AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಕ್ಸ್ ಗುಂಪು: ಭಾರತದ ಹವಾ ಆವತ್ತೇ ಬೇರೆ ಇವತ್ತೇ ಬೇರೆ; ದುರ್ಬಲ ಕೊಂಡಿಯಾಗಿದ್ದ ದೇಶ ಇಂದು ಗ್ರೋತ್ ಎಂಜಿನ್

ಭಾರತ ದೇಶವು 2026ರ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆ ವಹಿಸಿದೆ. 2012ರಲ್ಲಿ ಮೊದಲ ಬಾರಿಗೆ ಬ್ರಿಕ್ಸ್ ಸಭೆಯ ಅಧ್ಯಕ್ಷತೆ ಭಾರತಕ್ಕೆ ಸಿಕ್ಕಿತ್ತು. 14 ವರ್ಷದ ಹಿಂದೆ ಭಾರತವು ಜಾಗತಿಕ ದೃಷ್ಟಿಯಲ್ಲಿ ಆಶಾದಾಯಕ ಸ್ಥಿತಿಯಲ್ಲಿರಲಿಲ್ಲ. ದುರ್ಬಲ ಆರ್ಥಿಕತೆ ಮತ್ತು ಅಧಿಕ ಹಣದುಬ್ಬರದಿಂದ ಜರ್ಝರಿತಗೊಂಡಿತ್ತು. ಈಗ ಪರಿಸ್ಥಿತಿ ಬದಲಾಗಿದೆ.

ಬ್ರಿಕ್ಸ್ ಗುಂಪು: ಭಾರತದ ಹವಾ ಆವತ್ತೇ ಬೇರೆ ಇವತ್ತೇ ಬೇರೆ; ದುರ್ಬಲ ಕೊಂಡಿಯಾಗಿದ್ದ ದೇಶ ಇಂದು ಗ್ರೋತ್ ಎಂಜಿನ್
ಭಾರತImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 11, 2026 | 12:06 PM

Share

ನವದೆಹಲಿ, ಸೆಪ್ಟೆಂಬರ್ 11: ಬ್ರಿಕ್ಸ್ (BRICS) 2026 ಶೃಂಗಸಭೆಯ ಆತಿಥ್ಯ ವಹಿಸಲು ಭಾರತ ಸಜ್ಜಾಗುತ್ತಿದೆ. ಸೆಪ್ಟೆಂಬರ್ 12ರಿಂದ ನಡೆಯುವ ಈ ಸಭೆಯಲ್ಲಿ ಭಾರತದ ಪ್ರಾಮುಖ್ಯತೆ ಈಗ ನಿಸ್ಸಂಶಯಾತೀತವಾಗಿದೆ. ಗುಂಪಿನಲ್ಲಿ ಚೀನಾ ಅತಿ ಪ್ರಬಲ ರಾಷ್ಟ್ರವೆನಿಸಿದರೂ ಭಾರತಕ್ಕಿರುವ ಪ್ರಾಮುಖ್ಯತೆ ಕಡಿಮೆ ಏನಿಲ್ಲ. ಕೆಲ ವರ್ಷಗಳ ಹಿಂದೆ ಬ್ರಿಕ್ಸ್ ಗುಂಪಿನಲ್ಲಿ ದುರ್ಬಲ ಕೊಂಡಿ ಎನಿಸಿದ್ದ ಭಾರತ ಈಗ ಪ್ರಬಲ ಕೊಂಡಿಯಾಗಿ ಬೆಳೆದು ನಿಂತಿರುವುದು ಸಾಮಾನ್ಯವಲ್ಲ. ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಸ್ಥಾನಮಾನ ಮತ್ತು ಬ್ರಿಕ್ಸ್ ಒಕ್ಕೂಟದಲ್ಲಿ ದೇಶದ ಪ್ರಾಬಲ್ಯ ತೀವ್ರವಾಗಿ ಬದಲಾಗಿದೆ. 2012ರಲ್ಲಿ ಭಾರತ ಬ್ರಿಕ್ಸ್ ಶೃಂಗಸಭೆ ಆಯೋಜಿಸಿದ್ದಾಗ ಎದುರಿಸಿದ್ದ ‘ದುರ್ಬಲ ದೇಶ’ ಎಂಬ ಅಪವಾದವನ್ನು ಮೆಟ್ಟಿ ನಿಂತು, ಇಂದು ಒಕ್ಕೂಟದ ಪ್ರಮುಖ ‘ಗ್ರೋತ್ ಇಂಜಿನ್’ ಆಗಿ ಹೊರಹೊಮ್ಮಿದೆ.

ಭಾರತ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆ ವಹಿಸುತ್ತಿರುವುದು ಇದು ನಾಲ್ಕನೇ ಬಾರಿ. ಮೊದಲ ಬಾರಿ ಆತಿಥ್ಯ ವಹಿಸಿದ್ದು 2012ರಲ್ಲಿ. ಆಗ ಕೆಲ ಪರಿಣಿತರ ಪ್ರಕಾರ ಬ್ರಿಕ್ಸ್ ರಾಷ್ಟ್ರಗಳ ಮಧ್ಯೆ ಭಾರತ ಒಂದು ದುರ್ಬಲ ಕೊಂಡಿಯಾಗಿತ್ತು. ಇವತ್ತು ಸಂದರ್ಭ, ಕಾಲ, ಪರಿಸ್ಥಿತಿ ಬದಲಾಗಿದೆ. ಭಾರತವೂ ಬದಲಾಗಿದೆ. 2012 ಮತ್ತು 2026ರ ಮಧ್ಯೆ ಪ್ರಮುಖ ಬದಲಾವಣೆಗಳೇನು? ಇದೊಂದು ಇಂಟರೆಸ್ಟಿಂಗ್ ಪ್ರಯಾಣ…

ಇದನ್ನೂ ಓದಿ: ಬ್ರಿಕ್ಸ್ ರಾಷ್ಟ್ರಗಳೊಂದಿಗೆ ಭಾರತದ ವ್ಯಾಪಾರ ಕೊರತೆ ಬರೋಬ್ಬರಿ 226 ಬಿಲಿಯನ್ ಡಾಲರ್

ಆರ್ಥಿಕ ಹಿಂಜರಿತದಿಂದ ಜಾಗತಿಕ ವೇಗದ ಬೆಳವಣಿಗೆಗೆ

2012ರಲ್ಲಿ ಜಿಡಿಪಿ (GDP) ದರ ಶೇಕಡಾ 5 ಕ್ಕಿಂತ ಕಡಿಮೆಗೆ ಕುಸಿದಿತ್ತು, ಜೊತೆಗೆ ಎರಡಂಕಿ ಹಣದುಬ್ಬರ ಇತ್ತು. “ಬ್ರಿಕ್ಸ್‌ನಲ್ಲಿ ಭಾರತ ಇರಲು ಅರ್ಹವೇ?”, “ಇಂಡೋನೇಷ್ಯಾವನ್ನು ಭಾರತದ ಬದಲಿಗೆ ಸೇರಿಸಬೇಕೇ?” ಎಂಬ ಪ್ರಶ್ನೆಗಳು ಎದ್ದಿದ್ದವು. ಬ್ರಿಕ್ಸ್ ಪದ ಹುಟ್ಟು ಹಾಕಿದ್ದ ಜಿಮ್ ಒ‘ನೀಲ್ ಅವರೇಖುದ್ದಾಗಿ 2012ರಲ್ಲಿ ಈ ಮಾತನಾಡಿದ್ದರು.

2026ರಲ್ಲ ಪರಿಸ್ಥಿತಿ ಬದಲಾಗಿದೆ. 2026-27ರ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ಶೇ. 7.8ರಷ್ಟು ದಾಖಲಾಗಿದೆ. ಜಾಗತಿಕ ಆರ್ಥಿಕತೆಗಿಂತ ಬಹುತೇಕ ಮೂರು ಪಟ್ಟು ವೇಗದಲ್ಲಿ ಬೆಳೆದಿದೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೃಹತ್ ಆರ್ಥಿಕತೆಯಾಗಿ ಮುಂದುವರಿದಿದೆ.

ಸೋವರನ್ ರೇಟಿಂಗ್ ಏರಿಕೆ

2012ರಲ್ಲಿ S&P ಸಂಸ್ಥೆಯು ಭಾರತದ ಹೂಡಿಕೆ ದರ್ಜೆಯ ರೇಟಿಂಗ್‌ (Sovereign Rating Upgrade) ಕುಸಿಯಬಹುದು ಎಂದು ಎಚ್ಚರಿಸಿತ್ತು. 2026ರಲ್ಲಿ ‘ಜಪಾನ್ ಕ್ರೆಡಿಟ್ ರೇಟಿಂಗ್ ಏಜೆನ್ಸಿ’ (JCR) ಭಾರತದ ಸೋವರನ್ ರೇಟಿಂಗ್ ಅನ್ನು ‘BBB+’ ನಿಂದ ‘A-‘ (Stable Outlook) ಗೆ ಏರಿಸಿದೆ. ಬಲವಾದ ಆರ್ಥಿಕತೆ, ಸುಧಾರಿತ ವಿತ್ತೀಯ ವ್ಯವಸ್ಥೆ ಮತ್ತು ಬಲವಾದ ಹೊರಗಿನ ಆರ್ಥಿಕ ಭದ್ರತೆಯನ್ನು ಇದು ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಬಿಕ್ಕಟ್ಟು, ಚಬಹಾರ್ ಬಂದರು ಭವಿಷ್ಯ: ಇರಾನ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಹೈವೋಲ್ಟೇಜ್ ಮಾತುಕತೆ

ಭೌಗೋಳಿಕ-ರಾಜಕೀಯ ಮತ್ತು ಕಾರ್ಯತಂತ್ರದ ಪ್ರಭಾವ

ಅಮೆರಿಕ-ಚೀನಾ ಪೈಪೋಟಿ ಮತ್ತು ಜಾಗತಿಕ ರಾಜಕೀಯ ಘರ್ಷಣೆಗಳ ನಡುವೆ ಭಾರತದ ‘ತಟಸ್ಥ ರಾಜತಾಂತ್ರಿಕತೆ’ (Strategic Autonomy) ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಹಾಗೂ ಯುಎಇ ಯುವರಾಜ ಶೇಖ್ ಖಾಲೆದ್ ಅವರಂತಹ ಜಾಗತಿಕ ನಾಯಕರು ನವದೆಹಲಿ ಶೃಂಗಸಭೆಗೆ ಆಗಮಿಸುತ್ತಿರುವುದು ಭಾರತದ ಜಾಗತಿಕ ರಾಜತಾಂತ್ರಿಕ ಶಕ್ತಿಗೆ ಸಾಕ್ಷಿಯಾಗಿದೆ.

ಡಿಜಿಟಲ್ ಮೂಲಸೌಕರ್ಯ (DPI), ಉತ್ಪಾದನಾ ವಲಯದ ವಿಸ್ತರಣೆ ಮತ್ತು ದೃಢ ಆರ್ಥಿಕ ಬೆಳವಣಿಗೆಯೊಂದಿಗೆ ಭಾರತವು 2026ರ ಬ್ರಿಕ್ಸ್ ಶೃಂಗಸಭೆಯನ್ನು ಅತ್ಯಂತ ಶಕ್ತಿಶಾಲಿ ಜಾಗತಿಕ ನಾಯಕನಾಗಿ ನಡೆಸಿಕೊಡುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us