೊರೆಯವರೊಂದಿಗೆ ಭಾರತವು COVID ಸಮಯದಲ್ಲಿ ಲಸಿಕೆಗಳು, ಉಕ್ರೇನ್ ಸಂಘರ್ಷದ ಸಮಯದಲ್ಲಿ ಇಂಧನ ಮತ್ತು ಆಹಾರ ಬೆಂಬಲ ಅಥವಾ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ 4 ಬಿಲಿಯನ್ ಡಾಲರ್ ಸಹಾಯವನ್ನು ಮಾಡಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಭಯೋತ್ಪಾದನೆ ಬಗ್ಗೆ ಸಮರ್ಥನೆಗೆ ಅವಕಾಶವೇ ಇಲ್ಲ; SCO ಶೃಂಗಸಭೆಯಲ್ಲಿ ಸಚಿವ ಜೈಶಂಕರ್ ಸಂದೇಶ
ಏಪ್ರಿಲ್ 2025ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಹಲವಾರು ಪ್ರವಾಸಿಗರನ್ನು ಕೊಂದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಮತ್ತಷ್ಟು ಹದಗೆಟ್ಟವು. ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಶಿಕ್ಷಾರ್ಹ ಕ್ರಮಗಳನ್ನು ಘೋಷಿಸಿತು, ಇದರ ಬಳಿಕ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ