ಚೀನಾದಲ್ಲಿ ಅಧ್ಯಯನ ಮಾಡಲು ಸಾವಿರಾರು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು, ಆದರೆ COVID-19 ಸಾಂಕ್ರಾಮಿಕ ಕಾರಣದಿಂದಾಗಿ ಕನಸು ಕನಸಾಗಿಯೇ ಉಳಿದಿತ್ತು. ಚೀನಾದಲ್ಲಿರಬೇಕಾದವರು ತಮ್ಮ ಮನೆಯಲ್ಲಿಯೇ ಉಳಿಯಬೇಕಾಯಿತು. ಇದೀಗ ಚೀನಾದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಭಾರತ ಸಲಹೆ ನೀಡಿದೆ.
ಚೀನಾದ ವೀಸಾ ನಿಷೇಧವು ಚೀನಾದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ದಾಖಲಾದ 23,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ.
ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಚೀನಾದಲ್ಲಿ ಪದವಿಪೂರ್ವ ಕ್ಲಿನಿಕಲ್ ಮೆಡಿಸಿನ್ ಪ್ರವೇಶದ ಬಗ್ಗೆ ನಿರೀಕ್ಷಿತ ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಂದ ಹಲವಾರು ಪ್ರಶ್ನೆಗಳನ್ನು ಸ್ವೀಕರಿಸುತ್ತಿದೆ ಎಂದು ರಾಯಭಾರ ಕಚೇರಿ ಸೆಪ್ಟೆಂಬರ್ 8 ರಂದು ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ವಿದ್ಯಾರ್ಥಿಗಳ ವಾಪಸಾತಿಯನ್ನು ಸುಗಮಗೊಳಿಸುವಲ್ಲಿ ದೇಶವು ಪ್ರಗತಿ ಸಾಧಿಸಿದೆ ಮತ್ತು ಮೊದಲ ಬ್ಯಾಚ್ ಭಾರತೀಯ ವಿದ್ಯಾರ್ಥಿಗಳು ಚೀನಾಕ್ಕೆ ಶೀಘ್ರವಾಗಿ ಅಧ್ಯಯನ ಮಾಡಲು ಹಿಂದಿರುಗುವಂತೆ ನೋಡಿಕೊಳ್ಳಲು ಸಂಬಂಧಿತ ಇಲಾಖೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ಚೀನಾ ಹೇಳಿತ್ತು.
2015 ರಿಂದ 2021 ರವರೆಗೆ ಎಫ್‌ಎಂಜಿ ಪರೀಕ್ಷೆಗೆ ಹಾಜರಾಗಿದ್ದ 40,417 ವಿದ್ಯಾರ್ಥಿಗಳ ಪೈಕಿ 6387 ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿಯು ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ಅಧ್ಯಯನದ ಲಿಂಕ್ ಅನ್ನು ಹಂಚಿಕೊಂಡಿದೆ.
2015 ರಿಂದ 2021 ರವರೆಗೆ ಎಫ್‌ಎಂಜಿ ಪರೀಕ್ಷೆಗೆ ಹಾಜರಾದ 40,417 ವಿದ್ಯಾರ್ಥಿಗಳ ಪೈಕಿ 6,387 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಲ್ಲಿನ ಈ 45 ವಿಶ್ವವಿದ್ಯಾನಿಲಯಗಳಲ್ಲಿ, ಆ ಅವಧಿಯಲ್ಲಿ ಚೀನಾದಲ್ಲಿ ಕ್ಲಿನಿಕಲ್ ಮೆಡಿಸಿನ್ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣವು ಕೇವಲ ಶೇ.16 ಮಾತ್ರ.
ಕೋವಿಡ್-19-ಪ್ರೇರಿತ ನಿರ್ಬಂಧಗಳಿಂದಾಗಿ ಚೀನಾದ ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆಯಲಿರುವ ಭಾರತೀಯ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಚೀನಾಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ.
ಇದಕ್ಕೂ ಮೊದಲು, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಜಿ 20 ವಿದೇಶಾಂಗ ಸಚಿವರ ಸಭೆಯಲ್ಲ ಕೂಡ ಚೀನಾಕ್ಕೆ ಹಿಂದಿರುಗುವ ಭಾರತೀಯ ವಿದ್ಯಾರ್ಥಿಗಳು ಶೀಘ್ರವಾಗಿ ತರಗತಿಗಳಿಗೆ ಹಾಜರಾಗುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಭಾರತೀಯ ವಿದ್ಯಾರ್ಥಿಗಳಿಗೆ ಮರಳಲು ಅನುಕೂಲವಾಗುವಂತೆ ಜೈಶಂಕರ್ ಮಾರ್ಚ್ 25 ರಂದು ವಾಂಗ್ ಯಿ ಅವರನ್ನು ಭೇಟಿಯಾದರು.
ಚೀನಾದಲ್ಲಿನ ಭಾರತೀಯ ರಾಯಭಾರ ಕಚೇರಿಯು ಏಪ್ರಿಲ್‌ನಲ್ಲಿ, ಅಗತ್ಯ ಆಧಾರದ ಮೇಲೆ ಭಾರತೀಯ ವಿದ್ಯಾರ್ಥಿಗಳಿಗೆ ಚೀನಾಕ್ಕೆ ಮರಳಲು ಅನುಕೂಲವಾಗುವಂತಹ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎನ್ನುವ ಭರವಸೆ ನೀಡಿತ್ತು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ