ರೈಲಿನಲ್ಲಿ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗ್ ಕಳೆದುಕೊಂಡಿದ್ದ ಮಹಿಳೆ, 8 ವರ್ಷದ ಬಳಿಕ ರೈಲ್ವೆ ಇಲಾಖೆಯಿಂದ ಪರಿಹಾರ
ಬೆಲೆ ಬಾಳುವ ವಸ್ತುಗಳಿದ್ದ ಮಹಿಳೆಯ ಬ್ಯಾಗ್ ಅನ್ನು ರೈಲಿನಲ್ಲಿ ಯಾರೋ ಕದ್ದಿದ್ದರು. ಮಹಿಳೆ ದೂರನ್ನು ತೆಗೆದುಕೊಳ್ಳಲು ರೈಲ್ವೆ ಇಲಾಖೆ ಸಿದ್ಧವಿರಲಿಲ್ಲ, ಅಂತೂ 8 ವರ್ಷಗಳ ಬಳಿಕ ಮಹಿಳೆಗೆ ನ್ಯಾಯ ಸಿಕ್ಕಿದೆ. ರೈಲ್ವೆ ಇಲಾಖೆಯು 1 ಲಕ್ಷ ರೂ. ಪರಿಹಾರ ನೀಡಿದೆ.
ರೈಲಿನಲ್ಲಿ ತನ್ನ ಬ್ಯಾಗ್ಗಳನ್ನು ಕಳೆದುಕೊಂಡ ಮಹಿಳೆಗೆ ರೈಲ್ವೆ ಇಲಾಖೆ(Railway Department)ಯು 1 ಲಕ್ಷ ರೂ. ಪರಿಹಾರವನ್ನು ನೀಡಿದೆ. 2016ರಲ್ಲಿ ಮಹಿಳೆ ಝಾನ್ಸಿ ಮತ್ತು ಗ್ವಾಲಿಯರ್ ನಡುವೆ ಮಾಲ್ವಾ ಎಕ್ಸ್‌ಪ್ರೆಸ್ ರೈಲಿನ ಕಾಯ್ದಿರಿಸಿದ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಯಾರೋ 80 ಸಾವಿರ ರೂ. ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕದ್ದೊಯ್ದಿದ್ದರು. ಈ ಕುರಿತು ಮಹಿಳೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಜೊತೆಗೆ ಪ್ರಯಾಣಿಕರ ಸುರಕ್ಷತೆ ಕೂಡ ರೈಲ್ವೆಯ ಕರ್ತವ್ಯವಾಗಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು. ದೂರುದಾರರು ತಮ್ಮ ವಸ್ತುಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ರೈಲ್ವೆಯ ವಾದವನ್ನು ಆಯೋಗ ತಳ್ಳಿಹಾಕಿದೆ.
ಅವರಿಗೆ ಆದ ಅನನುಕೂಲತೆ ಮತ್ತು ಮಾನಸಿಕ ಸಂಕಟವನ್ನು ಅನುಭವಿಸಿದ್ದಕ್ಕಾಗಿ 20 ಸಾವಿರದಷ್ಟು ಪರಿಹಾರ ಸೇರಿಸಿ ಒಟ್ಟು 1 ಲಕ್ಷ ರೂ. ನೀಡುವಂತೆ ರೈಲ್ವೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ನವದೆಹಲಿಯ ನಿವಾಸಿ ಜಯ ಕುಮಾರಿ ಅವರು ಜನವರಿ 2016 ರಲ್ಲಿ ಕಾಯ್ದಿರಿಸಿದ ಕೋಚ್‌ನಲ್ಲಿ ನವದೆಹಲಿಯಿಂದ ಇಂದೋರ್‌ಗೆ ಮಾಲ್ವಾ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಲ್ಯಾಪ್‌ಟಾಪ್, ಕೈ ಗಡಿಯಾರ, ಆಭರಣಗಳು ಮತ್ತು ಶಾಲುಗಳನ್ನು ಒಳಗೊಂಡ ಬ್ಯಾಗ್ ಅನ್ನು ಯಾರೋ ಕಳ್ಳತನ ಮಾಡಿದ್ದರು. ಘಟನೆ ನಡೆದು 8 ವರ್ಷಗಳ ಬಳಿಕ ಇದೀಗ ನ್ಯಾಯ ಸಿಕ್ಕಿದೆ.
ಮತ್ತಷ್ಟು ಓದಿ: Video: ನಿದ್ದೆ ಮಾಡುತ್ತಿರುವಂತೆ ನಟಿಸಿ, ರೈಲ್ವೆ ನಿಲ್ದಾಣದಲ್ಲಿ ಮಧ್ಯರಾತ್ರಿ ಈತ ಮಾಡಿದ್ದೇನು ನೋಡಿ..
ಕಾಯ್ದಿರಿಸಿದ ಕೋಚ್‌ಗೆ ರಿಸರ್ವ್ ಮಾಡದೆ ಯಾರೋ ನುಗ್ಗಿ ತನ್ನ ಬ್ಯಾಗ್ ಕದ್ದಿದ್ದಾರೆ ಎಂದು ರೈಲ್ವೇ ಆಡಳಿತಕ್ಕೆ ದೂರು ನೀಡಿದ್ದರೂ ಅವರು ತಮ್ಮ ದೂರಿಗೆ ಕಿವಿಗೊಡಲು ಸಿದ್ಧರಿಲ್ಲ ಎನ್ನಲಾಗಿದೆ. ಕಳ್ಳತನದ ಪ್ರಕರಣಗಳು 2022 ರಲ್ಲಿ 2,831 ರಿಂದ ನವೆಂಬರ್ 30, 2023 ರವರೆಗೆ 3,909 ಕ್ಕೆ ಏರಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:46 am, Wed, 26 June 24