ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 45,352 ಹೊಸ ಕೊರೊನಾವೈರಸ್ (Coronavirus) ಪ್ರಕರಣಗಳು ಮತ್ತು 366 ಸಾವುಗಳು ವರದಿಯಾಗಿವೆ. ಇದರೊಂದಿಗೆ ದೇಶದ ಒಟ್ಟಾರೆ ಕೊವಿಡ್ ಪ್ರಕರಣ 3,29,03,289 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 4,39,895 ಕ್ಕೆ ಏರಿದೆ. 34,791 ಮಂದಿ ಚೇತರಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳು ಈಗ 3,99,778 ಕ್ಕೆ ತಲುಪಿದೆ. ಪ್ರಸ್ತುತ ಚೇತರಿಕೆಯ ಪ್ರಮಾಣವು ಶೇಕಡಾ 97.45 ರಷ್ಟಿದೆ.ಭಾರತದಲ್ಲಿ ವರದಿಯಾದ ಹೊಸ ಪ್ರಕರಣಗಳು ಮತ್ತು ಸಾವುಗಳಲ್ಲಿ, ಕೇರಳವು ನಿನ್ನೆ 32,097 ಪ್ರಕರಣಗಳನ್ನು ಮತ್ತು 188 ಸಾವುಗಳನ್ನು ದಾಖಲಿಸಿದೆ.
ಹಬ್ಬದ ಸೀಸನ್‌ಗೆ ಮುಂಚಿತವಾಗಿ ಕೊರೊನಾವೈರಸ್ ಕಾಯಿಲೆಯ ವಿರುದ್ಧ ಹೋರಾಟ ಕಡಿಮೆ ಮಾಡದಂತೆ ಎಚ್ಚರಿಕೆ ನೀಡಿದ ಆರೋಗ್ಯ ಸಚಿವಾಲಯವು ಗುರುವಾರ ಜನರು ಮನೆಯಲ್ಲಿ ಹಬ್ಬಗಳನ್ನು ಆಚರಿಸಬೇಕು, ಕೊವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು ಮತ್ತು ತಮ್ಮ ಸರದಿ ಬಂದಾಗ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಮ್ಯು ಹೆಸರಿನ ಹೊಸ ಕೊರೊನಾವೈರಸ್ ” ಕುತೂಹಲಕಾರಿ ರೂಪಾಂತರಿ” ಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ. ಹೊಸ ರೂಪಾಂತರವು ಲಸಿಕೆಗಳಿಗೆ ಸಂಭವನೀಯ ಪ್ರತಿರೋಧದ ಲಕ್ಷಣಗಳನ್ನು ತೋರಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಹೊಸ ರೂಪಾಂತರವನ್ನು ಜನವರಿ 2021 ರಲ್ಲಿ ಕೊಲಂಬಿಯಾದಲ್ಲಿ ಮೊದಲು ಗುರುತಿಸಲಾಯಿತು. ಅಂದಿನಿಂದ ಪ್ರಕರಣಗಳು ದಕ್ಷಿಣ ಅಮೆರಿಕಾ ಮತ್ತು ಯುರೋಪ್‌ನಲ್ಲಿ ಏರಿಕೆ ಆಗಿವೆ.
India reports 45,352 new #COVID cases, 34,791 recoveries & 366 deaths in the last 24 hours, as per Health Ministry; recovery rate at 97.45%
Active cases: 3,99,778
Total recoveries: 3,20,63,616
Death toll: 4,39,895Total vaccination: 67,09,59,968 pic.twitter.com/1p6womc7fI
— ANI (@ANI) September 3, 2021
ಕೊರೊನಾವೈರಸ್ ನ ಹೊಸ, ಹೆಚ್ಚು ತೀವ್ರವಾದ ತಳಿ ಪತ್ತೆಯಾದ ನಂತರ, C.1.2, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಯುರೋಪ್, ಚೀನಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಚೀನಾ ಮತ್ತು ಮಧ್ಯಪ್ರಾಚ್ಯದಿಂದ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನೆಗೆಟಿವ್ ಆರ್ ಟಿ-ಪಿಸಿಆರ್ ಪ್ರಸ್ತುತಪಡಿಸಲು ಕರೆ ನೀಡಿದೆ.
ಗುರುವಾರ 16,66,334 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗೆ ದೇಶದಲ್ಲಿ ಕೋವಿಡ್ -19 ಪತ್ತೆಗಾಗಿ ನಡೆಸಿದ ಒಟ್ಟು ಸಂಚಿತ ಪರೀಕ್ಷೆಗಳನ್ನು 52,65,35,068 ಕ್ಕೆ ತೆಗೆದುಕೊಂಡಿದೆ.
ದೈನಂದಿನ ಧನಾತ್ಮಕ ದರವು 2.72 ಶೇಕಡಾ ಮತ್ತು ವಾರದ ಧನಾತ್ಮಕ ದರವು 2.66 ಶೇಕಡಾ ದಾಖಲಾಗಿದೆ. ಕಳೆದ 70 ದಿನಗಳಿಂದ ಇದು ಶೇಕಡಾ ಮೂರು ಕ್ಕಿಂತ ಕಡಿಮೆ ಇದೆ ಎಂದು ಸಚಿವಾಲಯ ತಿಳಿಸಿದೆ. ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 3,20,63,616 ಕ್ಕೆ ಏರಿಕೆಯಾಗಿದೆ, ಆದರೆ ಸಾವಿನ ಪ್ರಮಾಣವು 1.34 ಶೇಕಡಾ ಆಗಿದೆ.
ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇಲ್ಲಿಯವರೆಗೆ ಒಟ್ಟು 67.09 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
366 ಹೊಸ ಸಾವುಗಳು ಕೇರಳದಿಂದ 188, ಮತ್ತು ಮಹಾರಾಷ್ಟ್ರದಿಂದ 55 ವರದಿಆಗಿದೆ.ದೇಶದಲ್ಲಿ ಇದುವರೆಗೆ ಒಟ್ಟು 4,39,895 ಸಾವುಗಳು ವರದಿಯಾಗಿದ್ದು ಮಹಾರಾಷ್ಟ್ರದಿಂದ 1,37,551, ಕರ್ನಾಟಕದಿಂದ 37,361, ತಮಿಳುನಾಡಿನಿಂದ 34,961, ದೆಹಲಿಯಿಂದ 25,082, ಉತ್ತರ ಪ್ರದೇಶದಿಂದ 22,841, ಕೇರಳದಿಂದ 21,149 ಮತ್ತು ಪಶ್ಚಿಮ ಬಂಗಾಳದಿಂದ 18,472 ಸಾವುಗಳು ಇದರಲ್ಲಿ ಸೇರಿವೆ
70 ಕ್ಕಿಂತ ಹೆಚ್ಚು ಸಾವುಗಳು ಇತರ ರೋಗಗಳಿಂದ ಸಂಭವಿಸಿವೆ ಎಂದು ಸಚಿವಾಲಯ ಒತ್ತಿ ಹೇಳಿದೆ.
ಇದನ್ನೂ ಓದಿ: ಕೇರಳದಲ್ಲಿ ಒಂದೇ ದಿನ 32,097 ಹೊಸ ಕೊವಿಡ್ ಪ್ರಕರಣ ಪತ್ತೆ, 188 ಸಾವು; ಟಿಪಿಆರ್ ಶೇ 18.41
ಇದನ್ನೂ ಓದಿ: ಆಳುವವರಿದ್ದಾರೆ, ಆಡಳಿತ ನಡೆಸೋರು ಯಾರು? ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಪ್ರತಿಭಾ ಪಲಾಯನವೇ ದೊಡ್ಡ ಸವಾಲು
(India reports 45,352 new coronavirus cases and 366 deaths in the last 24 hours as per health ministry)