ಲೋಕಸಭೆ ಚುನಾವಣೆಯ ಅವಧಿಯಲ್ಲಿ ದೇಶದಲ್ಲಿ ಭಾರೀ ಬಿಸಿಲು; ಐಎಂಡಿ ಮುನ್ಸೂಚನೆ

ಆಂಧ್ರಪ್ರದೇಶದ ರಾಯಲಸೀಮಾದ ಕೆಲವು ಪ್ರದೇಶಗಳಲ್ಲಿ ಮತ್ತು ಪಶ್ಚಿಮ ಮಧ್ಯಪ್ರದೇಶ, ಗಂಗಾನದಿ ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ, ವಿದರ್ಭ, ತೆಲಂಗಾಣ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ ಮತ್ತು ಮಧ್ಯ ಮಹಾರಾಷ್ಟ್ರದ ಪ್ರತ್ಯೇಕ ತಾಣಗಳಲ್ಲಿ ಭಾನುವಾರ ಗರಿಷ್ಠ ತಾಪಮಾನವು 40-42 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ.

ಲೋಕಸಭೆ ಚುನಾವಣೆಯ ಅವಧಿಯಲ್ಲಿ ದೇಶದಲ್ಲಿ ಭಾರೀ ಬಿಸಿಲು; ಐಎಂಡಿ ಮುನ್ಸೂಚನೆ
ಪ್ರಾತಿನಿಧಿಕ ಚಿತ್ರ
Follow us
|

Updated on: Apr 01, 2024 | 8:22 PM

ದೆಹಲಿ ಏಪ್ರಿಲ್ 01: ಏಳು ಹಂತಗಳಲ್ಲಿ (ಏಪ್ರಿಲ್ 19 ರಿಂದ ಜೂನ್ 1 ರವರೆಗೆ) ನಿಗದಿಯಾಗಿರುವ ಲೋಕಸಭೆ ಚುನಾವಣೆ (Lok Sabha Elections) ನಡೆಯುವ ಈ ವರ್ಷದ ಏಪ್ರಿಲ್ ಮತ್ತು ಜೂನ್ ನಡುವೆ ದೇಶವು “ತೀವ್ರ ಬಿಸಿಲು” ಅನುಭವಿಸಲಿದೆ ಎಂದು ಭಾರತ ಹವಾಮಾನ ಇಲಾಖೆ (IMD) ಸೋಮವಾರ ಹೇಳಿದೆ. ಸುದ್ದಿ ಸಂಸ್ಥೆ  ಪಿಟಿಐ ಪ್ರಕಾರ, ಐಎಂಡಿಯ ಡೈರೆಕ್ಟರ್ ಜನರಲ್ ಮೃತ್ಯುಂಜಯ್ ಮೊಹಾಪಾತ್ರ, ಏಪ್ರಿಲ್-ಜೂನ್ ಅವಧಿಯಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನವನ್ನು ನಿರೀಕ್ಷಿಸಲಾಗಿದೆ. ಮಧ್ಯ ಮತ್ತು ಪಶ್ಚಿಮ ಪೆನಿನ್ಸುಲಾರ್ ಭಾರತದಲ್ಲಿ ಹೆಚ್ಚಿನ ಸಂಭವನೀಯತೆ ಇದೆ ಎಂದು ಹೇಳಿರುವುದಾಗಿ ಉಲ್ಲೇಖಿಸಿದೆ.

ಈ ಸಮಯದಲ್ಲಿ, ಹೆಚ್ಚಿನ ಬಯಲು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಗಳ ಪರಿಸ್ಥಿತಿಗಳನ್ನು ನಿರೀಕ್ಷಿಸಲಾಗಿದೆ. ದೇಶದ ವಿವಿಧ ಭಾಗಗಳು “ಸಾಮಾನ್ಯ ನಾಲ್ಕರಿಂದ ಎಂಟು ದಿನಗಳಿಗೆ ಹೋಲಿಸಿದರೆ 10 ರಿಂದ 20 ಉರಿ ಬಿಸಿಲಿನ ದಿನಗಳನ್ನು” ನಿರೀಕ್ಷಿಸಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಗುಜರಾತ್, ಮಧ್ಯ ಮಹಾರಾಷ್ಟ್ರ, ಉತ್ತರ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ಉತ್ತರ ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶಗಳು ಅತೀ ಹೆಚ್ಚು ತಾಪಮಾನದ ತೀವ್ರ ಪರಿಣಾಮವನ್ನು ಎದುರಿಸುವ” ಪ್ರದೇಶಗಳಲ್ಲಿ ಸೇರಿವೆ.

ಬಿಸಿಗಾಳಿ ಪರಿಸ್ಥಿತಿಗಳ ಮುನ್ಸೂಚನೆಗಳ ನಡುವೆ ಮುಂಬರುವ ಚುನಾವಣೆಗೆ ರಾಜ್ಯ ಸರ್ಕಾರಗಳ ಸಿದ್ಧತೆಗಳ ಬಗ್ಗೆ ಕೇಂದ್ರ ಕಿರಣ್ ರಿಜಿಜು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ. ನಮ್ಮ ಮಾಹಿತಿ ಪ್ರಕಾರ, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ದೇಶದ ಬೃಹತ್ ಪ್ರದೇಶದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಬಿಸಿಗಾಳಿ ತಡೆಯಲು ಮುಂಜಾಗ್ರತೆ ವಹಿಸಿದ್ದೇವೆ. ನಾವು ಸಿದ್ಧತೆಗಳ ಬಗ್ಗೆ ರಾಜ್ಯ ಸರ್ಕಾರಗಳೊಂದಿಗೆ ಎರಡು ದಿನಗಳ ಸಭೆ ನಡೆಸಿದ್ದೇವೆ ಮತ್ತು ಅದಕ್ಕಾಗಿ ಸಲಹೆಯನ್ನು ನೀಡಿದ್ದೇವೆ ಎಂದಿದ್ದಾರೆ.

ಮುಂದಿನ 5 ದಿನಗಳವರೆಗೆ ಗರಿಷ್ಠ ತಾಪಮಾನ : ಹಮಾವಾನ ಇಲಾಖೆ ಮುನ್ಸೂಚನೆ

ಆಂಧ್ರಪ್ರದೇಶದ ರಾಯಲಸೀಮಾದ ಕೆಲವು ಪ್ರದೇಶಗಳಲ್ಲಿ ಮತ್ತು ಪಶ್ಚಿಮ ಮಧ್ಯಪ್ರದೇಶ, ಗಂಗಾನದಿ ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ, ವಿದರ್ಭ, ತೆಲಂಗಾಣ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ ಮತ್ತು ಮಧ್ಯ ಮಹಾರಾಷ್ಟ್ರದ ಪ್ರತ್ಯೇಕ ತಾಣಗಳಲ್ಲಿ ಭಾನುವಾರ ಗರಿಷ್ಠ ತಾಪಮಾನವು 40-42 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ.

ಸೋಮವಾರ, ಪೂರ್ವ ಉತ್ತರ ಪ್ರದೇಶ, ಮಧ್ಯ ಮಹಾರಾಷ್ಟ್ರ, ಬಿಹಾರದ ಕೆಲವು ಸ್ಥಳಗಳು ಮತ್ತು ಒಡಿಶಾದ ಪ್ರತ್ಯೇಕ ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3-5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಹೆಚ್ಚುವರಿಯಾಗಿ, ಗರಿಷ್ಠ ತಾಪಮಾನವು ಉತ್ತರ ಪ್ರದೇಶದ ಕೆಲವು ಸ್ಥಳಗಳಲ್ಲಿ ಶೇ 95 ಮೀರಿದೆ. ಉತ್ತರಾಖಂಡ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ತೆಲಂಗಾಣ, ಕರಾವಳಿ ಆಂಧ್ರ ಪ್ರದೇಶ ಮತ್ತು ಯಾನಂ, ಕೇರಳ ಮತ್ತು ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಮರಾಠವಾಡದಲ್ಲಿ ಪ್ರತ್ಯೇಕವಾದ ತಾಣಗಳಲ್ಲಿ ತಾಪಮಾನ ಮಿತಿ ಮೀರಿದೆ.

ಹವಾಮಾನ ಇಲಾಖೆಯ ಇತ್ತೀಚಿನ ಬುಲೆಟಿನ್ ಪ್ರಕಾರ, ಗುರುವಾರದವರೆಗೆ ರಾಯಲಸೀಮಾ, ಕರ್ನಾಟಕ, ಮರಾಠವಾಡ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಮತ್ತು ಛತ್ತೀಸ್‌ಗಢ, ಜಾರ್ಖಂಡ್, ಪೂರ್ವ ಮಧ್ಯಪ್ರದೇಶ ಮತ್ತು ವಿದರ್ಭದಲ್ಲಿ ಗುರುವಾರದಿಂದ ಗರಿಷ್ಠ ತಾಪಮಾನವು ಶೇಕಡಾ 95 ರಷ್ಟು ಮೀರುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ, ಅವರು ಬುಧವಾರದಿಂದ ಉತ್ತರ ತಮಿಳುನಾಡಿನಲ್ಲಿ 95 ನೇ ಶೇಕಡಾವನ್ನು ಮೀರುವ ನಿರೀಕ್ಷೆಯಿದೆ.

ಐಎಂಡಿ ಮುನ್ಸೂಚನೆಯ ಪ್ರಕಾರ, ಉತ್ತರ ಒಳ ಕರ್ನಾಟಕದ ಪ್ರತ್ಯೇಕ ಪ್ರದೇಶಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬಿಸಿಗಾಳಿ ಪರಿಸ್ಥಿತಿಗಳನ್ನು ನಿರೀಕ್ಷಿಸಲಾಗಿದೆ. ಬುಧವಾರದಿಂದ ಶುಕ್ರವಾರದವರೆಗೆ ರಾಯಲಸೀಮಾ, ಪೂರ್ವ ಮಧ್ಯಪ್ರದೇಶ ಮತ್ತು ಗಂಗಾನದಿ ಪಶ್ಚಿಮ ಬಂಗಾಳದಲ್ಲಿ ಬಿಸಿಗಾಳಿ ಪರಿಸ್ಥಿತಿಗಳು ಕಂಡುಬರುವ ಸಾಧ್ಯತೆಯಿದೆ.

ವಿದರ್ಭ ಮತ್ತು ಜಾರ್ಖಂಡ್ ನಲ್ಲಿ ಗುರುವಾರ ಮತ್ತು ಶುಕ್ರವಾರದಂದು ಬಿಸಿ ಗಾಳಿ ಅನುಭವಕ್ಕೆ ಬರುತ್ತದೆ ಆದರೆ ಸೋಮವಾರ ಮತ್ತು ಮಂಗಳವಾರ ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡದ ಪ್ರತ್ಯೇಕ ಪಾಕೆಟ್‌ಗಳಲ್ಲಿ ಬೆಚ್ಚಗಿನ ರಾತ್ರಿ ನಿರೀಕ್ಷಿಸಲಾಗಿದೆ.

ಒಡಿಶಾ ಮಂಗಳವಾರದಿಂದ ಶುಕ್ರವಾರದವರೆಗೆ ಬೆಚ್ಚನೆಯ ರಾತ್ರಿಯ ಪರಿಸ್ಥಿತಿಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಸೋಮವಾರದಿಂದ ಶುಕ್ರವಾರದವರೆಗೆ ಕೇರಳ, ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣವು ಇರುತ್ತದೆ. ಹೆಚ್ಚುವರಿಯಾಗಿ, ಒಡಿಶಾದಲ್ಲಿ  ಮಂಗಳವಾರದಿಂದ ಶುಕ್ರವಾರದವರೆಗೆ ಬಿಸಿ ಮತ್ತು ಆರ್ದ್ರ ವಾತಾವರಣದ ಸಾಧ್ಯತೆ ಇದೆ.

ಒಡಿಶಾದ ಪ್ರಮುಖ ಭಾಗಗಳಲ್ಲಿ ಚಾಲ್ತಿಯಲ್ಲಿರುವ ಶುಷ್ಕ ಪರಿಸ್ಥಿತಿಗಳು ಮತ್ತು ತೀವ್ರವಾದ ಬಿಸಿಲಿನಿಂದ ಮುಂದಿನ ನಾಲ್ಕು ದಿನಗಳಲ್ಲಿ ಗರಿಷ್ಠ ತಾಪಮಾನವು ಆಂತರಿಕ ಪ್ರದೇಶಗಳಲ್ಲಿ 38 ರಿಂದ 40 ಡಿಗ್ರಿ ಸೆಲ್ಸಿಯಸ್ ಮತ್ತು ಕರಾವಳಿ ಜಿಲ್ಲೆಗಳಲ್ಲಿ 36 ರಿಂದ 38 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಬಡವರಿಗೆ ವಿಸ್ಕಿ, ಬಿಯರ್; ಮಹಾರಾಷ್ಟ್ರದ ಅಭ್ಯರ್ಥಿಯಿಂದ ಹೀಗೊಂದು ಭರವಸೆ

ದೆಹಲಿಯಲ್ಲಿ, ಭಾನುವಾರ  ಗರಿಷ್ಠ ತಾಪಮಾನ 35.2 ಡಿಗ್ರಿ ಸೆಲ್ಸಿಯಸ್ ಆಗಿತ್ತು ಎಂದು ಐಎಂಡಿ ಹೇಳಿದೆ. ಏತನ್ಮಧ್ಯೆ, ಅಗರ್ತಲಾದಲ್ಲಿನ ಹವಾಮಾನ ಕೇಂದ್ರವು ಸೋಮವಾರ ತ್ರಿಪುರಾಕ್ಕೆ ಎಚ್ಚರಿಕೆ ನೀಡಿದ್ದು, ತ್ರಿಪುರಾದ ಜಿಲ್ಲೆಗಳಾದ್ಯಂತ ಪ್ರತ್ಯೇಕ ಪ್ರದೇಶಗಳಲ್ಲಿ 30-40 ಕಿಮೀ ವೇಗದಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯನ್ನು ಸೂಚಿಸುತ್ತದೆ. ಐಎಂಡಿಯ ಮುಂಚಿನ ಮುನ್ಸೂಚನೆಗಳು ಅಸ್ಸಾಂನಲ್ಲಿ ಚಂಡಮಾರುತ ಬರಲಿದೆ ಎಂದಿದ್ದು, ಇದು ಮುಂಬರುವ ದಿನಗಳಲ್ಲಿ ಈಶಾನ್ಯ ಪ್ರದೇಶದಾದ್ಯಂತ ಮಳೆ ತರುವ ನಿರೀಕ್ಷೆಯಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ