ದೆಹಲಿ ಬಸ್ ಖರೀದಿ ಪ್ರಕರಣ: ಸಿಬಿಐ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಒಪ್ಪಿಗೆ
ಕಳೆದ ತಿಂಗಳು, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಚುನಾಯಿತ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದು ಬಿಜೆಪಿ ಇದಕ್ಕಾಗಿ ₹ 800 ಕೋಟಿ ಮೀಸಲಿಟ್ಟಿದೆ ಎಂದು ಹೇಳಿದ್ದರು
ದೆಹಲಿ ಸಾರಿಗೆ ನಿಗಮದಿಂದ 1,000 ಲೋ ಫ್ಲೋರ್ ಬಸ್‌ಗಳ ಖರೀದಿಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರನ್ನು ಸಿಬಿಐಗೆ ರವಾನಿಸಲು ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರ ಪ್ರಸ್ತಾವನೆಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ (Lieutenant Governor) ವಿನಯ್ ಕುಮಾರ್ ಸಕ್ಸೇನಾ ಒಪ್ಪಿಗೆ ನೀಡಿದ್ದಾರೆ. ಎಲ್‌ಜಿ ಸೆಕ್ರೆಟರಿಯೇಟ್ ಕಚೇರಿ ದೂರು ಸ್ವೀಕರಿಸಿತ್ತು. ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ತನಿಖೆಗಳ ನಡುವೆಯೇ ಈ ಬೆಳವಣಿಗೆಯು ನಡೆದಿದೆ. ಅಬಕಾರಿ ನೀತಿಗೆ ಸಂಬಂಧಿಸಿದಂತೆ ದ್ರ ತನಿಖಾ ಸಂಸ್ಥೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ ಇತರ ಸ್ಥಳಗಳಲ್ಲಿ ಶೋಧ ನಡೆಸಿತ್ತು . ಎಎಪಿ ಮತ್ತು ಬಿಜೆಪಿ ಎರಡೂ ಪಕ್ಷಗಳು ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡುತ್ತಿವೆ ದೆಹಲಿಯಲ್ಲಿ ಎಎಪಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿದ್ದು, ಮದ್ಯ ನೀತಿಯ ಮೇಲೆ ಮಾತ್ರವಲ್ಲದೆ ಶಿಕ್ಷಣ ಕ್ಷೇತ್ರದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದೆ.
ಕಳೆದ ತಿಂಗಳು, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಚುನಾಯಿತ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದು ಬಿಜೆಪಿ ಇದಕ್ಕಾಗಿ ₹ 800 ಕೋಟಿ ಮೀಸಲಿಟ್ಟಿದೆ ಎಂದು ಹೇಳಿದ್ದರು. ಕೇಜ್ರಿವಾಲ್ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಕೂಡಾ ಮಾಡಿದ್ದರು. ಇದು ಆಪರೇಷನ್ ಕಮಲ ಅಥವಾ ಸರ್ಕಾರವನ್ನು ಉರುಳಿಸುವ ಪ್ರಯತ್ನಗಳು ವಿಫಲವಾಗಿದೆ ಎಂಬ ಸಂದೇಶವಾಗಿದೆ ಎಂದಿದ್ದರು ಕೇಜ್ರಿವಾಲ್.
ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ವಿರುದ್ಧ ತನಿಖೆಗೆ ಕೋರಿ ಎಎಪಿ ಮತ್ತು ಬಿಜೆಪಿಯು ಮನೀಶ್ ಸಿಸೋಡಿಯಾ ಅವರ ರಾಜೀನಾಮೆಗೆ ಒತ್ತಾಯಿಸಿ ಎರಡೂ ಕಡೆಯಿಂದ ವಿಧಾನಸಭೆಯಲ್ಲಿ ಪ್ರತಿಭಟನೆಗಳು ನಡೆದವು. ಎಎಪಿಯ ಕುದುರೆ ವ್ಯಾಪಾರದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಬಿಜೆಪಿ ಲೆಫ್ಟಿನೆಂಟ್ ಗವರ್ನರ್ ನ್ನು ಒತ್ತಾಯಿಸಿತ್ತು.
ಏತನ್ಮಧ್ಯೆ, ಬಸ್ ಖರೀದಿ ಪ್ರಕರಣಕ್ಕೆ ಸಂಬಂಧಿಸಿದ ವಿಷಯವೂ ದೆಹಲಿ ಹೈಕೋರ್ಟ್‌ನಲ್ಲಿದೆ. ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ಕಳೆದ ವರ್ಷ ಬಿಜೆಪಿಯ ವಿಜೇಂದರ್ ಗುಪ್ತಾ ವಿರುದ್ಧ ತಮ್ಮ ಸಿವಿಲ್ ಮಾನನಷ್ಟ ಮೊಕದ್ದಮೆಯೊಂದಿಗೆ ₹ 5 ಕೋಟಿ ನಷ್ಟವನ್ನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 1,000 ಲೋ ಫ್ಲೋರ್ ಬಸ್‌ಗಳ ಖರೀದಿಗೆ ಸಂಬಂಧಿಸಿದಂತೆ ಹಗರಣದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ಬುಧವಾರ, ಮಾನನಷ್ಟ ಪ್ರಕರಣವನ್ನು ಇತ್ಯರ್ಥಪಡಿಸುವ ಸಾಧ್ಯತೆಯನ್ನು ಅನ್ವೇಷಿಸುವಂತೆ ನ್ಯಾಯಾಲಯವು ಉಭಯ ನಾಯಕರನ್ನು ಕೇಳಿದೆ.