AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೋಟದ ಮನೆ ಟಾರ್ಗೆಟ್: ಕಳ್ಳರನ್ನು ಕರೆಸಿ ಕಳ್ಳತನ ಮಾಡಿಸಿದ ಕಾನ್ಸ್‌ಟೇಬಲ್‌; ಆರು ಜನರ ಬಂಧನ

ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕಿನ ಹಳೆ ನಿಡು ನೇಗಿಲು ಗ್ರಾಮದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಕಳ್ಳರನ್ನು ಕರೆಸಿ ಕಾನ್ಸ್‌ಟೇಬಲ್​​ನೇ ಕಳ್ಳತನ ಮಾಡಿಸಿರುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಸದ್ಯ ಹಾವೇರಿ ಜಿಲ್ಲೆ ಹಿರೇಕೆರೂರು ಠಾಣೆ ಪೊಲೀಸರು ಕಳ್ಳತನಕ್ಕೆ ಸಾಥ್​ ನೀಡಿದ ಕಾನ್ಸ್‌ಟೇಬಲ್ ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಿದ್ದಾರೆ.

ತೋಟದ ಮನೆ ಟಾರ್ಗೆಟ್: ಕಳ್ಳರನ್ನು ಕರೆಸಿ ಕಳ್ಳತನ ಮಾಡಿಸಿದ ಕಾನ್ಸ್‌ಟೇಬಲ್‌; ಆರು ಜನರ ಬಂಧನ
ಕಳ್ಳತನ ನಡೆದ ಮನೆImage Credit source: tv9 kannada
ಗಂಗಾಧರ​ ಬ. ಸಾಬೋಜಿ
|

Updated on: Feb 07, 2026 | 9:15 PM

Share

ಹಾವೇರಿ, ಫೆಬ್ರವರಿ 07: ಮದುವೆಯಾಗಿದ್ದ ಊರಿನಲ್ಲಿ ಕಳ್ಳತನ (Theft) ಮಾಡಿಸಿದ್ದ ಕಾನ್ಸ್‌ಟೇಬಲ್​ ಸೇರಿದಂತೆ ಆರು ಜನ ಕಳ್ಳರನ್ನು ಜಿಲ್ಲೆಯ ಹಿರೇಕೆರೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹಿರೇಕೇರೂರು ತಾಲೂಕಿನ ಹಳೆ ನಿಡು ನೇಗಿಲು ಗ್ರಾಮದಲ್ಲಿ ಘಟನೆ ನಡೆದಿದೆ. ಬಾಗಲಕೋಟೆ ಮೂಲದ ರಾಘವೇಂದ್ರ, ವಿಜಯ, ಮಲ್ಲೇಶ, ಕಾಂತೇಶ್, ನಾಗೇಶ್ ಮತ್ತು ಹಿರೇಕೆರೂರು ಪೊಲೀಸ್ ಠಾಣೆಯ ಕಾರು ಚಾಲಕ ಪ್ರದೀಪ್ ನಾಯಕ್ ಬಂಧಿತರು.

ನಡೆದಿದ್ದೇನು? 

ಜನವರಿ 19ರಂದು ರಾತ್ರಿ ಹಿರೇಕೆರೂರು ತಾಲೂಕಿನ ಹಳೇ ನಿಡುನೇಗಿಲು ಗ್ರಾಮದ ಮಲ್ಲನಗೌಡ ಈಶ್ವರಗೌಡ ಪಾಟೀಲ್ ಅವರ ತೋಟದ ಮನೆಯಲ್ಲಿ ಕಳ್ಳತನ ನಡೆದಿತ್ತು. ಮಲ್ಲನಗೌಡ ಇತ್ತೀಚೆಗೆ ಹೊಸ ಮನೆ ನಿರ್ಮಾಣಕ್ಕೆಂದು ದುಡ್ಡು ತಂದಿಟ್ಟಿದ್ದರು. ಕಾನ್ಸ್‌ಟೇಬಲ್‌ ಪ್ರದೀಪ್ ನಾಯಕ್​​ ಹಾಕಿ ಕೊಟ್ಟಿದ್ದ ಸ್ಕೆಚ್​​ನಂತೆ  ರಾತ್ರಿ ಸುಮಾರು 11.30ರ ವೇಳೆಗೆ ತೋಟದ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು, ಸುಮಾರು 90 ಗ್ರಾಂ ಚಿನ್ನಾಭರಣ, ಅರ್ಧ ಕೆ.ಜಿ ಬೆಳ್ಳಿ ಮತ್ತು ಸುಮಾರು 5 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದರು.

ಇದನ್ನೂ ಓದಿ: ಮಗು ಹುಟ್ಟಿ ಏಳೇ ದಿನಕ್ಕೆ ಮಾರಾಟಕ್ಕೆ ಮುಂದಾದ ಹೆತ್ತವರು: ದಂಪತಿ ಸೇರಿ ಐವರ ಬಂಧನ

ಹಳೇ ನಿಡುನೇಗಿಲು ಗ್ರಾಮದ ಅಳಿಯ ಕಾನ್ಸ್‌ಟೇಬಲ್ ಪ್ರದೀಪ್ ನಾಯಕ್, ನೈಟ್‌ ಬೀಟ್‌ಗೆ ತೆರಳುವ ನೆಪದಲ್ಲಿ ಸ್ಥಳದ ಮಾಹಿತಿ ಸಂಗ್ರಹಿಸಿ, ಕಳ್ಳರನ್ನು ಕರೆಸಿ ಕೃತ್ಯ ನಡೆಸಿಸಿರುವುದು ಪೊಲೀಸ್​ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಾನ್ಸ್‌ಟೇಬಲ್ ಪ್ರದೀಪ್ ನಾಯಕ್ ಸೇರಿದಂತೆ ಆರು ಜನ ಆರೋಪಿಗಳನ್ನು ಬಂಧಿಸಿರುವ ಹಿರೇಕೆರೂರು ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ತಿರುಪತಿಗೆ ತೆರಳಿದ್ದ ವೇಳೆ ಕೈಚಳಕ ತೋರಿಸಿದ ಕಳ್ಳರು

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಮನೆ ಬೀಗ ಒಡೆದು 30 ಗ್ರಾಂ ಚಿನ್ನ , 450 ಗ್ರಾಂ ಬೆಳ್ಳಿ ಸೇರಿದಂತೆ 46 ಸಾವಿರ ರೂ ಹಣವನ್ನು ಕಳ್ಳರು ಕಳತನ ಮಾಡಿರುವಂತಹ ಘಟನೆ ನಡೆದಿದೆ. ಗೌರಿಬಿದನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಹಿಳೆಯರೇ ಡ್ರಾಪ್ ಕೇಳುವ ಮುನ್ನ ಹುಷಾರ್: ಸಹಾಯ ಮಾಡುವ ನೆಪದಲ್ಲಿ ಹೀಗಾ ಮಾಡೋದು?

ಡಿಆರ್​ಎಂ ಬಡಾವಣೆಯಲ್ಲಿ ಹರೀಶ್​ ಮನೆಯಲ್ಲಿ ಕಳ್ಳತನ ನಡೆದಿದೆ. ಕುಟುಂಬದವರೆಲ್ಲಾ ತಿರುಪತಿಗೆ ಹೋಗಿದ್ದಾಗ ಕಳ್ಳರು ಕೈಚಳಕ ತೋರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್
ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್
ಎಲೆಕ್ಟ್ರಾನಿಕ್ಸ್ ಘಟಕ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ಅನುದಾನ
ಎಲೆಕ್ಟ್ರಾನಿಕ್ಸ್ ಘಟಕ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ಅನುದಾನ
ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್
ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್
ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ
ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ
ತೇಜಸ್ವಿ ಸೂರ್ಯಗೆ ಇನ್ನೂ ಅನುಭವವಿಲ್ಲ: ಬರೀ ಖಾಲಿ ಮಾತು ಬೇಡ ಎಂದ ಡಿಕೆಶಿ
ತೇಜಸ್ವಿ ಸೂರ್ಯಗೆ ಇನ್ನೂ ಅನುಭವವಿಲ್ಲ: ಬರೀ ಖಾಲಿ ಮಾತು ಬೇಡ ಎಂದ ಡಿಕೆಶಿ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಸುದ್ದಿಗೋಷ್ಠಿ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಸುದ್ದಿಗೋಷ್ಠಿ
ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ
ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ
ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ
ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ
ಡೆಲಿವರಿ ಬಾಯ್ಸ್ಗೆ ಹೆಲ್ಮೆಟ್​ನಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ ಕಿಡಿಗೇಡಿಗಳು
ಡೆಲಿವರಿ ಬಾಯ್ಸ್ಗೆ ಹೆಲ್ಮೆಟ್​ನಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ ಕಿಡಿಗೇಡಿಗಳು
ಸ್ಕೂಟರ್​​ಗೆ ಡಿಕ್ಕಿ ತಪ್ಪಿಸಲು ಹೋಗಿ ರಿಕ್ಷಾ ಪಲ್ಟಿ; ವಿಡಿಯೋ ವೈರಲ್
ಸ್ಕೂಟರ್​​ಗೆ ಡಿಕ್ಕಿ ತಪ್ಪಿಸಲು ಹೋಗಿ ರಿಕ್ಷಾ ಪಲ್ಟಿ; ವಿಡಿಯೋ ವೈರಲ್