AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾ ಟೆಕ್​ 5ನೇ ಆವೃತ್ತಿಯಲ್ಲಿ ಇಂದು ಸಂಜೆ ಭಾಷಣ ಮಾಡಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ; ಫ್ರಾನ್ಸ್ ಅಧ್ಯಕ್ಷರೂ ಭಾಗಿ

Viva Tech 2021: ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದು, ಈ ವೇದಿಕೆ ಮೂಲಕ ಟೆಕ್​ ಮತ್ತು ಸ್ಟಾರ್ಟ್​ ಅಪ್​​ ಜಗತ್ತಿನಲ್ಲಿ ಭಾರತದ ಪ್ರಗತಿಯ ಬಗ್ಗೆ ಮಾತನಾಡಲಿದ್ದೇನೆ ಎಂದು ತಿಳಿಸಿದ್ದಾರೆ.

ವಿವಾ ಟೆಕ್​ 5ನೇ ಆವೃತ್ತಿಯಲ್ಲಿ ಇಂದು ಸಂಜೆ ಭಾಷಣ ಮಾಡಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ; ಫ್ರಾನ್ಸ್ ಅಧ್ಯಕ್ಷರೂ ಭಾಗಿ
ನರೇಂದ್ರ ಮೋದಿ
TV9 Web
| Edited By: |

Updated on:Jun 16, 2021 | 9:10 AM

Share

ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಜೆ 4ಗಂಟೆಗೆ ವಿವಾ ಟೆಕ್​​ 5ನೇ ಆವೃತ್ತಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಹಾಗೇ ಈ ಕಾರ್ಯಕ್ರಮದಲ್ಲಿ ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್​ ಮಾರ್ಕೋನ್​, ಸ್ಪೇನ್​ ಪ್ರಧಾನಿ ಪೆಡ್ರೋ ಸಾಂಚೆಜ್​​ ಮತ್ತು ಐರೋಪ್ಯ ದೇಶಗಳ ಸಚಿವರು, ಸಂಸದರು ಪ್ರಮುಖ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ. ಹಾಗೇ, ಕಾರ್ಪೋರೇಟ್​ ವಲಯದಲ್ಲಿ ದಿಗ್ಗಜರಾಗಿ ಗುರುತಿಸಿಕೊಂಡಿರುವ ಆ್ಯಪಲ್​ ಕಂಪನಿ ಸಿಇಒ ಟಿಮ್​ ಕುಕ್​, ಫೇಸ್​​ಬುಕ್ ಅಧ್ಯಕ್ಷ, ಸಿಇಒ ಮಾರ್ಕ್​ ಜುಕನ್​​ಬರ್ಗ್​, ಮೈಕ್ರೋಸಾಫ್ಟ್​ ಅಧ್ಯಕ್ಷ ಬ್ರಾಡ್​ ಸ್ಮಿತ್​ ಕೂಡ ವಿವಾ ಟೆಕ್​​ನಲ್ಲಿ ಭಾಗವಹಿಸಲಿದ್ದಾರೆ.

ವಿವಾಟೆಕ್ 2021ರ​ 5ನೇ ಆವೃತ್ತಿಯಲ್ಲಿ ಮಾತನಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮುಖ್ಯಅತಿಥಿಯನ್ನಾಗಿ ಆಹ್ವಾನಿಸಲಾಗಿದೆ ಎಂದು ಪ್ರಧಾನಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಹಾಗೇ, ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದು, ವಿಡಿಯೋ ಕಾನ್ಫರೆನ್ಸ್​ ಮೂಲಕ ವಿವಾ ಟೆಕ್​ 2021ರ 5ನೇ ಆವೃತ್ತಿಯಲ್ಲಿ ಭಾಷಣ ಮಾಡಲಿದ್ದೇನೆ ಎಂದು ಹೇಳಿದ್ದಾರೆ. ಈ ವೇದಿಕೆ ಮೂಲಕ ಟೆಕ್​ ಮತ್ತು ಸ್ಟಾರ್ಟ್​ ಅಪ್​​ ಜಗತ್ತಿನಲ್ಲಿ ಭಾರತದ ಪ್ರಗತಿಯ ಬಗ್ಗೆ ಮಾತನಾಡಲಿದ್ದೇನೆ ಎಂದು ತಿಳಿಸಿದ್ದಾರೆ.

ವಿವಾ ಟೆಕ್​ ಎಂಬುದು ಯುರೋಪ್​ನ ಅತ್ಯಂತ ದೊಡ್ಡ ಡಿಜಿಟಲ್​ ಮತ್ತು ಸ್ಟಾರ್ಟ್​ ಅಪ್​ ಕಾರ್ಯಕ್ರಮವಾಗಿದೆ. 2016ರಿಂದ ಪ್ರತಿವರ್ಷ ಪ್ಯಾರಿಸ್​​ನಲ್ಲಿ ಈ ಸಮಾರಂಭ ನಡೆಯುತ್ತದೆ. ಇದನ್ನು ಪ್ರಮುಖ ಜಾಹೀರಾತು ಮತ್ತು ಮಾರುಕಟ್ಟೆ ಸಂಘಟಕರಾದ ಪಬ್ಲಿಕ್​ ಗ್ರೂಪ್​ ಮತ್ತು ಫ್ರೆಂಚ್​​ನ ಪ್ರಮುಖ ಸಮುಹ ಮಾಧ್ಯಮ ಲೆಸ್​ ಎಕೋಸ್​ ಜಂಟಿಯಾಗಿ ಆಯೋಜಿಸಿವೆ. ತಂತ್ರಜ್ಞಾನ, ಸ್ಟಾರ್ಟ್​ ಅಪ್​​ಗೆ ಸಂಬಂಧಿಸಿದ ವಸ್ತುಪ್ರದರ್ಶನ, ಪ್ರಶಸ್ತಿ ಪುರಸ್ಕಾರ, ಪ್ಯಾನಲ್​ ಚರ್ಚೆಗಳು ಇದರಲ್ಲಿ ನಡೆಯುತ್ತವೆ. ಈ ವರ್ಷದ ವಿವಾ ಟೆಕ್​ ಜೂ.16ರಿಂದ 19ರವರೆಗೆ ನಡೆಯಲಿದೆ.

ಇದನ್ನೂ ಓದಿ: Bigg Boss Kannada 8: ಬಿಗ್​ಬಾಸ್​​ ಮನೆಯೊಳಗೆ ಮತ್ತೆ ಹೋಗೋಕೆ ಬ್ಯಾಗ್​ ಪ್ಯಾಕ್ ಮಾಡಿದ ಸ್ಪರ್ಧಿಗಳು; ಒಳಹೋಗುವವರು ಬರೀ 11 ಮಂದಿ ಅಲ್ಲ!

Published On - 9:10 am, Wed, 16 June 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್