Coronavirus cases in India: 132 ದಿನಗಳ ನಂತರ ದೇಶದಲ್ಲಿ ದೈನಂದಿನ ಕೊವಿಡ್ ಪ್ರಕರಣಗಳ ಸಂಖ್ಯೆ 30,000ಕ್ಕಿಂತ ಕಡಿಮೆ ದಾಖಲು
Covid 19: ಸಕ್ರಿಯ ಪ್ರಕರಣಗಳು ಪ್ರಸ್ತುತ 3,98,100 ರಷ್ಟಿದ್ದು, ಮಾರ್ಚ್ 24 ರ ನಂತರ ಮೊದಲ ಬಾರಿಗೆ 4 ಲಕ್ಷಕ್ಕಿಂತ ಕಡಿಮೆಯಾಗಿದೆ. ಸೋಮವಾರದ ವೇಳೆಗೆ ದೇಶದಲ್ಲಿ 3.98 ಲಕ್ಷ ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 1.37 ಲಕ್ಷ ಸೋಂಕು ಕೇರಳದಿಂದ ವರದಿ ಆಗಿದೆ.
ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 29,689 ಹೊಸ ಕೊವಿಡ್ (Covid-19) ಪ್ರಕರಣಗಳು ದಾಖಲಾಗಿದ್ದು 415 ಸಾವುಗಳು ಸಂಭವಿಸಿವೆ. 132 ದಿನಗಳ ನಂತರ ದೈನಂದಿನ ಕೊವಿಡ್ ಪ್ರಕರಣ 30,000 ಕ್ಕಿಂತ ಕಡಿಮೆ ದಾಖಲಾಗಿದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 11,586 ಮತ್ತು 4,877 ಸೋಂಕುಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳು ಪ್ರಸ್ತುತ 3,98,100 ರಷ್ಟಿದ್ದು, ಮಾರ್ಚ್ 24 ರ ನಂತರ ಮೊದಲ ಬಾರಿಗೆ 4 ಲಕ್ಷಕ್ಕಿಂತ ಕಡಿಮೆಯಾಗಿದೆ. ಸೋಮವಾರದ ವೇಳೆಗೆ ದೇಶದಲ್ಲಿ 3.98 ಲಕ್ಷ ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 1.37 ಲಕ್ಷ ಸೋಂಕು ಕೇರಳದಿಂದ ವರದಿ ಆಗಿದೆ.
ಪ್ರಸಕ್ತ ವೇಗದಲ್ಲಿ ಲಸಿಕೆ ನೀಡುವುದನ್ನು ಮುಂದುವರಿಸಿದರೆ ಭಾರತವು ಜುಲೈನಲ್ಲಿ 13.5 ಕೋಟಿ ಡೋಸ್ ವ್ಯಾಕ್ಸಿನೇಷನ್ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ. ಭಾನುವಾರದವರೆಗೆ, ಈ ತಿಂಗಳಲ್ಲಿ 9.94 ಕೋಟಿ ಡೋಸ್ ಕೊವಿಡ್ -19 ಲಸಿಕೆಗಳನ್ನು ನೀಡಲಾಗಿದ್ದು, ದಿನಕ್ಕೆ ಸರಾಸರಿ 38.26 ಲಕ್ಷ ಡೋಸ್ ನೀಡಲಾಗಿದೆ. ಪ್ರಸ್ತುತ ವೇಗದಲ್ಲಿ, ಜುಲೈ ಅಂತ್ಯದ ವೇಳೆಗೆ ಭಾರತ ಸುಮಾರು 12.5 ಕೋಟಿ ಡೋಸ್‌ಗಳನ್ನು ನೀಡಲಿದೆ. 13.5 ಕೋಟಿ ಗುರಿಯನ್ನು ಪೂರೈಸಲು, ಸುಮಾರು 60 ಲಕ್ಷ ದೈನಂದಿನ ಲಸಿಕೆ ಡೋಸ್ ನೀಡಬೇಕಾಗಿತ್ತು, ಈ ಸಂಖ್ಯೆಯನ್ನು ಈ ತಿಂಗಳಲ್ಲಿ ಎರಡು ಬಾರಿ ಮಾತ್ರ ಸಾಧಿಸಲಾಗಿದೆ.
India reports 29,689 fresh COVID cases, 42,363 recoveries, and 415 deaths in the past 24 hours
Active cases: 3,98,100 Total recoveries: 3,06,21,469 Death toll: 4,21,382
Total vaccination: 44,19,12,395 pic.twitter.com/mtsHnb4tjb
— ANI (@ANI) July 27, 2021
ಕೊವಿಡ್ -19 ವ್ಯಾಕ್ಸಿನೇಷನ್ ವೇಗವು ಜುಲೈನಲ್ಲಿ ಗಣನೀಯವಾಗಿ ನಿಧಾನಗೊಂಡಿದೆ, ಜೂನ್ 21 ರಂದು ಹೊಸ ಹಂತದ ಸಾರ್ವತ್ರಿಕ ವ್ಯಾಕ್ಸಿನೇಷನ್ ಪ್ರಾರಂಭವಾದ ನಂತರ, ದಾಖಲೆಯ 87 ಲಕ್ಷ ಡೋಸ್ ನೀಡಲಾಯಿತು. ಆಗ ಜುಲೈನಲ್ಲಿ 13.5 ಕೋಟಿ ಡೋಸ್‌ಗಳ ಗುರಿಯನ್ನು ಘೋಷಿಸಲಾಯಿತು. ಜೂನ್ 26 ಕ್ಕೆ ಕೊನೆಗೊಳ್ಳುವ ವಾರದಲ್ಲಿ ಸಾಪ್ತಾಹಿಕ ಲಸಿಕೆ ಡೋಸ್ ವಿತರಣೆಯು 4.5 ಕೋಟಿಯಿಂದ ಜುಲೈ 25 ಕ್ಕೆ ಕೊನೆಗೊಂಡ ವಾರದಲ್ಲಿ 2.8 ಕೋಟಿಗೆ ಇಳಿದಿದೆ ಎಂದು ಅಧಿಕೃತ ದತ್ತಾಂಶಗಳು ತೋರಿಸುತ್ತವೆ.
COVID-19 Testing Update. For more details visit: https://t.co/dI1pqvXAsZ @MoHFW_INDIA @DeptHealthRes @PIB_India @mygovindia @COVIDNewsByMIB #ICMRFIGHTSCOVID19 #IndiaFightsCOVID19 #CoronaUpdatesInIndia #COVID19 #Unite2FightCorona pic.twitter.com/CCGxg2t9Eb
— ICMR (@ICMRDELHI) July 27, 2021
ಭಾರತದ ಕೊವಿಡ್ ಮೊತ್ತವು ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿದೆ. ಇದು ಸೆಪ್ಟೆಂಬರ್ 28 ರಂದು 60 ಲಕ್ಷ ದಾಟಿದೆ, ಅಕ್ಟೋಬರ್ 11 ರಂದು 70 ಲಕ್ಷ ದಾಟಿದೆ. ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿದೆ. ಭಾರತವು ಮೇ 4 ರಂದು ಎರಡು ಕೋಟಿ ಮತ್ತು ಜೂನ್ 23 ರಂದು ಮೂರು ಕೋಟಿಗಳ ಮೈಲಿಗಲ್ಲು ದಾಟಿದೆ.
ಇದನ್ನೂ ಓದಿ: Vijay Mallya: ವಿಜಯ್ ಮಲ್ಯ ದಿವಾಳಿ ಎಂದ ಬ್ರಿಟನ್ ಕೋರ್ಟ್
(India records 29,689 new cases of coronavirus 415 deaths in the past 24 hours)