AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆನಡಾದಲ್ಲಿ ದ್ವೇಷ ಅಪರಾಧಗಳು ಹೆಚ್ಚುತ್ತಿವೆ, ಅಲ್ಲಿರುವ ಭಾರತೀಯರು ಜಾಗರೂಕರಾಗಿರಿ ಎಂದ ಭಾರತ ಸರ್ಕಾರ

ಅಪರಾಧಗಳು ಹೆಚ್ಚುತ್ತಿರುವ ಘಟನೆಗಳ ದೃಷ್ಟಿಯಿಂದ, ಭಾರತೀಯ ಪ್ರಜೆಗಳು ಮತ್ತು ಕೆನಡಾದಲ್ಲಿರುವ ಭಾರತದ ವಿದ್ಯಾರ್ಥಿಗಳು ಮತ್ತು ಪ್ರಯಾಣ/ಶಿಕ್ಷಣಕ್ಕಾಗಿ ಕೆನಡಾಕ್ಕೆ ಹೋಗುತ್ತಿರುವವರು ಸರಿಯಾದ ಎಚ್ಚರಿಕೆಯನ್ನು ವಹಿಸಲು ಮತ್ತು ಜಾಗರೂಕರಾಗಿರಲು ಸೂಚಿಸಲಾಗಿದೆ

ಕೆನಡಾದಲ್ಲಿ ದ್ವೇಷ ಅಪರಾಧಗಳು ಹೆಚ್ಚುತ್ತಿವೆ, ಅಲ್ಲಿರುವ ಭಾರತೀಯರು ಜಾಗರೂಕರಾಗಿರಿ ಎಂದ ಭಾರತ ಸರ್ಕಾರ
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ
TV9 Web
| Edited By: |

Updated on: Sep 23, 2022 | 9:20 PM

Share

ದೆಹಲಿ: ಕೆನಡಾದಲ್ಲಿರುವ (Canada) ತನ್ನ ನಾಗರಿಕರಿಗೆ ಮತ್ತು ಅಲ್ಲಿಗೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ದ್ವೇಷ ಅಪರಾಧಗಳು, ಪಂಥೀಯ ಹಿಂಸಾಚಾರ ಮತ್ತು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೀವ್ರ ಹೆಚ್ಚಳ” ಕುರಿತು ಎಚ್ಚರಿಸಿರುವ ಭಾರತ ಸರ್ಕಾರ ಜಾಗರೂಕರಾಗಿರಿ ಎಂದು ಹೇಳಿದೆ. ದ್ವೇಷದ ಅಪರಾಧಗಳು, ಪಂಥೀಯ ಹಿಂಸಾಚಾರ ಮತ್ತು ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಕೆನಡಾ ಸರ್ಕಾರಕ್ಕೆ ತಿಳಿಸಿದ್ದು ತನಿಖೆ ಮತ್ತು ಕ್ರಮಕ್ಕಾಗಿ ಒತ್ತಾಯಿಸಿರುವುದಾಗಿ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಕೆನಡಾದಲ್ಲಿ ಈ ಅಪರಾಧಗಳಲ್ಲಿನ  ಅಪರಾಧಿಗಳನ್ನು ಇದುವರೆಗೆ ನ್ಯಾಯಾಂಗಕ್ಕೆ ತರಲಾಗಿಲ್ಲ  ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ. ಅಪರಾಧಗಳು ಹೆಚ್ಚುತ್ತಿರುವ ಘಟನೆಗಳ ದೃಷ್ಟಿಯಿಂದ, ಭಾರತೀಯ ಪ್ರಜೆಗಳು ಮತ್ತು ಕೆನಡಾದಲ್ಲಿರುವ ಭಾರತದ ವಿದ್ಯಾರ್ಥಿಗಳು ಮತ್ತು ಪ್ರಯಾಣ/ಶಿಕ್ಷಣಕ್ಕಾಗಿ ಕೆನಡಾಕ್ಕೆ ಹೋಗುತ್ತಿರುವವರು ಸರಿಯಾದ ಎಚ್ಚರಿಕೆಯನ್ನು ವಹಿಸಲು ಮತ್ತು ಜಾಗರೂಕರಾಗಿರಲು ಸೂಚಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸಿಖ್ಖರಿಗೆ ಪ್ರತ್ಯೇಕ ತಾಯ್ನಾಡಿನ ಕುರಿತು ಖಾಲಿಸ್ತಾನ್ ಪರ ಅಂಶಗಳಿಂದ ಜನಾಭಿಪ್ರಾಯ ಸಂಗ್ರಹಣೆ ಎಂದು ಕರೆಯಲ್ಪಡುವ ದೊಡ್ಡ ರಾಜತಾಂತ್ರಿಕ ಗದ್ದಲದ ಮಧ್ಯದಲ್ಲಿ ಈ ಸಲಹೆಯನ್ನು ನೀಡಲಾಗಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಜನಾಭಿಪ್ರಾಯ ಸಂಗ್ರಹವನ್ನು ಉಗ್ರವಾದಿ ಮತ್ತು ತೀವ್ರಗಾಮಿ ಶಕ್ತಿಗಳಿಂದ ನಡೆಸಲಾದ ಪ್ರಹಸನ  ಎಂದು ಬಣ್ಣಿಸಿದ್ದರು. ಸೌಹಾರ್ದ ರಾಷ್ಟ್ರದಲ್ಲಿ ಇದಕ್ಕೆ ಅವಕಾಶ ನೀಡಿರುವುದು ತೀವ್ರ ಆಕ್ಷೇಪಾರ್ಹ ಎಂದು ಬಾಗ್ಚಿ ಹೇಳಿದ್ದಾರೆ.

ನಾವು ಇದನ್ನು ಪ್ರಹಸನ ಎಂದು ಕರೆಯುತ್ತೇವೆ. ಕೆನಡಾದಲ್ಲಿ ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆ ಎಂದು ಕರೆಯಲ್ಪಡುವ ಉಗ್ರಗಾಮಿಗಳು ಮತ್ತು ಮೂಲಭೂತವಾದಿಗಳಿಂದ ಪ್ರಹಸನ ನಡೆಸಲಾಗಿದೆ ಎಂದಿದ್ದಾರೆ ಬಾಗ್ಚಿ. ಕೆನಡಾದಲ್ಲಿರುವ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳು ಒಟ್ಟಾವಾದಲ್ಲಿರುವ ಭಾರತೀಯ ಮಿಷನ್ ಅಥವಾ ಟೊರೊಂಟೊ ಮತ್ತು ವ್ಯಾಂಕೋವರ್‌ನಲ್ಲಿರುವ ಕಾನ್ಸುಲೇಟ್‌ಗಳಲ್ಲಿ ನೋಂದಾಯಿಸಿಕೊಳ್ಳುವಂತೆ ಸರ್ಕಾರ ಒತ್ತಾಯಿಸಿತು. ಯಾವುದೇ ಅಗತ್ಯ ಅಥವಾ ತುರ್ತು ಸಂದರ್ಭದಲ್ಲಿ ಕೆನಡಾದಲ್ಲಿರುವ ಭಾರತೀಯ ನಾಗರಿಕರೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ಹೈಕಮಿಷನ್ ಮತ್ತು ಕಾನ್ಸುಲೇಟ್ ಜನರಲ್ ಸಹಾಯ ಒದಗಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

ಕೆನಡಾದಲ್ಲಿ ಭಾರತೀಯ ಮೂಲದ 1.6 ಮಿಲಿಯನ್ ಜನರು ಮತ್ತು ಅನಿವಾಸಿ ಭಾರತೀಯರು ಇದ್ದಾರೆ. ಈ ವರ್ಷ ದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ಕನಿಷ್ಠ ಎರಡು ದಾಳಿಗಳು ನಡೆದಿವೆ. ಸೆಪ್ಟೆಂಬರ್ 15 ರಂದು ಇಲ್ಲಿನ ದೇವಾಲಯವೊಂದರಲ್ಲಿ ಭಾರತ ವಿರೋಧಿ ಗ್ರಾಫಿಟಿ ಕಂಡುಬಂದಿತ್ತು.