Explainer: ಗುಜರಾತ ಸರ್ಕಾರ ತಿದ್ದುಪಾಟು ಮಾಡಿರುವ ಶಿಕ್ಷಣ ಕಾಯ್ದೆಯನ್ನು ಅಲ್ಪಸಂಖ್ಯಾತರ ಶಾಲೆಗಳು ಯಾಕೆ ಪ್ರಶ್ನಿಸುತ್ತಿವೆ?

ಸುಪ್ರೀಮ್ ಕೋರ್ಟ್ ನೀಡಿದ ತೀರ್ಪಿಗೆ ಬದ್ಧವಾಗಿ, ಮೈನಾರಿಟಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿಗೆ ಅವರ ಸಾಮರ್ಥ್ಯದ ಪರೀಕ್ಷೆ (ಟಿಎಟಿ) ನಡೆಸುವುದನ್ನು ಕಡ್ಡಾಯ ಮಾಡಿದರೆ ಅಲ್ಲಿ ಕಲಿಯುವ ಮಕ್ಕಳ ಸ್ಕಿಲ್​ಗಳು ಉತ್ತಮಗೊಳ್ಳುತ್ತವೆ ಎಂದು ಗುಜರಾತ್ ಶಿಕ್ಷಣ ಸಚಿವ ಭೂಪೇಂದ್ರಸಿಂಗ್ ಚೂಡಾಸಮ ಹೇಳಿದ್ದರು.

Explainer: ಗುಜರಾತ ಸರ್ಕಾರ ತಿದ್ದುಪಾಟು ಮಾಡಿರುವ ಶಿಕ್ಷಣ ಕಾಯ್ದೆಯನ್ನು ಅಲ್ಪಸಂಖ್ಯಾತರ ಶಾಲೆಗಳು ಯಾಕೆ ಪ್ರಶ್ನಿಸುತ್ತಿವೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 15, 2021 | 8:39 PM

ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕ ಮತ್ತು ಪ್ರಿನ್ಸಿಪಾಲ್​ಗಳಾಗಿ ಕೆಲಸ ಮಾಡಲು ಶಿಕ್ಷಕರ ಸಾಮರ್ಥ್ಯ ಪರೀಕ್ಷೆ ಪಾಸು (ಟಿಎಟಿ) ಮಾಡುವುದು ಕಡ್ಡಾಯ ಎನ್ನುವ ಗುಜರಾತಿನ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ (ತಿದ್ದಪಡಿ) ಕಾಯ್ದೆ 2021ನ್ನು ಅಸಂವೈಧಾನಿಕ ಎಂದು ಬಣ್ಣಿಸಿ ಅದನ್ನು ಗುಜರಾತ್ ಹೈಕೋರ್ಟ್​ನಲ್ಲಿ ಪ್ರಶ್ನಿಸಲಾಗಿದೆ. ಈ ತಿದ್ದುಪಡಿ ಕಾಯ್ದೆಯ ಅಂಶಗಳೇನು ಮತ್ತು ಇದಕ್ಕೆ ಯಾಕೆ ವಿರೋಧ ವ್ಯಕ್ತವಾಗುತ್ತಿದೆ ಅಂತ ತಿಳಿದುಕೊಳ್ಳವುದು ಅವಶ್ಯಕವಾಗಿದೆ.

ಕಾಯ್ದೆಗೆ ಮಾಡಿರುವ ತಿದ್ದುಪಡಿ ಏನು?

ಗುಜರಾತಿನ ವಿಧಾನನ ಸಭೆಯು ಮಾರ್ಚ್​ 3 1 ರಂದು ಬಜೆಟ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಗುಜರಾತ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ (ತಿದ್ದಪಡಿ) ಕಾಯ್ದೆ 2021 ಅನ್ನು ಪಾಸು ಮಾಡಿತು. ಕಾಯ್ದೆಗೆ ಮಾಡಿರುವ ತಿದ್ದುಪಡಿಯು ಧಾರ್ಮಿಕ ಮತ್ತು ಬಹುಭಾಷೆ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳು, ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲ ಸರ್ಕಾರೀ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಶಾಲೆಗಳಿಗೆ ಅನ್ವಯವಾಗುವ ಕೇಂದ್ರೀಕೃತ ನಿಯಮ ಪಾಲಿಸಬೇಕೆಂದು ಹೇಳುತ್ತದೆ. ಗುಜರಾತ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಕಾಯ್ದೆ 1972 ಮೂಲ ಕಾಯ್ದೆಯಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಈ ನೀತಿಯಿಂದ ಹೊರಗಿಡಲಾಗಿತ್ತು.

ತಿದ್ದುಪಡಿಯ ಪ್ರಕಾರ, ‘ಸೆಕ್ಷನ್ 34 ಮತ್ತು ಕ್ಲಾಸ್ (ಬಿ) ಸಬ್-ಸೆಕ್ಷನ್ (1) ಮತ್ತು ಸೆಕ್ಷನ್ 34 ರ ಸಬ್ ಸೆಕ್ಷನ್ (2) (3) (4) ಮತ್ತು (5) ಅಲ್ಪಸಂಖ್ಯಾತ ಸಮುದಾಯದಿಂದ ಸ್ಥಾಪಿಸಲ್ಪಟ್ಟು. ಅವರಿಂದಲೇ ನಿರ್ವಹಿಸಲ್ಪಡುತ್ತಿರುವ ಧರ್ಮ ಇಲ್ಲವೇ ಭಾಷೆ-ಆಧಾರಿತ ಶಿಕ್ಷಣ ಸಂಸ್ಥೆಗೆ ಅನ್ವಯಿಸುವುದಿಲ್ಲ.’

ಸೆಕ್ಷನ್ 36, ಒಂದು ನೋಂದಾಯಿತ ಖಾಸಗಿ ಸೆಕಂಡರಿ ಶಾಲೆಯಲ್ಲಿ ಒಬ್ಬ ಮುಖ್ಯೋಪಾಧ್ಯಯ, ಶಿಕ್ಷಕ ಇಲ್ಲವೇ ಭೋದಕೇತರ ಸಿಬ್ಬಂದಿಯ ನೇಮಕಾತಿ ಇಲ್ಲವೇ ವಜಾ ಮಾಡುವುದು, ಕೆಲಸದಿಂದ ತೆಗೆದು ಹಾಕುವುದು ಇಲ್ಲವೇ ಹಿಂಬಡ್ತಿ ನೀಡಿವುದು ಮುಂತಾದವುಗಳಿಗೆ ಸಂಬಂಧಿಸಿದೆ. ಸೆಕ್ಷನ್ 34, ‘ನೋಂಧಾಯಿತ ಖಾಸಗಿ ಶಾಲೆಯೊಂದರ ಶಿಕ್ಷಕ ವರ್ಗ ಸಿಬ್ಬಂದಿಯ ಶೇಕಡಾ 15 ರಷ್ಟು ಸ್ಥಾನಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡಬೇಕು ಎಂದು ಹೇಳುತ್ತದೆ. ಒಂದು ಪಕ್ಷ ಈ ವರ್ಗಕ್ಕೆ ಸೇರಿದ ಅಭ್ಯರ್ಥಿ ಲಭ್ಯನಿಲ್ಲದಿದ್ದರೆ ಬೇರೆ ಅಭ್ಯರ್ಥಿಯನ್ನು ಪರಿಗಣಿಸಬಹುದು.

ಸರ್ಕಾರೀ ದಾಖಲೆಗಳ ಪ್ರಕಾರ ರಾಜ್ಯದಲ್ಲಿ ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರಿಂದ ನಡೆಸಲ್ಪಡುತ್ತಿರುವ 397 ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶೈಕ್ಷಣಿಕ ಸಂಸ್ಥೆಗಳಿವೆ,

ರಾಜ್ಯದ 5,216 ಅನುದಾನಿತ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಮತ್ತು 1,247 ಸರ್ಕಾರೀ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಾಲೆಗಳ ಕೆಟೆಗರಿ ಪ್ರಕಾರ, 300 ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದ ಶಾಲೆಗಳು ಮತ್ತು 97 ಭಾಷಿಕ ಅಲ್ಪಸಂಖ್ಯಾತರಿಗೆ ಸೇರಿದ ಶಾಲೆಗಳಿದ್ದು ಶಿಕ್ಷಣ ಕಾಯ್ದೆಗೆ ಸರ್ಕಾರ ಮಾಡಿರುವ ತಿದ್ದುಪಡಿ ಈ ಶಾಲೆಗಳ ಮೇಲೆ ಪರಿಣಾಮ ಬೀರುತ್ತದೆ ಇದರಲ್ಲಿ 173 ಮುಸ್ಲಿಂ, 89 ಕ್ರಿಶ್ಚಿಯನ್, 10 ಪಾರ್ಸಿ, 25 ಜೈನ್, 2 ಜ್ಯೂ ಮತ್ತು 1 ಸಿಖ್​ ಸಮುದಾಯಕ್ಕೆ ಸೇರಿದ ಶಾಲೆಗಳಿವೆ.

ಭಾಷಾ ಅಲ್ಪಸಂಖ್ಯಾತ ಶಾಲೆಗಳಲ್ಲಿ ಹಿಂದಿಗೆ 71, ಸಿಂಧಿ 71, ಮರಾಠಿ 10, ತಮಿಳು1, ಉರ್ದು 2 ಮತ್ತು ಮಲಯಾಳಂಗೆ 1 ಸೇರಿವೆ.

ಯಾವ ಕಾರಣಗಳ ಹಿನನ್ನಲೆಯಲ್ಲಿ ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸಬೇಕು ಎನ್ನುತ್ತಿದೆ?

ಮಾರ್ಚ್​ 31 ರಂದು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಮಸೂದೆಯಲ್ಲಿ ಸರ್ಕಾರ ಹೀಗೆ ಹೇಳಿತ್ತು: ಟಿಎಮ್​ಎ ಪೈ ಪ್ರತಿಷ್ಠಾನ ಮತ್ತು ಇತರರು vs ಕರ್ನಾಟಕ ಸರ್ಕಾರ ಮತ್ತು ಇತರರು 2002 ಪ್ರಕರಣದಲ್ಲಿ ಸುಪ್ರಿಮ್ ಕೋರ್ಟ್, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ, ಶಿಕ್ಷಣದ ಗುಣಮಟ್ಟ ಯಾವ ಕಾರಣಕ್ಕೂ ತಗ್ಗಬಾರದು. ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕ ವರ್ಗಕ್ಕೆ ಶಿಕ್ಷಣ ಒದಗಿಸುವ ಕ್ರಮವನ್ನು ವಿವರಿಸುವ ನಿಯಮಗಳನ್ನು ರೂಪಿಸಬಹುದಾಗಿದೆ.ಆದರೆ ಸಂಸ್ಥೆಗಳ ಆಡಳಿತಾತ್ಮಕ ಮತ್ತು ಸಿಬ್ಬಂದಿಯನ್ನು ನಿರ್ವಹಿಸುವ ವಿಷಯಗಳಲ್ಲಿ ಸರ್ಕಾರ ತಲೆ ಹಾಕಬಾರದು. ಅದಕ್ಕೆ ಅನುಗುಣವಾಗಿಯೇ, ಪ್ರಸ್ತಾಪಿತ ಕಾಯ್ದೆಯ ಸೆಕ್ಷನ್ 40ಎ ಬದಲಾಯಿಸಲು ಪ್ರಸ್ತಾಪಿಸಲಾಗಿದೆ.’

2002 ರ ಟಿಎಮ್​ಎ ಪೈ ಪ್ರತಿಷ್ಠಾನ ಪ್ರಕರಣದಲ್ಲಿ 11 ನ್ಯಾಯಾಧೀಶರ ಪೀಠವು, ರಾಷ್ಟ್ರೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ನಿಯಮಗಳು ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಸಮಾನವಾಗಿ ಅನ್ವಯಿಸುವ ತತ್ವ ಪಾಲಿಸಬೇಕು. ಈ ಹಿನ್ನೆಲೆಯಲ್ಲಿ, ಅಲ್ಪಸಂಖ್ಯಾತ ಹಕ್ಕು ಮತ್ತು ಅಧಿಕಾರಗಳಿಗೆ ಧಕ್ಕೆಯುಂಟಾಗದ ಹಾಗೆ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಮಟ್ಟವನ್ನು ಹೆಚ್ಚಿಸಲು ಅಥವಾ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಹೇಳುವುದು ಅನುಚಿತವೆನಿಸದು ಮತ್ತು ವಿಧಿ 30 (1) ಅಡಿಯಲ್ಲಿ ಅಲ್ಪಸಂಖ್ಯಾತ ಹಕ್ಕುಗಳ ಉಲ್ಲಂಘನೆಯಾಗದು,’ ಎಂದು ಪೀಠ ಹೇಳಿತ್ತು.

ಸುಪ್ರೀಮ್ ಕೋರ್ಟ್ ನೀಡಿದ ತೀರ್ಪಿಗೆ ಬದ್ಧವಾಗಿ, ಮೈನಾರಿಟಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿಗೆ ಅವರ ಸಾಮರ್ಥ್ಯದ ಪರೀಕ್ಷೆ (ಟಿಎಟಿ) ನಡೆಸುವುದನ್ನು ಕಡ್ಡಾಯ ಮಾಡಿದರೆ ಅಲ್ಲಿ ಕಲಿಯುವ ಮಕ್ಕಳ ಸ್ಕಿಲ್​ಗಳು ಉತ್ತಮಗೊಳ್ಳುತ್ತವೆ ಎಂದು ಗುಜರಾತ್ ಶಿಕ್ಷಣ ಸಚಿವ ಭೂಪೇಂದ್ರಸಿಂಗ್ ಚೂಡಾಸಮ ಹೇಳಿದ್ದರು.

‘ಪ್ರಸ್ತುತವಾಗಿ, ಸರ್ಕಾರೀ ಮತ್ತು ಅನುದಾನಿತ ಶಾಲೆಗಳಲ್ಲಿ ಕೇಂದ್ರೀಕೃತ ನೇಮಕಾತಿ ಪ್ರಕ್ರಿಯೆ ಅನುಸರಿಸಲಾಗುತ್ತಿದೆ. ಅದರೆ, ಮೈನಾರಿಟಿ ಶಾಲೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಟಿಎಟಿಯನ್ನು ಕಡಗಣಿಸಲಾಗುತ್ತಿದೆ, ಹಾಗಾಗೇ, ಮೈನಾರಿಟಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಕರು ಮತ್ತು ಪ್ರಿನ್ಸಿಪಾಲರ ನೇಮಕಾತಿ ಸಾಧ್ಯವಾಗುತ್ತಿಲ್ಲ,’ ಎಂದು ಚೂಡಾಸಮ ಸದನದಲ್ಲಿ ಹೇಳಿದ್ದರು.

‘ಆದರೆ, ಈಗ ತಿದ್ದುಪಡಿ ಕಾಯ್ದೆಯನ್ನು ಪಾಸ್​ ಮಾಡಿರುವುದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಅನ್ವುವಾಗುವ ನಿಯಮಗಳು ಮೈನಾರಿಟಿ ಶಾಲೆಗಳಿಗೂ ಅನ್ವಯವಾಗುವುದರಿಂದ ಅಲ್ಲೂ ಶಿಕ್ಷಣದ ಗುಣಮಟ್ಟ ಉತ್ತಮಗೊಳ್ಳಲಿದೆ, ಇದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ,’ ಎಂದು ಅವರು ಹೇಳಿದ್ದರು.

ಕಾಯ್ದೆಯನ್ನು ಪ್ರಶ್ನಿಸುತ್ತಿರುವವರು ಏನು ಹೇಳುತ್ತಾರೆ?

ಗುಜರಾತಿನ ಕ್ಯಾಥೊಲಿಕ್ ಚರ್ಚ್, ಗುಜರಾತ ರಾಜ್ಯದ ನಾನಾ ಭಾಗಗಳಲ್ಲಿರುವ 181 ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಾಲೆಗಳ ಒಕ್ಕೂಟ ಮತ್ತು ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳ ಮಂಡಳಿಯ ಕಾರ್ಯದರ್ಶಿಗಳಾಗಿರುವ ಫಾದರ್ ಟೆಲೆಸ್ ಫರ್ನಾಂಡಿಸ್ ಈ ಕಾಯ್ದೆಯನ್ನು ಗುಜರಾತ್​ ಹೈಕೋಟ್​ನಲ್ಲಿ ಪ್ರಶ್ನಿಸಿದ್ದಾರೆ, ಅವರು ಸಲ್ಲಿಸಿರುವ ಮನವಿ ಹೀಗೆ ಹೇಳಿತ್ತದೆ: ಈ ಕಾಯ್ದೆಯು, ನಮಗೆ ದಿಕ್ಕು ತೋಚದಂತೆ ಮಾಡಿದೆ, ಪ್ರಿನ್ಸಿಪಾಲರಿಂದ ಹಿಡಿದು ಶಿಕ್ಷಕರು ಮತ್ತು ಭೋದಕೇತರ ಸಿಬ್ಬಂದಿ ನೇಮಕಾತಿಗಳನ್ನು ರಾಜ್ಯ ಸರ್ಕಾರವೇ ಕೇಂದ್ರೀಕೃತ ನೇಮಕಾತಿ ಮೂಲಕ ಮೆರಿಟ್​ ಲಿಸ್ಟ್​ ಮಾಡಿ ಕಳಿಸುತ್ತದೆ, ಅದು ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ನಾವು 7 ದಿನಗಳೊಳಗೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು.’

ಸುಪ್ರೀಮ್ ಕೋರ್ಟ್​ ಟಿಎಮ್ಎ ಪೈ ಪ್ರತಿಷ್ಠಾನ ಮತ್ತು ಕರ್ನಾಟಕ ಸರ್ಕಾರ 2002 ಪ್ರಕರಣವನ್ನು ಉಲ್ಲೇಖಿಸುತ್ತಾ, ಫಾದರ್ ಫರ್ನಾಡಿಸ್ ಅವರು, ‘10 ವರ್ಚಗಳ ನಂತರ ಸರ್ಕಾರ ನಿದ್ರೆಯಿಂದ ಎಚ್ಚರವಾಗಿದೆಯೇ?,’ ಎಂದು ಪ್ರಶ್ನಿಸಿದ್ದಾರೆ.

ಕಾಯ್ದೆಯ ಪ್ರಕಾರ, ಮೈನಾರಿಟಿ ಶಿಕ್ಷಣ ಸಂಸ್ಥೆಗಳು ಮೊದಲಿನ ಹಾಗೆ, ನೇಮಕಾತಿಗಳನ್ನು ಮಾಡಿಕೊಳ್ಳಲು ಗುಜರಾತಿನ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ನಿಗಮದದಿಂದ ನೋ ಆಬ್ಲೆಕ್ಷನ್ ಸರ್ಟಿಫಿಕೇಟ್ ಪಡೆದುಕೊಳ್ಳುವ ಅಗತ್ಯವಿಲ್ಲ. ಅದರ ಬದಲಿಗೆ ಅವು ಕೇಂದ್ರೀಕೃತ ನೇಮಕಾತಿ ಪ್ರಕ್ರಿಯೆಯನ್ನು ಅನುಸರಿಸಬೇಕು, ಖಾಲಿಯಿರುವ ಹುದ್ದೆಗಳ ಬಗ್ಗೆ ಜಾಹೀರಾತನ್ನು ಸರ್ಕಾರವೇ ನೀಡುತ್ತದೆ. ಅಭ್ಯರ್ಥಿಗಳ ವಿದ್ಯಾರ್ಹತೆ ಮೇರೆಗೆ ಒಂದು ಮೆರಿಟ್​ ಲಿಸ್ಟ್ ತಯಾರಿಸಲಾಗುವುದು ಮತ್ತು ಅದರ ಆಧಾರದಲ್ಲ್ಲೇ ನೇಮಕಾತಿಗಳು ನಡೆಯುತ್ತವೆ.

‘ಪ್ರಮಾದವೆಸಗುವ ಸಿಬ್ಬಂದಿ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವ ಅಧಿಕಾರವನ್ನು ನಮ್ಮಿಂದ ಕಿತ್ತುಕೊಳ್ಳಲಾಗಿದೆ, ಸಂವಿಧಾನ30 (1) ವಿಧಿ ಅಡಿಯಲ್ಲಿ ಈ ಅಧಿಕಾರವನ್ನು ನಮಗೆ ನೀಡಲಾಗಿತ್ತು. ಶಿಕ್ಷಣ ಸಂಸ್ಥೆಗಳನ್ನು ನಡೆಸುವ ನಮಗಿದ್ದ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಸರ್ಕಾರದ ಈ ನೋಟಿಫಿಕೇಶನ್ ಮೈನಾರಿಟಿ ಸಮುದಾಯಗಳಿಗೆ ನೀಡಲಾಗಿದ್ದ ಮಾನವ ಅಧಿಕಾರವನ್ನು ಕಸಿದುಕೊಂಡಿದೆ,’ ಎಂದು ದಿ ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆ ಜೊತೆ ಮಾತಾಡಿದ ಗುಜರಾತ ಕ್ಯಾಥೊಲಿಕ್ ಚರ್ಚ್​​ಗಳ ಬಾತ್ಮೀದಾರ ಫಾದರ್ ವಿನಾಯಕ ಜಾಧವ ಹೇಳಿದ್ದಾರೆ.

2011 ರಲ್ಲಿ ಗುಜರಾತಿನ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಕಾಯ್ದೆಯ 35ನೇ ಸೆಕ್ಷನ್​ಗೆ ಗುಜರಾತ ಸರ್ಕಾರವು ಇಂಥದ್ದೇ ತಿದ್ದುಪಡಿ ತಂದಿದ್ದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Gujarat BJP: ಭರೂಚ್ ಸ್ಥಳೀಯ ಪಾಲಿಕೆ ಚುನಾವಣೆ; ಅತಿ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳಿಗೆ ಮಣೆ ಹಾಕಿದ ಬಿಜೆಪಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ