ಡೆಲ್ಟಾ ಪ್ಲಸ್ ಕೊರೊನಾ ಮೇಲೆ ಗಮನವಿರಿಸಿ ಲಸಿಕಾ ಅಭಿಯಾನ ಚುರುಕುಗೊಳಿಸಲಾಗುವುದು: ವಿ ಕೆ ಪೌಲ್

ಈಗಿರುವ ಅಧ್ಯಯನದ ವರದಿಯಂತೆ ನೊವಾವಾಕ್ಸ್ ಲಸಿಕೆಯು ಬಹಳ ಸುರಕ್ಷ ಹಾಗೂ ಪರಿಣಾಮಕಾರಿ ಆಗಿದೆ. ನೊವಾವಾಕ್ಸ್ ಲಸಿಕೆಯನ್ನು ಮುಂದೆ ಭಾರತದಲ್ಲೇ ತಯಾರಿಸಲಾಗುವುದು. ವೈದ್ಯಕೀಯ ಪರೀಕ್ಷೆಗಳು ಈ ಬಗ್ಗೆ ನಡೆಯುತ್ತಿದೆ ಎಂದು ಹೇಳಿದರು.

ಡೆಲ್ಟಾ ಪ್ಲಸ್ ಕೊರೊನಾ ಮೇಲೆ ಗಮನವಿರಿಸಿ ಲಸಿಕಾ ಅಭಿಯಾನ ಚುರುಕುಗೊಳಿಸಲಾಗುವುದು: ವಿ ಕೆ ಪೌಲ್
ವಿ.ಕೆ. ಪೌಲ್
Follow us
TV9 Web
| Updated By: ganapathi bhat

Updated on:Jun 15, 2021 | 6:41 PM

ದೆಹಲಿ: ಭಾರತದಲ್ಲಿ ಕಂಡುಬಂದಿರುವ ಡೆಲ್ಟಾ ಪ್ಲಸ್ ಕೊರೊನಾ ವೈರಾಣುವಿನ ಮೇಲೆ ನಿಗಾ ಇಟ್ಟುಕೊಂಡು ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲಾಗುವುದು ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಇಂದು (ಜೂನ್ 15) ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಲವೆಡೆ ಅನ್​ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ. ಈ ನಡುವೆ ಜನರು ಸಾಮಾಜಿಕ ಅಂತರ ಪಾಲಿಸಿಕೊಂಡು, ಶಿಸ್ತು ಮತ್ತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ಡೆಲ್ಟಾ ಪ್ಲಸ್ ವೈರಾಣು ಬಗ್ಗೆ ಮಾತನಾಡಿದ ಅವರು, ಈ ರೂಪಾಂತರಿ ವೈರಾಣು ಮಾರ್ಚ್​ನಿಂದ ಕಂಡುಬಂದಿದೆ. ಈ ರೂಪಾಂತರಿ ಈಗ ಆಸಕ್ತಿ ಹುಟ್ಟಿಸಿರುವ ವೈರಾಣು ಅಷ್ಟೇ. ಆದರೆ ಈ ಬಗ್ಗೆ ಆತಂಕ ಬೇಕಾಗಿಲ್ಲ ಎಂದು ಹೇಳಿದರು. ವೈರಸ್ ಹರಡುವಿಕೆ ಪ್ರಮಾಣ ಈಗ ಬಹಳಷ್ಟು ಕಡಿಮೆಯಾಗಿದೆ. ಸಣ್ಣ ವಲಯಗಳಲ್ಲಿ ಕೊರೊನಾ ನಿಯಂತ್ರಿಸಬೇಕು. ಕಳೆದ ವರ್ಷಕ್ಕಿಂತ ಈ ಬಾರಿಯ ಕೊರೊನಾ ವೈರಾಣು ಬಗ್ಗೆ ಹೆಚ್ಚು ಜಾಗೃತಿ ಬೇಕು ಎಂದು ತಿಳಿಸಿದರು.

ನೊವಾವಾಕ್ಸ್ ಲಸಿಕೆಯ ಬಗ್ಗೆಯೂ ಪೌಲ್ ಮಾತನಾಡಿದರು. ಈಗಿರುವ ಅಧ್ಯಯನದ ವರದಿಯಂತೆ ನೊವಾವಾಕ್ಸ್ ಲಸಿಕೆಯು ಬಹಳ ಸುರಕ್ಷ ಹಾಗೂ ಪರಿಣಾಮಕಾರಿ ಆಗಿದೆ. ನೊವಾವಾಕ್ಸ್ ಲಸಿಕೆಯನ್ನು ಮುಂದೆ ಭಾರತದಲ್ಲೇ ತಯಾರಿಸಲಾಗುವುದು. ವೈದ್ಯಕೀಯ ಪರೀಕ್ಷೆಗಳು ಈ ಬಗ್ಗೆ ನಡೆಯುತ್ತಿದೆ ಎಂದು ಹೇಳಿದರು.

ಆರೋಗ್ಯ ಸಚಿವಾಲಯದ ಸಹ ಕಾರ್ಯದರ್ಶಿ ಲವ್ ಅಗರ್ವಾಲ್ ಮಾತನಾಡಿ, ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಸುಮಾರು 65 ದಿನಗಳ ಬಳಿಕ, ಕೊವಿಡ್ ಪ್ರಕರಣಗಳ ಸಂಖ್ಯೆ 65 ಲಕ್ಷಕ್ಕಿಂತ ಕಡಿಮೆ ಇದೆ. ಗಣನೀಯ ಇಳಿಕೆ ಕಂಡುಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ. ಸದ್ಯ 9.13 ಲಕ್ಷ ಸಕ್ರಿಯ ಪ್ರಕರಣಗಳಿವೆ ಎಂದು ಅವರು ತಿಳಿಸಿದರು.

ಭಾರತದಲ್ಲಿ ಈಗಾಗಲೇ ಪತ್ತೆಯಾಗಿರುವ ಬಿ.1.617.2 ರೂಪಾಂತರಿ ಪ್ರಭೇದದ ವೈರಸ್ ಗೆ ವಿಶ್ವ ಆರೋಗ್ಯ ಸಂಸ್ಥೆಯು ಡೆಲ್ಟಾ ವೈರಸ್ ಎಂದು ಹೆಸರಿಟ್ಟಿದೆ. ಹೊಸ ಪ್ರಭೇದದ ವೈರಸ್ ಗಳನ್ನ ದೇಶಗಳ ಹೆಸರಿನಿಂದ ಕರೆಯುವುದು ಬೇಡ ಎಂಬ ಕಾರಣದಿಂದ ಡೆಲ್ಟಾ ಪ್ರಭೇದದ ವೈರಸ್ ಎಂದು ಹೆಸರಿಟ್ಟಿದೆ. ಆದರೆ, ಈಗ ಇದೇ ಡೆಲ್ಟಾ ಪ್ರಭೇದದ ವೈರಸ್ ಮತ್ತೆ ರೂಪಾಂತರಗೊಂಡಿದೆ. ರೂಪಾಂತರಗೊಂಡ ಹೊಸ ಪ್ರಭೇದದ ವೈರಸ್ ಗೆ ಡೆಲ್ಟಾ ಪ್ಲಸ್ ಅಥವಾ AY.1 ಎಂದು ಹೆಸರಿಡಲಾಗಿದೆ. ಭಾರತದಲ್ಲಿ ಡೆಲ್ಟಾ ವೈರಸ್ ಪ್ರಭೇದವೇ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಕೊರೊನಾದ ಎರಡನೇ ಅಲೆಯಲ್ಲಿ ಕೊರೊನಾ ಕೇಸ್ ಗಳು ಬಾರಿ ಸಂಖ್ಯೆಯಲ್ಲಿ ಏರಿಕೆಯಾಗಿದ್ದವು.

ಇದನ್ನೂ ಓದಿ: Corona Vaccine: ಕೊವಿಡ್ ಲಸಿಕೆ ಪಡೆಯಲು ಆನ್​ಲೈನ್ ರಿಜಿಸ್ಟ್ರೇಶನ್ ಅಥವಾ ಬುಕಿಂಗ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ

Corona Vaccine: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ; ಶೇಕಡಾ 100ರಷ್ಟು ಲಸಿಕೆ ನೀಡಿಕೆ ಸಾಧಿಸಿದ ಮೊದಲ ಗ್ರಾಮವಿದು!

Published On - 6:35 pm, Tue, 15 June 21