ಬಾಂಗ್ಲಾದೇಶದ ಗಡಿ ಬಳಿ ಟರ್ಕಿಶ್ ಡ್ರೋನ್‌ಗಳ ನಿಯೋಜನೆ; ಭಾರತೀಯ ಸೇನೆ ಹೈ ಅಲರ್ಟ್
ಬಾಂಗ್ಲಾದೇಶವು ಟರ್ಕಿಶ್ ಡ್ರೋನ್‌ಗಳನ್ನು ಗಡಿಯ ಬಳಿ ನಿಯೋಜಿಸುತ್ತಿರುವುದರಿಂದ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದೆ. ಬಾಂಗ್ಲಾದೇಶ ಟರ್ಕಿ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಬಂಧಗಳು ಬೆಳೆಯುತ್ತಿರುವ ಮಧ್ಯೆ, ಬಾಂಗ್ಲಾದೇಶವು ತನ್ನ ಗಡಿಯ ಬಳಿ ಟರ್ಕಿಶ್ ಬೈರಕ್ತರ್ ಟಿಬಿ2 ಡ್ರೋನ್‌ಗಳ ನಿಯೋಜನೆಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಭದ್ರತಾ ಆತಂಕ ಹೆಚ್ಚಾಗಿರುವುದರಿಂದ ಭಾರತೀಯ ಸೇನೆ ಹೈಅಲರ್ಟ್ ನಲ್ಲಿದೆ.

ಢಾಕಾ (ಮಾರ್ಚ್ 4): ಬಾಂಗ್ಲಾದೇಶ ಸೇನೆಯು ತನ್ನ ಸೂಕ್ಷ್ಮ ಗಡಿ ಪ್ರದೇಶಗಳ ಬಳಿ ಟರ್ಕಿಶ್ ಬೈರಕ್ತರ್ ಟಿಬಿ-2 ಡ್ರೋನ್‌ಗಳನ್ನು ನಿಯೋಜಿಸುವುದನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಮಾನವರಹಿತ ವೈಮಾನಿಕ ವಾಹನಗಳು ಕಳೆದ ಕೆಲವು ತಿಂಗಳುಗಳಿಂದ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.
ಭಾರತದ ಗಡಿಯುದ್ದಕ್ಕೂ ಬಾಂಗ್ಲಾದೇಶದ ವಾಯುಪ್ರದೇಶದಲ್ಲಿ ಡ್ರೋನ್‌ಗಳು ಹಾರಾಟ ನಡೆಸುತ್ತಿರುವುದನ್ನು ಗಮನಿಸಲಾಗಿದೆ. ಕೆಲವು ಕಾರ್ಯಾಚರಣೆಗಳು 20 ಗಂಟೆಗಳಿಗಿಂತ ಹೆಚ್ಚು ಕಾಲ ನಡೆದಿವೆ ಎಂದು ಮೂಲಗಳು ಸೂಚಿಸಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ಏಜೆನ್ಸಿಗಳು ಗಡಿಯಲ್ಲಿ ಭದ್ರತೆಯನ್ನು ಬಲಪಡಿಸಿವೆ. ಡ್ರೋನ್ ಚಟುವಟಿಕೆಗಳನ್ನು ಪತ್ತೆಹಚ್ಚಲು ರಾಡಾರ್‌ಗಳು ಮತ್ತು ಇತರ ಕಾರ್ಯ ವಿಧಾನಗಳನ್ನು ನಿಯೋಜಿಸಿವೆ.
ಇದನ್ನೂ ಓದಿ: ಬಾಂಗ್ಲಾದೇಶದ ಅಲ್ಪಸಂಖ್ಯಾತರ ದಾಳಿ ಬಗ್ಗೆ ಭಾರತ ಚಿಂತಿಸುವ ಅಗತ್ಯವಿಲ್ಲ; ಬಾಂಗ್ಲಾ ಟೀಕೆ
ಟರ್ಕಿ ಮತ್ತು ಪಾಕಿಸ್ತಾನದೊಂದಿಗೆ ಬಾಂಗ್ಲಾದೇಶದ ಬೆಳೆಯುತ್ತಿರುವ ಮಿಲಿಟರಿ ಸಹಕಾರವನ್ನು ಭದ್ರತಾ ವಿಶ್ಲೇಷಕರು ಆತಂಕದಿಂದ ನೋಡಿದ್ದಾರೆ. ಬಾಂಗ್ಲಾದೇಶದಲ್ಲಿ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅಡಿಯಲ್ಲಿ ಆಡಳಿತವು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂಬ ಆತಂಕ ಹೆಚ್ಚಾಗಿದೆ. ಇದು ಭಾರತದಲ್ಲಿ ಕಳವಳಗಳನ್ನು ಹುಟ್ಟುಹಾಕಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ