AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ಇಲಾಖೆಗೆ ಸೆಡ್ಡು ಹೊಡೆದು ತಡೆ ತೆರವುಗೊಳಿಸಿದ ಹಾಸನ ಜಿಲ್ಲಾಡಳಿತ; ವಾಹನ ಸಂಚಾರಕ್ಕೆ ಫ್ಲೈಓವರ್​ ಮುಕ್ತ

ಹಾಸನದ ಎನ್​ಆರ್ ವೃತ್ತದಿಂದ ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆಯ ಎರಡು ಪಥದ ರಸ್ತೆಯ ಸಂಪೂರ್ಣ ಕಾಮಗಾರಿ ಮುಗಿದಿದ್ದರೂ ಏಕಕಾಲದಲ್ಲಿ ಮೇಲ್ಸೇತುವೆ ಹಾಗೂ ಲೆವೆಲ್ ಕ್ರಾಸಿಂಗ್ ಚಾಲನೆಯಲ್ಲಿ ಇರಕೂಡದು ಎಂಬ ನಿಯಮ ಮುಂದಿಟ್ಟು ರೈಲ್ವೆ ಇಲಾಖೆ ಸಂಚಾರ ಸ್ಥಗಿತಗೊಳಿಸಿತ್ತು. ಇಲಾಖೆಗೆ ಸೆಡ್ಡು ಹೊಡೆದ ಜಿಲ್ಲಾಡಳಿತ, ರಾತ್ರೋರಾತ್ರಿ ತಡೆ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಿದೆ.

ರೈಲ್ವೆ ಇಲಾಖೆಗೆ ಸೆಡ್ಡು ಹೊಡೆದು ತಡೆ ತೆರವುಗೊಳಿಸಿದ ಹಾಸನ ಜಿಲ್ಲಾಡಳಿತ; ವಾಹನ ಸಂಚಾರಕ್ಕೆ ಫ್ಲೈಓವರ್​ ಮುಕ್ತ
ರೈಲ್ವೆ ಇಲಾಖೆಗೆ ಸೆಡ್ಡು ಹೊಡೆದ ಹಾಸನ ಜಿಲ್ಲಾಡಳಿತ; ಕೊನೆಗೂ ವಾಹನ ಸಂಚಾರಕ್ಕೆ ಪ್ಲೈಓವರ್​ ಮುಕ್ತ
ಮಂಜುನಾಥ ಕೆಬಿ
| Edited By: |

Updated on:Feb 05, 2024 | 10:03 PM

Share

ಹಾಸನ, ಫೆ.5: ರೈಲ್ವೆ ಮೇಲ್ಸೇತುವೆ ವಿಚಾರವಾಗಿ ಹಾಸನ (Hassan) ಜಿಲ್ಲಾಡಳಿತ ಮತ್ತು ರೈಲ್ವೆ ಇಲಾಖೆ ನಡುವಿನ ಜಟಾಪಟಿಗೆ ಕೊನೆಗೂ ತೆರೆಬಿದ್ದಿದೆ. ರೈಲ್ವೆ ಇಲಾಖೆಗೆ ಸೆಡ್ಡು ಹೊಡೆದ ಜಿಲ್ಲಾಡಳಿತ, ಮೇಲ್ಸೇತುವೆಗೆ ಹಾಕಿದ್ದ ತಡೆಯನ್ನು ರಾತ್ರೋರಾತ್ರಿ ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಮಾಡಿಕೊಟ್ಟಿದೆ.

ಹಾಸನದ ಎನ್ ಆರ್ ವೃತ್ತದಿಂದ ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆಯ ಎರಡು ಪಥದ ರಸ್ತೆಯ ಸಂಪೂರ್ಣ ಕಾಮಗಾರಿ ಪೂರ್ಣಗೊಂಡಿದೆ. ಆದರೂ ರೈಲ್ವೆ ಇಲಾಖೆ ಕುಂಟುನೆಪಹೇಳಿ ಸಂಚಾರ ಬಂದ್ ಮಾಡಿತ್ತು. ಏಕಕಾಲದಲ್ಲಿ ಮೇಲ್ಸೇತುವೆ ಹಾಗೂ ಲೆವೆಲ್ ಕ್ರಾಸಿಂಗ್ ಚಾಲನೆಯಲ್ಲಿ ಇರಬಾರದು ಎಂಬ ನಿಯಮ ಮುಂದಿಟ್ಟು ಸಂಚಾರ ಸ್ಥಗಿತಗೊಳಿಸಿತ್ತು.

ಇದನ್ನೂ ಓದಿ: ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡರ ವ್ಹೀಲಿಂಗ್, ವಾಹನ ಸವಾರರಿಗೆ ಫಜೀತಿ

ಸುಮಾರು 20 ದಿನಗಳ ಜಿಲ್ಲಾಡಳಿತ ಹಾಗೂ ರೈಲ್ವೆ ಇಲಾಖೆ ನಡುವಿನ ಮುಸುಕಿನ ಗುದ್ದಾಟಕ್ಕೆ ಇದೀಗ ತೆರೆಬಿದ್ದಿದೆ. ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಅವರು ತಮ್ಮ ಅಧಿಕಾರ ದಂಡ ಬಳಸಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ ಗೊಳಿಸಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಸಂಚಾರಕ್ಕೆ ಮುಕ್ತ ಗೊಳಿಸಿದ್ದ ರಸ್ತೆಯನ್ನ ಬಂದ್ ಮಾಡಿದ್ದ ಹಿನ್ನೆಲೆ ಜನರ ಆಕ್ರೋಶ ವ್ಯಕ್ತವಾಗಿತ್ತು. ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ ಎನ್ನೋ ಆದಾರದ ಮೇಲೆ‌ ರೈಲ್ವೆ ಇಲಾಖೆಗೆ ಸೆಡ್ಡು ಹೊಡೆದ ಜಿಲ್ಲಾಡಳಿತವು ರೈಲ್ವೆ ಮೇಲ್ಸೇತುವೆಯನ್ನು ಸಂಚಾರಕ್ಕೆ ಮುಕ್ತ ಮಾಡಿಕೊಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:02 pm, Mon, 5 February 24

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್