AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Agnipath scheme ಅಗ್ನಿಪಥ್ ನೇಮಕಾತಿ ಯೋಜನೆಯ ವಿವರ ಬಿಡುಗಡೆ ಮಾಡಿದ ಭಾರತೀಯ ವಾಯುಪಡೆ

ಹೀಗೆ ನೇಮಕವಾದವರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಇವರಿಗೆ ಪ್ರತಿವರ್ಷ 30 ದಿನಗಳ ರಜೆ ಮತ್ತು ಅನಾರೋಗ್ಯವಿದ್ದರೆ ವೈದ್ಯಕೀಯ ಸಲಹೆ ಮೇರೆಗೆ  ರಜೆಯನ್ನೂ ನೀಡಲಾಗುತ್ತದೆ.

Agnipath scheme ಅಗ್ನಿಪಥ್ ನೇಮಕಾತಿ ಯೋಜನೆಯ ವಿವರ ಬಿಡುಗಡೆ ಮಾಡಿದ ಭಾರತೀಯ ವಾಯುಪಡೆ
ಅಗ್ನಿಪಥ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jun 19, 2022 | 4:50 PM

Share

ದೆಹಲಿ: ಭಾರತೀಯ ವಾಯುಪಡೆ (Indian Air Force) ಭಾನುವಾರ ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆಯ (Agnipath scheme) ವಿವರಗಳನ್ನು ಬಿಡುಗಡೆ ಮಾಡಿದೆ. ಇದು ಅರ್ಹತಾ ಮಾನದಂಡಗಳು, ವಯಸ್ಸಿನ ಮಿತಿ, ಶೈಕ್ಷಣಿಕ ಅರ್ಹತೆ ಮೊದಲಾದವುಗಳ ಬಗ್ಗೆ ವಿವರಿಸಿದೆ. ಸಶಸ್ತ್ರ ಪಡೆಗಿರುವ ಹೊಸ ಎಚ್​​ಆರ್ ಮ್ಯಾನೇಜ್​​ಮೆಂಟ್ ಯೋಜನೆಗೆ ಹದಿನೇಳೂವರೆ ಮತ್ತು21 ವರ್ಷ ವಯಸ್ಸಿನ ನಡುವೆ ಇರುವ ವಯಸ್ಸಿನ ಎಲ್ಲ ಭಾರತೀಯರು ಅರ್ಹತೆ ಪಡೆದಿರುತ್ತಾರೆ ಎಂದು ಐಎಎಫ್ (IAF) ಬಿಡುಗಡೆ ಮಾಡಿದ ದಾಖಲೆ ಹೇಳಿದೆ. ಅವರು ನಿರ್ದಿಷ್ಟ ವೈದ್ಯಕೀಯ ಅರ್ಹತೆಯ ಷರತ್ತುಗಳನ್ನು ಪೂರೈಸಬೇಕು. ತರಬೇತಿಯ ಅವಧಿಯವರೆಗೆ ಅವರ ಸಮವಸ್ತ್ರದಲ್ಲಿ ಧರಿಸಬೇಕಾದ ವಿಶಿಷ್ಟವಾದ ಚಿಹ್ನೆಯನ್ನು ಹೊಂದಿರುತ್ತಾರೆ. ಹೀಗೆ ನೇಮಕವಾದವರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಇವರಿಗೆ ಪ್ರತಿವರ್ಷ 30 ದಿನಗಳ ರಜೆ ಮತ್ತು ಅನಾರೋಗ್ಯವಿದ್ದರೆ ವೈದ್ಯಕೀಯ ಸಲಹೆ ಮೇರೆಗೆ  ರಜೆಯನ್ನೂ ನೀಡಲಾಗುತ್ತದೆ. ಸರ್ಕಾರದ ನಿರ್ದೇಶನದ ಮೇರೆಗೆ ನಾಲ್ಕು ವರ್ಷಗಳ ಅವಧಿಯ ಕೊನೆಯಲ್ಲಿ ಅವರನ್ನು ಔಪಚಾರಿಕ ಸೇವೆಗೆ ಸೇರಿಸಿಕೊಳ್ಳಬಹುದು. ಆದಾಗ್ಯೂ, ಅನಿವಾರ್ಯ ಸಂದರ್ಭಗಳಲ್ಲಿ ಹೊರತುಪಡಿಸಿ, ತಮ್ಮ ಸ್ವಂತ ಕೋರಿಕೆಯ ಮೇರೆಗೆ ನೇಮಕವಾದವರನ್ನು ಸೇವೆಯಿಂದ ಬಿಡುಗಡೆ ಮಾಡುವ ಆಯ್ಕೆ ಇರುವುದಿಲ್ಲ. ಹೀಗೆ ಆಯ್ಕೆಯಾದವರು 30,000 ರೂಮಾಸಿಕ ವೇತನಕ್ಕೆ ಅರ್ಹರಾಗಿರುತ್ತಾರೆ.ಇವರಿಗೆ ವರ್ಷಕ್ಕೆ ಇಂತಿಷ್ಟು ವೇತನ ಏರಿಕೆಯೂ ಆಗಲಿದೆ. ಅಪಾಯ ಮತ್ತು ಕಷ್ಟಗಳು, ಉಡುಗೆ ಮತ್ತು ಪ್ರಯಾಣ ಭತ್ಯೆಗಳು ಮತ್ತು ಮಿಲಿಟರಿಯ ಆರೋಗ್ಯ ಸೇವೆಗಳೂ ಇವರಿಗೆ ಸಿಗಲಿವೆ.

ಮಂಗಳವಾರ ಕೇಂದ್ರ ಸರ್ಕಾರವು ಘೋಷಿಸಿದ ಅಗ್ನಿಪಥ್ ಯೋಜನೆಯು ಭಾರತದಲ್ಲಿ 13 ಲಕ್ಷ ಬಲಿಷ್ಠ ಸಶಸ್ತ್ರ ಪಡೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ರಕ್ಷಣಾ ಪಿಂಚಣಿ ಮಸೂದೆಯನ್ನು ಕಡಿಮೆ ಮಾಡಲು ಉದ್ದೇಶಿಸಿದೆ. ಯೋಜನೆಯನ್ನು ಘೋಷಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಸಶಸ್ತ್ರ ಪಡೆಗಳ ಳಶ ಶಕ್ತಿಯು ವಿಶಾಲವಾದ ಭಾರತೀಯ ಜನಸಂಖ್ಯೆಯಂತೆ ಯುವಜನರಾಗಿರಬೇಕು ಎಂದು ಪ್ರಯತ್ನಗಳನ್ನು ಮಾಡಲಾಗುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ
Image
ಕೇಂದ್ರ ಸರ್ಕಾರದ ಯೋಜನೆ ಆರ್​ಎಸ್​ಎಸ್ ‘ಅಗ್ನಿಪಥ್’; 4 ವರ್ಷದ ಬಳಿಕ ಶೇ.75ರಷ್ಟು ಜನರನ್ನ ಹೊರ ಕಳುಹಿಸ್ತೀರಿ ಅವರಿಂದ ಏನು ಕೆಲಸ ಮಾಡಿಸುತ್ತೀರಿ -ಹೆಚ್ಡಿಕೆ ಗರಂ
Image
Agnipath Scheme: ಅಗ್ನಿಪಥ್ ವಿರುದ್ಧ ಪ್ರತಿಭಟನೆ ಮಾಡುವವರು ಸೇನೆಗೆ ಸೇರ ಬಯಸುವವರಲ್ಲ: ಬಿಸಿ ಪಾಟೀಲ್​​
Image
ಸರ್ಕಾರದ ಅತ್ಯುತ್ತಮ ಯೋಜನೆಗಳಿಗೆ ರಾಜಕೀಯ ಬಣ್ಣ: ಅಗ್ನಿಪಥ್ ವಿರೋಧಕ್ಕೆ ಪ್ರಧಾನಿ ಮೋದಿ ಬೇಸರ
Image
Agnipath Scheme: ನೇಮಕಾತಿ ವೇಳೆ ಹಳ್ಳಿಗಳಲ್ಲಿರುವ ಯುವಕರಿಗೆ ಶೇ.70ರಷ್ಟು ಆದ್ಯತೆ ನೀಡ್ತೇವೆ, 1 ಕೋಟಿ ರೂ. ಜೀವ ವಿಮೆ ಇದೆ -ಲೆಫ್ಟಿನೆಂಟ್ ಜನರಲ್‌ ಅನಿಲ್ ಪುರಿ

“ಇದು ಆರ್ಥಿಕತೆಗೆ ಹೆಚ್ಚಿನ ಕೌಶಲ್ಯದ ಉದ್ಯೋಗಿಗಳ ಲಭ್ಯತೆಗೆ ಕಾರಣವಾಗುತ್ತದೆ, ಇದು ಉತ್ಪಾದಕತೆ ಗಳಿಕೆ ಮತ್ತು ಒಟ್ಟಾರೆ ಜಿಡಿಪಿ ಬೆಳವಣಿಗೆಯಲ್ಲಿ ಸಹಾಯಕವಾಗಿದೆ” ಎಂದು ಸಿಂಗ್ ಹೇಳಿದ್ದಾರೆ.

ಆದರೆ, ಈ ಘೋಷಣೆ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿದೆ. ಪ್ರತಿಭಟನೆಯು ಸತತ ನಾಲ್ಕನೇ ದಿನವೂ ಮುಂದುವರೆದಿದ್ದು ಇದೀಗ ಪಂಜಾಬ್ ಮತ್ತು ಕೇರಳದಂತಹ ರಾಜ್ಯಗಳಿಗೆ ವ್ಯಾಪಿಸಿದೆ.

ಈ ಯೋಜನೆಯಡಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ನಂತರ ಯಾವುದೇ ನಿವೃತ್ತಿ ಪ್ರಯೋಜನಗಳು ಇರುವುದಿಲ್ಲ ಎಂದು ಪ್ರತಿಭಟನಾ ನಿರತ ಯುವಕರು ಆರೋಪಿಸಿದರು. ಪರಿಸ್ಥಿತಿಯನ್ನು ಶಮನಗೊಳಿಸುವ ಪ್ರಯತ್ನದಲ್ಲಿ, ಅಗ್ನಿಪಥ್ ನಿವೃತ್ತರಿಗೆ ರಕ್ಷಣಾ ಸಚಿವಾಲಯ ಮತ್ತು ಅರೆಸೇನಾ ಪಡೆಗಳಲ್ಲಿನ ಖಾಲಿ ಹುದ್ದೆಗಳಲ್ಲಿ 10 ಪ್ರತಿಶತ ಮೀಸಲಾತಿ ಸೇರಿದಂತೆ ಹಲವಾರು ಪ್ರೋತ್ಸಾಹಕಗಳನ್ನು ಕೇಂದ್ರವು ಶನಿವಾರ ಪ್ರಕಟಿಸಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!