AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿಗೆ ಲೋಕಸಭೆ ಚುನಾವಣೆ ಸೋಲಿ‌ನ‌ ಕನಸು ಬೀಳುತ್ತಿದೆ: ಪ್ರಹ್ಲಾದ್​ ಜೋಶಿ

ಬಿಜೆಪಿ, ಆರ್​​ಎಸ್​ಎಸ್​ ವಿಷವಿದ್ದಂತೆ, ಅದರ ರುಚಿ ನೋಡಬೇಡಿ ಎಂಬ ಕಾಂಗ್ರೆಸ್​ ಮುಖಂಡ ಮಲ್ಲಿಕಾರ್ಜುನ್​ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಮಲ್ಲಿಕಾರ್ಜುನ ಖರ್ಗೆ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.

ರಾಹುಲ್ ಗಾಂಧಿಗೆ ಲೋಕಸಭೆ ಚುನಾವಣೆ ಸೋಲಿ‌ನ‌ ಕನಸು ಬೀಳುತ್ತಿದೆ: ಪ್ರಹ್ಲಾದ್​ ಜೋಶಿ
ಪ್ರಹ್ಲಾದ್ ಜೋಶಿ
ಶಿವಕುಮಾರ್ ಪತ್ತಾರ್
| Edited By: ವಿವೇಕ ಬಿರಾದಾರ|

Updated on: Apr 01, 2024 | 1:32 PM

Share

ಹುಬ್ಬಳ್ಳಿ, ಏಪ್ರಿಲ್​ 01: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಲೋಕಸಭೆ ಚುನಾವಣೆ (Lok Sabha Election) ಸೋಲಿ‌ನ‌ ಕನಸು ಬೀಳುತ್ತಿದೆ ಎಂದು ಕೇಂದ್ರ ಸಚಿವ, ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ (Pralhad Joshi) ವಾಗ್ದಾಳಿ ಮಾಡಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಕೇವಲ 40 ಕ್ಷೇತ್ರ ಗೆಲ್ಲುತ್ತೇವೆ ಅಂತ ಹೇಳುತ್ತಾರೆ. ಕಾಂಗ್ರೆಸ್​ ನಾಯಕರಿಗೂ ಸೋಲುತ್ತೇವೆ ಅಂತ ಅರ್ಥ ಆಗಿದೆ. ಹೀಗಾಗಿ ಚುನಾವಣಾ ಆಯೋಗ, EVM ಮೇಲೆ ಅನುಮಾನಪಡುತ್ತಾರೆ ಎಂದರು.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಾಗ EVM ಸಮಸ್ಯೆ ಇರಲಿಲ್ಲ. ಆದರೆ ನಾವು ಗೆದ್ದರೆ ಮಾತ್ರ ಇವಿಎಂ ಸಮಸ್ಯೆ ಇದೆ ಅಂತ ಕಾಂಗ್ರೆಸ್​ನವರು ಹೇಳುತ್ತಾರೆ. ಕಾಂಗ್ರೆಸ್ಸಿನವರು ಸೋಲಿನ ಭಯದಿಂದ ಹತಾಶರಾಗಿ ಮಾತನಾಡುತ್ತಿದ್ದಾರೆ ಕಾಂಗ್ರೆಸ್ ಪಕ್ಷ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಮೋದಿ ಅವರ ನೇತೃತ್ವದಲ್ಲಿ ಬಹಳ ಬದಲಾವಣೆಯಾಗಿದೆ. ಬಿಜೆಪಿಯನ್ನು ಗೆಲ್ಲಿಸಬೇಕೆಂದು ಜನ‌ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿ, ಆರ್​​ಎಸ್​ಎಸ್​ ವಿಷವಿದ್ದಂತೆ, ಅದರ ರುಚಿ ನೋಡಬೇಡಿ ಎಂಬ ಕಾಂಗ್ರೆಸ್​ ಮುಖಂಡ ಮಲ್ಲಿಕಾರ್ಜುನ್​ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಜೋಶಿ, ಮಲ್ಲಿಕಾರ್ಜುನ ಖರ್ಗೆ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.

ಇದನ್ನೂ ಓದಿ: ಡಿಕೆಶಿ ಟ್ರಬಲ್‌ ಶೂಟರ್ ಆಗಿದ್ದರೇ ದೇಶಾದ್ಯಂತ ಕಾಂಗ್ರೆಸ್​​ಗೆ ಆಗಿರುವ ಟ್ರಬಲ್ ಶೂಟ್​ ಮಾಡಲಿ: ಪ್ರಹ್ಲಾದ್ ಜೋಶಿ ಲೇವಡಿ

ಇನ್ನು ಬಿಜೆಪಿಯು ಬಾಂಗ್ಲಾದೇಶ ಜೊತೆಗೆ ಸೌಹಾರ್ದ ಗಡಿ ಒಪ್ಪಂದ ಮಾಡಿಕೊಂಡಂತೆ ನಾವು ಶ್ರೀಲಂಕೆಗೆ ಸ್ನೇಹದ ಸಂಕೇತವಾಗಿ ಕಚತೀವು ದ್ವೀಪ ಕೊಟ್ಟಿದ್ದೇವೆ ಎಂಬ ಮಲ್ಲಿಕಾರ್ಜುನ್​ ಖರ್ಗೆ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಂದು ಸಾರ್ವಭೌಮ ಸರ್ಕಾರ ಒಮ್ಮೆ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಅದನ್ನು ವಾಪಸ್ ಪಡೆಯಲು ಸಾಧ್ಯವೇ? ಅನೇಕ ದೇಶಗಳ ಜೊತೆ ಒಡಂಬಡಿಕೆ ಮಾಡಿಕೊಂಡಿರುತ್ತೇವೆ. ಸರ್ಕಾರ ಬದಲಾದ ಕೂಡಲೇ ಆ ಒಡಂಬಡಿಕೆ ರದ್ದು ಮಾಡಿಕೊಳ್ಳಲು ಆಗಲ್ಲ. ನೀವು ದ್ವೀಪವನ್ನು ಕೊಟ್ಟಿದ್ದು ಯಾಕೆ ಅಂತ ಹೇಳಿ. ನಮ್ಮ ಮೂರ್ಖತನದಿಂದ ಕೊಟ್ಟಿದ್ದೇವೆ ಅಂತ ಒಪ್ಪಿಕೊಳ್ಳಲಿ. ನಮ್ಮ ದೇಶದ ನೆಲ ಜಲದ ಬಗ್ಗೆ ನಮಗೆ ಕಾಳಜಿ ಇರಲಿಲ್ಲ ಅಂತ ಒಪ್ಪಿಕೊಳ್ಳಲಿ. ಅದನ್ನು ಬಿಟ್ಟು ಈ ರೀತಿ ಬಾಲಿಶ ಹೇಳಿಕೆ ನೀಡೋದನ್ನ ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಗ್ಯಾರಂಟಿ ವ್ಯಕ್ತಿಯ ಜೀವನವನ್ನು ಬದಲಾಯಿಸುತ್ತದೆ: ಸದಾನಂದಗೌಡ

ಪ್ರಧಾನಿ ಮೋದಿ ಅವರ ಗ್ಯಾರಂಟಿ ವ್ಯಕ್ತಿಯ ಜೀವನವನ್ನು ಬದಲಾಯಿಸುತ್ತದೆ. ಆದರೆ ಕಾಂಗ್ರೆಸ್​ನವರದ್ದು ಚುನಾವಣೆಗೆ ಬಂದಿರುವ ಗ್ಯಾರಂಟಿ. ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬುದ್ಧಿ ಕಲಿಸಬೇಕು. ಕಾಂಗ್ರೆಸ್​ಗೆ ಬುದ್ಧಿ ಕಲಿಸದಿದ್ದರೆ ಕುಡಿಯಲು ನೀರು ಸಹ ಕೊಡಲ್ಲ. ಮೂರು ತಿಂಗಳಿನಲ್ಲಿ ಕಾಂಗ್ರೆಸ್ ಸರ್ಕಾರ ಅಧಃಪತನ ಆಗುತ್ತದೆ. ಆ ನಂತರ ಜನಪರವಾದ ಆಡಳಿತ ಇರುವ ಸರ್ಕಾರ ಬರುತ್ತದೆ. ಕರ್ನಾಟಕದಲ್ಲಿ ಮೈತ್ರಿ ಪಕ್ಷ 28ಕ್ಕೆ 28 ಸ್ಥಾನಗಳಲ್ಲೂ ಗೆಲ್ಲುತ್ತದೆ. ಫಲಿತಾಂಶ ಪ್ರಕಟವಾದ 3 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಶಿವಕುಮಾರ್ ಪತ್ತಾರ್
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು