Indian Army: ಗಾಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗಾಗಿ ಭಾರತೀಯ ಸೇನೆಯಿಂದ ಗಾಯನ ನಮನ; ವಿಡಿಯೋ ವೈರಲ್
Galwan clash: ‘ಗಾಲ್ವಾನ್ ಕೆ ವೀರ್..’ ಎಂಬ ಹಾಡನ್ನು ಖ್ಯಾತ ಗಾಯಕ ಹರಿಹರನ್ ಹಾಡಿದ್ದಾರೆ. ಭಾರತೀಯ ಯೋಧರ ಸಾಹಸದ ದೃಶ್ಯಗಳೊಂದಿಗೆ ಈ ಹಾಡನ್ನು ಸಂಯೋಜಿಸಲಾಗಿದೆ.
ಗಾಲ್ವಾನ್ ಸಂಘರ್ಷಕ್ಕೆ ನಿನ್ನೆಗೆ ಒಂದು ವರ್ಷ ಕಳೆದಿದೆ. 2020 ಜೂ.15ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದು, 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಂದು ಮಡಿದ ಯೋಧರಿಗಾಗಿ ಭಾರತೀಯ ಸೇನೆ ಒಂದು ವಿಡಿಯೋ ಹಾಡಿನ ಮೂಲಕ ಗೌರವ ಸಲ್ಲಿಸಿದೆ. ಭಾರತೀಯ ಸೇನೆ ಸಾರ್ವಜನಿಕ ಮಾಹಿತಿ ವಿಭಾಗದ ಹೆಚ್ಚುವರಿ ಡೈರಕ್ಟರೇಟ್ ಜನರಲ್ ಟ್ವಿಟರ್ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
‘ಗಾಲ್ವಾನ್ ಕೆ ವೀರ್..’ ಎಂಬ ಹಾಡನ್ನು ಖ್ಯಾತ ಗಾಯಕ ಹರಿಹರನ್ ಹಾಡಿದ್ದಾರೆ. ಭಾರತೀಯ ಯೋಧರ ಸಾಹಸದ ದೃಶ್ಯಗಳೊಂದಿಗೆ ಈ ಹಾಡನ್ನು ಸಂಯೋಜಿಸಲಾಗಿದೆ. ಲಡಾಖ್ನಲ್ಲಿ ನಿಯೋಜಿಸಲಾಗಿರುವ ಭಾರತೀಯ ಯೋಧರ ತರಬೇತಿ, ಯುದ್ಧ ಸಿದ್ಧತೆಗಳ ದೃಶ್ಯಗಳನ್ನು ಈ 5 ನಿಮಿಷಗಳ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ವಿಡಿಯೋ ಮತ್ತು ಹಾಡಿನ ಸಾಹಿತ್ಯ ಒಂದಕ್ಕೊಂದು ತುಂಬ ಚೆನ್ನಾಗಿ ಹೊಂದಾಣಿಕೆಯಾಗಿದ್ದು, ಅದನ್ನು ಕೇಳಿದರೆ ರೋಮಾಂಚನವಾಗದೆ ಇರದು.
ಗಾಲ್ವಾನ್ ಸಂಘರ್ಷದಲ್ಲಿ ಚೀನಾ ಯೋಧರ ದಾಳಿಯಲ್ಲಿ ಮಡಿದ ಸೈನಿಕರಿಗೆ ಲೇಹ್ನ 14 ಕಾರ್ಪ್ಸ್ (ಫೈರ್ ಆ್ಯಂಡ್ ಫ್ಯೂರಿ ಕಾರ್ಪ್ಸ್)ನ ಯೋಧರು ಗೌರವ ಸಮರ್ಪಿಸಿದ್ದಾರೆ ಎಂದು ಉತ್ತರ ವಿಭಾಗದ ಕಮಾಂಡ್ ತಿಳಿಸಿದ್ದಾರೆ. ಹಾಗೇ, ಹುತಾತ್ಮ ಯೋಧರಿಗಾಗಿ ಪೂರ್ವ ಲಡಾಖ್ನ ಪೋಸ್ಟ್ 120ರಲ್ಲಿ ಗಾಲ್ವಾನ್ ಧೀರರು ಎಂಬ ಹೆಸರಿನಲ್ಲಿ ಸ್ಮಾರಕವನ್ನೂ ಕಳೆದವರ್ಷವೇ ಕಟ್ಟಲಾಗಿದೆ. ಇಲ್ಲಿದೆ ನೋಡಿ ಚೀನಾ ಯೋಧರೊಂದಿಗೆ ಶೌರ್ಯದಿಂದ ಹೋರಾಡಿ, ಹುತಾತ್ಮರಾದ ಭಾರತದ ಯೋಧರಿಗಾಗಿ ರಚಿಸಲಾದ ವಿಡಿಯೋ ಹಾಡು..
“ मुझे तोड़ लेना वनमाली! उस पथ पर देना तुम फेंक, मातृभूमि पर शीश चढ़ाने जिस पथ जावें वीर अनेक ”#IndianArmy#StrongAndCapable pic.twitter.com/EUvxvBNH5W
— ADG PI – INDIAN ARMY (@adgpi) June 15, 2021
ಇದನ್ನೂ ಓದಿ: Corona 3rd Wave: ಬೆಂಗಳೂರಿನಲ್ಲಿ 4,500 ಐಸಿಯು ಬೆಡ್ಗಳನ್ನು ಸಿದ್ಧಪಡಿಸಿಕೊಳ್ಳಿ; ರಾಜ್ಯ ಸರ್ಕಾರಕ್ಕೆ ತಜ್ಞರ ಸಲಹೆ
Published On - 10:54 am, Wed, 16 June 21