ಇರಾನ್ನಲ್ಲಿರುವ ಕನ್ನಡಿಗರೆ ಗಮನಿಸಿ… ಭಾರತೀಯ ದೂತಾವಾಸದ ಸಲಹೆಗಳಿವು; ಇಲ್ಲಿದೆ ವಾಟ್ಸಾಪ್, ಟೆಲಿಗ್ರಾಮ್ ಲಿಂಕ್
Israel Iran conflict: ಮಧ್ಯ ಪ್ರಾಚ್ಯದಲ್ಲಿ ಬಿಕ್ಕಟ್ಟು ಉದ್ಭವಿಸಿರುವುದರಿಂದ ಇರಾನ್ನಲ್ಲಿರುವ ಭಾರತೀಯರ ಸುರಕ್ಷತೆಗೆ ಭಾರತ ಕ್ರಮ ಕೈಗೊಂಡಿದೆ. ಅನಗತ್ಯವಾಗಿ ಓಡಾಟ ನಡೆಸಬಾರದು, ದೂತಾವಾಸ ಕಚೇರಿಯೊಂದಿಗೆ ಸದಾ ಸಂಪರ್ಕದಲ್ಲಿರಬೇಕು ಎಂಬಿತ್ಯಾದಿ ಅಂಶಗಳಿರುವ ಅಡ್ವೈಸರಿಯನ್ನು ಬಿಡುಗಡೆ ಮಾಡಲಾಗಿದೆ. ಇರಾನ್ ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಕನ್ನಡಿಗರೂ ಇದ್ದಾರೆ.

ನವದೆಹಲಿ, ಜೂನ್ 15: ಇಸ್ರೇಲ್ ಮತ್ತು ಇರಾನ್ ಮಧ್ಯೆ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎರಡೂ ದೇಶಗಳಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆ ಬಗ್ಗೆ ಭಾರತ ಚಿಂತಾಕ್ರಾಂತವಾಗಿದೆ. ಇರಾನ್ ಮೇಲೆ ಇಸ್ರೇಲ್ ವ್ಯಾಪಕ ವೈಮಾನಿಕ ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇರಾನ್ನಲ್ಲಿರುವ ಭಾರತೀಯರನ್ನು ರಕ್ಷಿಸಲು ಮತ್ತು ನೆರವು ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಇರಾನ್ನಲ್ಲಿರುವ ಭಾರತೀಯ ದೂತಾವಾಸ ಕಚೇರಿಯು ವಿವಿಧ ಸಹಾಯವಾಣಿಗಳನ್ನು ಬಿಡುಗಡೆ ಮಾಡಿದೆ.
ಇರಾನ್ನಲ್ಲಿ ಬಹಳಷ್ಟು ಭಾರತೀಯರಿದ್ದಾರೆ. ಕನ್ನಡಿಗರೂ ಕೂಡ ಸಾಕಷ್ಟಿದ್ದಾರೆ. ಅಲ್ಲಿರುವ ಭಾರತೀಯರು ಆತಂಕ ಪಡದೆ ತಾವು ನೀಡುವ ಸೂಚನೆ ಪ್ರಕಾರ ನಡೆದುಕೊಳ್ಳಬೇಕೆಂದು ಇಂಡಿಯನ್ ಎಂಬಸಿ ತಿಳಿಸಿದೆ. ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಸರಣಿ ಟ್ವೀಟ್ ಮಾಡಿರುವ ದೂತಾವಾಸ ಕಚೇರಿಯ ಅಕೌಂಟ್, ವಿವಿಧ ಸಹಾಯವಾಣಿ ನಂಬರ್ ಹಾಗೂ ಟೆಲಿಗ್ರಾಮ್ ಲಿಂಕ್ ಅನ್ನು ಒದಗಿಸಿದೆ.
ಇದನ್ನೂ ಓದಿ: ಪಾಕಿಸ್ತಾನ 3 ರಫೇಲ್ ಹೊಡೆದಿಲ್ಲ; ವಾಸ್ತವ ಗೊತ್ತಾದರೆ ಅಚ್ಚರಿ ಆಗಬಹುದು: ಡಸ್ಸೋ ಏವಿಯೇಶನ್ ಸಿಇಒ
‘ಇರಾನ್ನಲ್ಲಿರುವ ಈಗಿನ ಸಂದರ್ಭವನ್ನು ಗಮನಿಸಿ, ಇರಾನ್ನಲ್ಲಿರುವ ಭಾರತೀಯ ನಾಗರಿಕರು ಹಾಗೂ ಭಾರ ಮೂಲದ ವ್ಯಕ್ತಿಗಳು ದೂತಾವಾಸ ಕಚೇರಿಯೊಂದಿಗೆ ಸಂಪರ್ಕದಲ್ಲಿ ಇರಬೇಕು. ಇರಾನ್ನಲ್ಲಿ ಅನಗತ್ಯವಾಗಿ ಓಡಾಡುವುದು ಇತ್ಯಾದಿಯನ್ನು ಮಾಡಬಾರದು. ಎಂಬಸಿಯ ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು ಗಮನಿಸುತ್ತಿರಬೇಕು’ ಎಂದು ಅಡ್ವೈಸರಿಯನ್ನು ಬಿಡುಗಡೆ ಮಾಡಲಾಗಿದೆ.
Advisory for all Indian nationals and Persons of Indian Origin currently in Iran. @MEAIndia @IndianDiplomacy pic.twitter.com/hACYKyaeId
— India in Iran (@India_in_Iran) June 15, 2025
ಇರಾನ್ನಲ್ಲಿರುವ ಭಾರತೀಯ ನಾಗರಿಕರಿಗೆ ತುರ್ತು ಸಂಪರ್ಕ ಸಂಖ್ಯೆ:
ಫೋನ್ ಕರೆ ಸಂಪರ್ಕ:
- +98 9128109115
- +98 9128109109
ವಾಟ್ಸಾಪ್ ಸಂಪರ್ಕ:
- +98 9010144557
- +98 9015993320
- +91 8086871709
ಅಗತ್ಯ ಮಾಹಿತಿಗೆ ಟೆಲಿಗ್ರಾಮ್ ಚಾನಲ್
ಪರಿಸ್ಥಿತಿ ಬಗ್ಗೆ ಕಾಲಕಾಲಕ್ಕೆ ಅಪ್ಡೇಟ್ ಮಾಡುವ ಮತ್ತು ಸಲಹೆ ನೀಡುವ ಕಾರ್ಯಕ್ಕಾಗಿ ಭಾರತೀಯ ದೂತಾವಾಸ ಕಚೇರಿಯು ಟೆಲಿಗ್ರಾಮ್ ಲಿಂಕ್ವೊಂದನ್ನು ರಚಿಸಿದೆ. ಎಲ್ಲರೂ ಕೂಡ ಈ ಲಿಂಕ್ ಅನ್ನು ಫಾಲೋ ಮಾಡಬೇಕೆಂದು ಸೂಚಿಸಲಾಗಿದೆ.
We request everyone in Iran to join the below given Telegram Link to receive updates on the situation from the Embassy. Kindly note that this Telegram Link is ONLY for those Indian Nationals who are currently in Iran.https://t.co/6rLuloaEYO
— India in Iran (@India_in_Iran) June 15, 2025
ಇದನ್ನೂ ಓದಿ: ಇರಾನ್- ಇಸ್ರೇಲ್ ವಾರ್: ಇಸ್ರೇಲ್ನಲ್ಲಿ ಸಿಲುಕಿದ ಕಾಂಗ್ರೆಸ್, ಬಿಜೆಪಿ ಮತ್ತು JDS ನಿಯೋಗ
ಇರಾನ್ನಿಂದ ಸಂಭಾವ್ಯ ದಾಳಿ ಆಗಬಹುದು ಎಂದು ಮುನ್ನೆಚ್ಚರಿಕೆಯಾಗಿ ಭಾರತವು ಇರಾನ್ನ ಮಿಲಿಟರಿ ಮತ್ತು ಪರಮಾಣು ಘಟಕಗಳ ಮೇಲೆ ವಾಯುದಾಳಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ದೇಶವು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇಸ್ರೇಲ್ನ ವಿವಿಧ ನಗರಗಳ ಮೇಲೆ ಹಾರಿಸಿತ್ತು. ಇದಕ್ಕೆ ಇಸ್ರೇಲ್ ಮತ್ತೆ ಪ್ರತಿದಾಳಿ ನಡೆಸುವ ಸಾಧ್ಯತೆ ಇದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




