AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನದಲ್ಲಿ ತೀವ್ರ ಭೂಕಂಪದ ನಂತರ ಕಾಬೂಲ್​​​ಗೆ ಮಾನವೀಯ ನೆರವು ಕಳುಹಿಸಿದ ಭಾರತ

ತನ್ನ ತಾಂತ್ರಿಕ ತಂಡವನ್ನು ಕಾಬೂಲ್‌ಗೆ ವಾಪಸ್ ಕಳುಹಿಸುವ ಭಾರತದ ನಿರ್ಧಾರವನ್ನು ಅಫ್ಘಾನ್ ಸ್ವಾಗತಿಸಿದೆ.ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ (ಎಲ್‌ಇಎ) ಅಫ್ಘಾನಿಸ್ತಾನದ ಜನರೊಂದಿಗೆ ತಮ್ಮ ಸಂಬಂಧವನ್ನು...

ಅಫ್ಘಾನಿಸ್ತಾನದಲ್ಲಿ ತೀವ್ರ ಭೂಕಂಪದ ನಂತರ ಕಾಬೂಲ್​​​ಗೆ ಮಾನವೀಯ ನೆರವು ಕಳುಹಿಸಿದ ಭಾರತ
ಅಫ್ಘಾನಿಸ್ತಾನಕ್ಕೆ ಭಾರತ ನೆರವು
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jun 24, 2022 | 2:59 PM

Share

ಅಫ್ಘಾನಿಸ್ತಾನದಲ್ಲಿ (Afghanistan) ಭೀಕರ ಭೂಕಂಪದಿಂದಾಗಿ (Earthquake) 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಸಹಾಯ ಪ್ರಯತ್ನಗಳನ್ನು ಹೆಚ್ಚಿಸಿದೆ. “ಮಾನವೀಯ ನೆರವಿನ ವಿತರಣೆಗಾಗಿ ವಿವಿಧ ಮಧ್ಯಸ್ಥಗಾರರ ಪ್ರಯತ್ನಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು, ಸಂಘಟಿಸಲು ಮತ್ತು ಅಫ್ಘನ್ ಜನರಿಗೆ ಸಹಾಯ ಮಾಡಲು ಭಾರತೀಯ ತಾಂತ್ರಿಕ ತಂಡವು ಇಂದು ಕಾಬೂಲ್ (Kabul) ತಲುಪಿದೆ. ಈ ತಂಡವನ್ನು ನಮ್ಮ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾಗಿದೆ ಎಂದು ಗುರುವಾರ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ. ಭಾರತ ನಿಜವಾದ ಮೊದಲ ಪ್ರತಿಸ್ಪಂದಕ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಭಾರತವು ಅಫ್ಘನ್ ಜನರೊಂದಿಗೆ ಐತಿಹಾಸಿಕ ಮತ್ತು ನಾಗರಿಕ ಸಂಬಂಧವನ್ನು ಹೊಂದಿದೆ. ನಮ್ಮ ಮಾನವೀಯ ನೆರವಿನ ವಿತರಣಾ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ಇತ್ತೀಚೆಗೆ ಭಾರತದ ಇನ್ನೊಂದು ತಂಡವು ಕಾಬೂಲ್ ಗೆ ತಲುಪಿದ್ದು ತಾಲಿಬಾನ್‌ನ ಹಿರಿಯ ಸದಸ್ಯರನ್ನು ಭೇಟಿಯಾದರು. ಭೇಟಿಯ ಸಮಯದಲ್ಲಿ ಭದ್ರತಾ ಪರಿಸ್ಥಿತಿಯ ಮೌಲ್ಯಮಾಪನವನ್ನು ಸಹ ನಡೆಸಲಾಯಿತು. ಅಫ್ಘಾನಿಸ್ತಾನದ ಸಮಾಜದೊಂದಿಗೆ ನಮ್ಮ ದೀರ್ಘಕಾಲದ ಸಂಪರ್ಕಗಳು ಮತ್ತು ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು ಸೇರಿದಂತೆ ನಮ್ಮ ಅಭಿವೃದ್ಧಿ ಸಹಭಾಗಿತ್ವವು ನಮ್ಮ ಮಾರ್ಗವನ್ನು ಮುನ್ನಡೆಸುವುದನ್ನು ಮುಂದುವರಿಸುತ್ತದೆ ಎಂದು ಸಚಿವಾಲಯ ಹೇಳಿದೆ. ಈ ವಾರದ ಆರಂಭದಲ್ಲಿ ಪೂರ್ವ ಪಕ್ಟಿಕಾ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ ನೂರಾರು ಮನೆಗಳು ನಾಶವಾಗಿವೆ.ಸುಮಾರು 10 ತಿಂಗಳ ಹಿಂದೆ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಾಗ ಅನೇಕ ಅಂತರರಾಷ್ಟ್ರೀಯ ನೆರವು ಸಂಸ್ಥೆಗಳು ಅಫ್ಘಾನಿಸ್ತಾನದಿಂದ ಹೊರಹೋಗಿದ್ದವು.

ತನ್ನ ತಾಂತ್ರಿಕ ತಂಡವನ್ನು ಕಾಬೂಲ್‌ಗೆ ವಾಪಸ್ ಕಳುಹಿಸುವ ಭಾರತದ ನಿರ್ಧಾರವನ್ನು ಅಫ್ಘಾನ್ ಸ್ವಾಗತಿಸಿದೆ.ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ (ಎಲ್‌ಇಎ) ಅಫ್ಘಾನಿಸ್ತಾನದ ಜನರೊಂದಿಗೆ ತಮ್ಮ ಸಂಬಂಧವನ್ನು ಮತ್ತು ಅವರ ಮಾನವೀಯ ನೆರವು ಮುಂದುವರಿಸಲು ರಾಜತಾಂತ್ರಿಕರು ಮತ್ತು ತಾಂತ್ರಿಕ ತಂಡವನ್ನು ಕಾಬೂಲ್‌ನಲ್ಲಿರುವ ತಮ್ಮ ರಾಯಭಾರ ಕಚೇರಿಗೆ ಕಳಿಸಿರುವ ಭಾರತದ ನಿರ್ಧಾರವನ್ನು ಸ್ವಾಗತಿಸುತ್ತದೆ ಎಂದು ತಾಲಿಬಾನ್ ವಕ್ತಾರ ಅಬ್ದುಲ್ ಕಹರ್ ಬಾಲ್ಖಿ ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ
Image
Earthquake: ನೇಪಾಳದ ಕಠ್ಮಂಡುವಿನಲ್ಲಿ ಇಂದು ಮುಂಜಾನೆ 4.3 ತೀವ್ರತೆಯ ಲಘು ಭೂಕಂಪ
Image
Karnataka Earthquake: ಹಾಸನ, ಕೊಡಗಿನ ವಿವಿಧೆಡೆ ಭೂಕಂಪ: ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 3.4 ದಾಖಲು
Image
ಪೂರ್ವ ಅಫ್ಘಾನಿಸ್ತಾನದಲ್ಲಿ ತೀವ್ರ ಭೂಕಂಪ: 1,000 ಜನರು ಸಾವು, 1,500 ಕ್ಕೂ ಹೆಚ್ಚು ಜನರಿಗೆ ಗಾಯ

ಅಫ್ಘಾನಿಸ್ತಾನದ ಜನರಿಗೆ ಭಾರತದ ಭೂಕಂಪ ಪರಿಹಾರ ಸಹಾಯದ ಮೊದಲ ರವಾನೆ ಕಾಬೂಲ್ ತಲುಪಿದೆ. ಅಲ್ಲಿ ಭಾರತ ತಂಡದಿಂದ ಹಸ್ತಾಂತರಿಸಲಾಗುತ್ತಿದೆ. ಮತ್ತಷ್ಟು ವಸ್ತುಗಳನ್ನು ಸಾಗಿಸಲಾಗುವುದು ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

Published On - 2:40 pm, Fri, 24 June 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ