ಇಂಗ್ಲೆಂಡ್​ನಿಂದ ಬರುವವರಿಗೆ 10 ದಿನ ಕ್ವಾರಂಟೈನ್ ಕಡ್ಡಾಯ; ಯುಕೆಗೆ ತಿರುಗೇಟು ನೀಡಿದ ಭಾರತ

ಕೊವಿಡ್ ಹಿನ್ನೆಲೆ ಇಂಗ್ಲೆಂಡ್‌ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಅಕ್ಟೋಬರ್ 4ರಿಂದ ಅನ್ವಯವಾಗುವಂತೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಲಾಗಿದೆ.

ಇಂಗ್ಲೆಂಡ್​ನಿಂದ ಬರುವವರಿಗೆ 10 ದಿನ ಕ್ವಾರಂಟೈನ್ ಕಡ್ಡಾಯ; ಯುಕೆಗೆ ತಿರುಗೇಟು ನೀಡಿದ ಭಾರತ
ಇಂಗ್ಲೆಂಡ್​ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ

ನವದೆಹಲಿ: ಕೋವಿಶೀಲ್ಡ್(Covishield) ಮತ್ತು ಕೊವ್ಯಾಕ್ಸಿನ್ (Covaxin) ಲಸಿಕೆ ಪಡೆದ ಭಾರತೀಯರಿಗೆ ಇಂಗ್ಲೆಂಡ್​ನಲ್ಲಿ 10 ದಿನಗಳ ಕಾಲ ಕ್ವಾರಂಟೈನ್ ವಿಧಿಸಲಾಗಿತ್ತು. ಇದಕ್ಕೆ ಭಾರತದಿಂದ ವಿರೋಧ ವ್ಯಕ್ತವಾದರೂ ಇಂಗ್ಲೆಂಡ್ ತನ್ನ ನಿರ್ಧಾರವನ್ನು ಬದಲಾಯಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಿಂದ ಭಾರತಕ್ಕೆ ಆಗಮಿಸುವವರಿಗೆ ಕೂಡ 10 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸುವ ಮೂಲಕ ಭಾರತ ತಿರುಗೇಟು ನೀಡಿದೆ.

ಕೊವಿಡ್ ಹಿನ್ನೆಲೆ ಇಂಗ್ಲೆಂಡ್‌ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಅಕ್ಟೋಬರ್ 4ರಿಂದ ಅನ್ವಯವಾಗುವಂತೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಲಾಗಿದೆ. ಇಂಗ್ಲೆಂಡ್​ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಆರ್​ಟಿಪಿಸಿಆರ್ (RTPCR ) ಪರೀಕ್ಷೆಯ ರಿಪೋರ್ಟ್‌ ಕಡ್ಡಾಯಗೊಳಿಸಲಾಗಿದೆ. ಇಂಗ್ಲೆಂಡ್ ಪ್ರಜೆಗಳಿಗೆ ಕೂಡ ಕ್ವಾರಂಟೈನ್ ಕಡ್ಡಾಯಗೊಳಿಸಿ ಇಂಗ್ಲೆಂಡ್‌ಗೆ ಭಾರತ ತಿರುಗೇಟು ನೀಡಿದೆ.

ಭಾರತ ಪ್ರಯಾಣಕ್ಕೆ 72 ಗಂಟೆ ಮುಂಚಿತವಾಗಿ RT-PCR ಪರೀಕ್ಷೆಗೆ ಒಳಗಾಗಬೇಕು. ಭಾರತಕ್ಕೆ ಬಂದ ತಕ್ಷಣವೇ ಏರ್ ಪೋರ್ಟ್ ನಲ್ಲಿ RT-PCR ಪರೀಕ್ಷೆಗೆ ಒಳಗಾಗಬೇಕು. ಲಸಿಕೆ ಪಡೆದಿರಲಿ, ಪಡೆಯದೇ ಇರಲಿ, RT-PCR ಪರೀಕ್ಷೆ, ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಭಾರತದ ನಾಗರಿಕರು ಇಂಗ್ಲೆಂಡ್ ಪ್ರಯಾಣಕ್ಕೆ ಇಂಗ್ಲೆಂಡ್ ಇದೇ ನಿಯಮ ಜಾರಿ ಮಾಡಿತ್ತು. ಹೀಗಾಗಿ ಇಂಗ್ಲೆಂಡ್ ನಿಯಮಕ್ಕೆ ಪ್ರತಿಯಾಗಿ ಭಾರತದಿಂದ ಅದೇ ನಿಯಮ ಜಾರಿ ಮಾಡಿದೆ.

ಭಾರತದ ಲಸಿಕೆಗೆ ಅನುಮತಿ ನೀಡಲು ಹಿಂದೇಟು ಹಾಕಿದ್ದ ಇಂಗ್ಲೆಂಡ್‌ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್​ಗಳನ್ನು ಪಡೆದವರಿಗೂ ಕ್ವಾರಂಟೈನ್ ಕಡ್ಡಾಯಗೊಳಿಸಿತ್ತು. ಇದಕ್ಕೆ ಭಾರತದಿಂದ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಕೋವಿಶೀಲ್ಡ್ ಲಸಿಕೆ ಕೂಡ ಅನುಮೋದಿತ ಲಸಿಕೆ ಎಂದು ಹೊಸ ನಿಯಮವನ್ನು ಜಾರಿಗೊಳಿಸಿದ್ದ ಇಂಗ್ಲೆಂಡ್ 10 ದಿನಗಳು ಕ್ವಾರಂಟೈನ್ ಆಗುವುದು ಕಡ್ಡಾಯ ಎಂದಿತ್ತು.

ಇಂಗ್ಲೆಂಡ್​ನಲ್ಲಿ ನೀಡಲಾಗುವ ಆಸ್ಟ್ರಾಜೆನಿಕಾ ಲಸಿಕೆಯ ಭಾರತದ ಆವೃತ್ತಿಯಾದ ಕೋವಿಶೀಲ್ಡ್‌ನ ಎರಡು ಡೋಸ್ ಪಡೆದಿದ್ದರೂ ಅವರಿಗೆ ಇನ್ನೂ ಲಸಿಕೆ ನೀಡಲಾಗಿಲ್ಲ ಎಂದು ಇಂಗ್ಲೆಂಡ್​ನಲ್ಲಿ ಪರಿಗಣಿಸಲಾಗುತ್ತಿತ್ತು. ಅಲ್ಲದೆ, ಕೋವಿಶೀಲ್ಡ್ ಲಸಿಕೆ ಪಡೆದವರಿಗೆ 10 ದಿನಗಳ ಕ್ವಾರಂಟೈನ್ ಕೂಡ ಕಡ್ಡಾಯವಾಗಿತ್ತು. ಕೋವಿಶೀಲ್ಡ್ ಅನ್ನೇ ಬ್ರಿಟನ್​ನಲ್ಲಿ ಅಸ್ಟ್ರಾಜೆನಿಕಾ ಲಸಿಕೆ ಎಂಬ ಹೆಸರಿನಲ್ಲಿ ನೀಡಲಾಗುತ್ತಿದೆ. ಆದರೂ ಕೋವಿಶೀಲ್ಡ್​ಗೆ ಮಾನ್ಯತೆ ನೀಡದಿರುವುದು ಭಾರತೀಯರ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಬಗ್ಗೆ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಘಾಲ್ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಇಂಗ್ಲೆಂಡ್ ವಿದೇಶಾಂಗ ಇಲಾಖೆ ಸಚಿವರ ಜೊತೆ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಿದ್ದಾರೆ. ಅವರು ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವ ಕೆಲ ಭರವಸೆ ನೀಡಿದ್ದಾರೆ. ನಾವು ನಮ್ಮ ಸ್ನೇಹಿ ರಾಷ್ಟ್ರಗಳ ಲಸಿಕೆಗೆ ಮಾನ್ಯತೆ ನೀಡಿದ್ದೇವೆ. ಇವೆಲ್ಲವೂ ಪರಸ್ಪರ ಮಾನ್ಯತೆ ನೀಡುವ ಕ್ರಮಗಳು. ಒಂದು ವೇಳೆ ನಮಗೆ ತೃಪ್ತಿ ಆಗದಿದ್ದರೆ ಕ್ರಮಕ್ಕೆ ಅವಕಾಶ ಇದೆ. ನಾವು ಕೂಡ ಇಂಗ್ಲೆಂಡ್‌ನ ಲಸಿಕೆಗೆ ಮಾನ್ಯತೆ ನೀಡದಿರಲು ಸಾಧ್ಯವಿದೆ ಎನ್ನುವ ಮೂಲಕ ಇಂಗ್ಲೆಂಡ್​ಗೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದರು.

ಅದರಂತೆ ಇದೀಗ ಇಂಗ್ಲೆಂಡ್ ಪ್ರಯಾಣಿಕರಿಗೆ ಕೂಡ ಭಾರತದಲ್ಲಿ ಕ್ವಾರಂಟೈನ್ ಕಡ್ಡಾಯಗೊಳಿಸಿ, ಕೊರೊನಾ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: CoWIN Certificate | ಕೋವಿಶೀಲ್ಡ್ ಬಳಿಕ ಭಾರತದ ಕೊವಿಡ್ ಲಸಿಕೆಯ ಸರ್ಟಿಫಿಕೆಟ್ ಬಗ್ಗೆ ಇಂಗ್ಲೆಂಡ್ ತಗಾದೆ

ಮಕ್ಕಳಿಗೆ ಅಕ್ಟೋಬರ್ ತಿಂಗಳಲ್ಲೇ ಕೊವಿಡ್ ಲಸಿಕೆ ವಿತರಣೆ ಸಾಧ್ಯತೆ: ಡಾ ಸುಧಾಕರ್ ಸುಳಿವು

Read Full Article

Click on your DTH Provider to Add TV9 Kannada