ಉಗುಳಿನ ಕಲೆ ಶುಚಿಗೊಳಿಸಲು ಭಾರತೀಯ ರೈಲ್ವೇ ಎಷ್ಟು ಖರ್ಚು ಮಾಡುತ್ತದೆ ಗೊತ್ತಾ? ಈ ಸಮಸ್ಯೆಗೆ ಕಂಡುಕೊಂಡ ಪರಿಹಾರ ಏನು?

| Updated By: ganapathi bhat

Updated on: Oct 10, 2021 | 8:54 PM

Indian Railways: ಈ ಪೌಚ್​ಗಳನ್ನು ಸುಲಭವಾಗಿ ಕಿಸೆಯಲ್ಲಿ ಇಟ್ಟುಕೊಳ್ಳಬಹುದಾಗಿದೆ. ಈ ಪೌಚ್ ಸಹಾಯದಿಂದ ರೈಲಿನ ಪ್ರಯಾಣಿಕರು ಎಲ್ಲಿ ಬೇಕಾದರೆ ಅಲ್ಲಿ ಉಗುಳಬಹುದು. ಇದರಿಂದ ಕಲೆ, ಕೊಳೆಯ ಸಮಸ್ಯೆ ದೂರವಾಗಲಿದೆ.

ಉಗುಳಿನ ಕಲೆ ಶುಚಿಗೊಳಿಸಲು ಭಾರತೀಯ ರೈಲ್ವೇ ಎಷ್ಟು ಖರ್ಚು ಮಾಡುತ್ತದೆ ಗೊತ್ತಾ? ಈ ಸಮಸ್ಯೆಗೆ ಕಂಡುಕೊಂಡ ಪರಿಹಾರ ಏನು?
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಭಾರತೀಯರನ್ನು ಎಷ್ಟೇ ಎಚ್ಚರಿಸಿದರೂ ಅಥವಾ ಬುದ್ಧಿಮಾತು ಹೇಳಿದರೂ ಕೆಲವೊಂದು ವಿಚಾರದಲ್ಲಿ ಜನರು ಬದಲಾಗುವುದಿಲ್ಲ. ಅಥವಾ ಬದಲಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ನಿಯಮಗಳನ್ನು ಗಾಳಿಗೆ ತೂರಿ ಉಡಾಫೆ ಮನೋಭಾವ ತೋರುತ್ತಾರೆ. ಅದರಲ್ಲಿ ಎಲ್ಲೆಂದರಲ್ಲಿ ಉಗುಳುವ ಅಭ್ಯಾಸವೂ ಒಂದು. ಕೊವಿಡ್19 ಕಾಲದಲ್ಲಿ ಇದು ಬಹುದೊಡ್ಡ ಸಮಸ್ಯೆಯಾಗಿ ತಲೆದೋರಿತು. ಇದಕ್ಕಾಗಿ ರೈಲ್ವೇ ವಿಭಾಗ ಗ್ರೀನ್ ಇನ್ನೋವೇಷನ್ ಎಂಬ ಹೊಸ ಉಪಾಯ ಕಂಡುಕೊಂಡಿದೆ. ಒಂದು ಅಂದಾಜಿ ನ ಪ್ರಕಾರ ಭಾರತೀಯ ರೈಲ್ವೇ ಇಲಾಖೆ ಉಗುಳಿನ ಕೊಳಕನ್ನು ಶುಚಿಗೊಳಿಸಲು ತುಂಬಾ ದೊಡ್ಡ ಪ್ರಮಾಣದಲ್ಲಿ ನೀರು ಹಾಗೂ ಸುಮಾರು 1,200 ಕೋಟಿ ರೂಪಾಯಿಯನ್ನು ವ್ಯಯ ಮಾಡುತ್ತಿದೆ.

ಇಂತಹ ಸಮಸ್ಯೆಯನ್ನು ಸರಿಪಡಿಸಲು ಯಂತ್ರ ಒಂದನ್ನು ಸುಮಾರು 42 ನಿಲ್ದಾಣಗಳಲ್ಲಿ ಅಳವಡಿಸಲಾಗುತ್ತಿದೆ. ಅದು ಸ್ಪಿಟ್ಟೂನ್ ಪೌಚ್​ಗಳನ್ನು ನೀಡುತ್ತದೆ. ಅದಕ್ಕೆ 5 ರಿಂದ 10 ರೂಪಾಯಿಗಳ ಬೆಲೆ ನಿಗದಿಪಡಿಸಲಾಗಿದೆ. ಪಶ್ಚಿಮ, ಉತ್ತರ ಹಾಗೂ ಸೆಂಟ್ರಲ್ ರೈಲ್ವೇ ಝೋನ್​ಗಳು ಈ ಸಂಬಂಧ ಈಸಿಸ್ಪಿಟ್ ಎಂಬ ಸಂಸ್ಥೆಗೆ ಕಾಂಟ್ರಾಕ್ಟ್ ಕೊಡಲಾಗಿದೆ. ಈ ಪೌಚ್​ಗಳನ್ನು ಸುಲಭವಾಗಿ ಕಿಸೆಯಲ್ಲಿ ಇಟ್ಟುಕೊಳ್ಳಬಹುದಾಗಿದೆ. ಈ ಪೌಚ್ ಸಹಾಯದಿಂದ ರೈಲಿನ ಪ್ರಯಾಣಿಕರು ಎಲ್ಲಿ ಬೇಕಾದರೆ ಅಲ್ಲಿ ಉಗುಳಬಹುದು. ಇದರಿಂದ ಕಲೆ, ಕೊಳೆಯ ಸಮಸ್ಯೆ ದೂರವಾಗಲಿದೆ.

ಈ ಪೌಚ್​ನ ತಯಾರಕರ ಹೇಳಿಕೆಯಂತೆ, ಈ ಉತ್ಪನ್ನವು ಮ್ಯಾಕ್ರೋಮಾಲಿಕ್ಯೂಲ್ ಪಲ್ಪ್ ಟೆಕ್ನಾಲಜಿ ಹೊಂದಿದೆ. ಹಾಗೂ ಉಗುಳಿನಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ವೈರಾಣುಗಳನ್ನು ತಡೆದು ಹಿಡಿಯಬಹುದಾಗಿದೆ. ಈ ಬಯೋಡಿಗ್ರೇಡೇಬಲ್ ಪೌಚ್​ಗಳನ್ನು 15, 20 ಸಲವೂ ಬಳಸಬಹುದಾಗಿದೆ. ಅವು ಉಗುಳನ್ನು ದ್ರವದಿಂದ ಘನಕ್ಕೆ ಪರಿವರ್ತಿಸಿ ಹಿಡಿದಿಟ್ಟುಕೊಳ್ಳುತ್ತವೆ. ಈ ಸ್ಯಾಚೆಟ್ ಅಥವಾ ಪೌಚ್​ಗಳನ್ನು ಬಳಸಿದ ನಂತರ ಮಣ್ಣಿಗೆ ಎಸೆಯಬೇಕಾಗಿದೆ. ಅದು ಮಣ್ಣಿನಲ್ಲಿ ಸೇರಿಕೊಂಡು ಗಿಡದ ಅಥವಾ ಹಸಿರಿನ ಬೆಳವಣಿಗೆಗೆ ಸಹಕಾರಿ ಆಗಲಿದೆ.

ಈಸಿಸ್ಪಿಟ್ ಯಂತ್ರಗಳನ್ನು ಎಲ್ಲೆಲ್ಲಿ ಅಳವಡಿಸಲಾಗುವುದು?
ನಾಗ್ಪುರ್ ಮೂಲದ ಕಂಪೆನಿ ಈಸಿಸ್ಪಿಟ್ ಯಂತ್ರಗಳನ್ನು ಅಳವಡಿಸಲು ತೊಡಗಿದೆ. ಅವರು ನಾಗ್ಪುರ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಔರಂಗಬಾದ್ ಮುನಿಸಿಪಲ್ ಕಾರ್ಪೊರೇಷನ್ ಜೊತೆಗೆ ಸಹಭಾಗಿತ್ವ ಹೊಂದಿಕೊಂಡಿದ್ದಾರೆ. ನಾವು ಭಾರತೀಯ ರೈಲ್ವೇ ಇಲಾಖೆ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಅದರ ಪ್ರಕಾರ ಮೂರು ರೈಲ್ವೇ ಝೋನ್​ಗಳ 42 ರೈಲು ನಿಲ್ದಾಣಗಳಲ್ಲಿ ಈಸಿಸ್ಪಿಟ್ ಯಂತ್ರ ಅಳವಡಿಸಲಿದ್ದೇವೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ರೀತು ಮಲ್ಹೋತ್ರಾ ಹೇಳಿದ್ದಾರೆ.

ಇದನ್ನೂ ಓದಿ: Consumer Dispute: ರೈಲು ತಡವಾಗಿದ್ದರಿಂದ ರೂ. 30 ಸಾವಿರ ನಷ್ಟ ಪರಿಹಾರ ಕಟ್ಟಿಕೊಡುವಂತೆ ರೈಲ್ವೇಸ್​ಗೆ ಸುಪ್ರೀಂ ನಿರ್ದೇಶನ

ಇದನ್ನೂ ಓದಿ: Festival Special Trains: ದಸರಾ, ದೀಪಾವಳಿ ಪ್ರಯಾಣಕ್ಕೆ ವಿಶೇಷ ರೈಲು ಸೇವೆ; 18 ರೈಲುಗಳ ವೇಳಾಪಟ್ಟಿ ಬಿಡುಗಡೆ