Go First: ಭಾರತದ ಗೋ ಫಸ್ಟ್ ಏರ್‌ಲೈನ್​​ಗೆ ದಿವಾಳಿಯಿಂದ ರಕ್ಷಣೆ

|

Updated on: May 10, 2023 | 12:59 PM

ಆದೇಶವನ್ನು ಓದುತ್ತಿದ್ದಂತೆ ಹಾಜರಿದ್ದ ಗೋ ಫಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೌಶಿಕ್ ಖೋನಾ ಅವರು ಸುದ್ದಿಗಾರರಿಗೆ ಈ ನಿರ್ಧಾರ ಐತಿಹಾಸಿಕ ಎಂದು ಹೇಳಿದರು

Go First: ಭಾರತದ ಗೋ ಫಸ್ಟ್ ಏರ್‌ಲೈನ್​​ಗೆ ದಿವಾಳಿಯಿಂದ ರಕ್ಷಣೆ
ಗೋ ಫಸ್ಟ್
Follow us on

ಗೋ ಏರ್‌ಲೈನ್ಸ್ (ಇಂಡಿಯಾ) ಲಿಮಿಟೆಡ್‌ಗೆ (Go Airlines (India) Ltd) ಭಾರತೀಯ ಕಂಪನಿ ಕಾನೂನು ಮಂಡಳಿ ಬುಧವಾರ ದಿವಾಳಿಯಿಂದ(bankruptcy) ರಕ್ಷಣೆಯನ್ನು ನೀಡಿತು. ದೇಶದ ನಾಲ್ಕನೇ ಅತಿದೊಡ್ಡ ವಿಮಾನ ಸಂಸ್ಥೆಗೆ ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ಆದರೆ ವಿದೇಶಿ ಗುತ್ತಿಗೆದಾರರು ವಿಮಾನಗಳನ್ನು ಮರು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನಗಳನ್ನು ಸಂಕೀರ್ಣಗೊಳಿಸುತ್ತದೆ. ಇತ್ತೀಚಿಗೆ Go First ಎಂದು ಮರುನಾಮಕರಣ ಮಾಡಲಾದ ಕಡಿಮೆ-ವೆಚ್ಚದ ವಾಹಕವು ದೋಷಯುಕ್ತ ಪ್ರಾಟ್ ಮತ್ತು ವಿಟ್ನಿ ಎಂಜಿನ್‌ಗಳಿಂದಾಗಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಎಂದು ಹೇಳಿದೆ.ಅದು ಅದರ ಅರ್ಧದಷ್ಟು  ವಿಮಾನಗಳನ್ನು ರದ್ದು ಮಾಡಲು ಕಾರಣವಾಯಿತು. ರೇಥಿಯಾನ್ ಟೆಕ್ನಾಲಜೀಸ್ (RTX.N) ನ ಭಾಗವಾಗಿರುವ ಅಮೆರಿಕದ ಎಂಜಿನ್ ತಯಾರಕ ಈ ಆರೋಪಗಳಿಗೆ ಪುರಾವೆಗಳಿಲ್ಲ ಎಂದು ಹೇಳಿದೆ.

ಮಧ್ಯಂತರ ರೆಸಲ್ಯೂಶನ್ ವೃತ್ತಿಪರರು ತಕ್ಷಣವೇ ಜಾರಿಗೆ ಬರುವಂತೆ ಏರ್‌ಲೈನ್‌ನ ನಿರ್ವಹಣೆಯನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ ಎಂದು ಹೇಳಿದ ಭಾರತದ ಕಂಪನಿ ಕಾನೂನು ಮಂಡಳಿ, ಗೋ ಫಸ್ಟ್‌ನ ಆಸ್ತಿಗಳು ಮತ್ತು ಗುತ್ತಿಗೆಗಳ ಮೇಲೆ ನಿಷೇಧವನ್ನು ಆದೇಶಿಸಿದ್ದಾರೆ.

ಆದೇಶವನ್ನು ಓದುತ್ತಿದ್ದಂತೆ ಹಾಜರಿದ್ದ ಗೋ ಫಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೌಶಿಕ್ ಖೋನಾ ಅವರು ಸುದ್ದಿಗಾರರಿಗೆ ಈ ನಿರ್ಧಾರ ಐತಿಹಾಸಿಕ ಎಂದು ಹೇಳಿದರು. ಭಾರತೀಯ ವಿಮಾನಯಾನ ಸಂಸ್ಥೆಯು ಸ್ವಯಂಪ್ರೇರಣೆಯಿಂದ ಒಪ್ಪಂದಗಳು ಮತ್ತು ಸಾಲವನ್ನು ಮರು ಮಾತುಕತೆ ನಡೆಸಲು ದಿವಾಳಿತನದ ರಕ್ಷಣೆಯನ್ನು ಕೋರಿರುವುದು ಇದೇ ಮೊದಲು.

ದಿವಾಳಿಯಿಂದ ರಕ್ಷಣೆ ಏನಿದರ ಅರ್ಥ?

ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (NCLT) ತನ್ನ ಆದೇಶದಲ್ಲಿ ಮಧ್ಯಂತರ ರೆಸಲ್ಯೂಶನ್ ವೃತ್ತಿಪರರು ತಕ್ಷಣದಿಂದಲೇ ಜಾರಿಗೆ ಬರುವಂತೆ ಏರ್‌ಲೈನ್ ನಿರ್ವಹಣೆಯನ್ನು ವಹಿಸಿಕೊಳ್ಳುತ್ತಾರೆ ಎಂದು ಹೇಳಿದೆ. ಆದೇಶವು ಗೋ ಫಸ್ಟ್‌ನ ಆಸ್ತಿ ಮತ್ತು ಗುತ್ತಿಗೆಗಳ ಮೇಲೆ ನಿಷೇಧವನ್ನು ಘೋಷಿಸಿತು. NCLT ಯ ನಿಷೇಧದ ಆದೇಶವು ಬಾಡಿಗೆದಾರರು ವಿಮಾನವನ್ನು ಹಿಂದಕ್ಕೆ ತೆಗೆದುಕೊಳ್ಳುವುದನ್ನು ತಡೆಯುತ್ತದೆ.
ಜಾಕ್ಸನ್ ಸ್ಕ್ವೇರ್ ಏವಿಯೇಷನ್, SMBC ಏವಿಯೇಷನ್ ಕ್ಯಾಪಿಟಲ್ ಮತ್ತು CDB ಏವಿಯೇಷನ್‌ನ GY ಏವಿಯೇಷನ್ ಲೀಸಿಂಗ್‌ನಂತಹ ಹೆಸರುಗಳು Go First ಬಾಡಿಗೆದಾರರ ಪಟ್ಟಿಯಲ್ಲಿವೆ.

ಗೋ ಫಸ್ಟ್‌ನ ವಿದೇಶಿ ಬಾಡಿಗೆದಾರರಿಗೆ ತಮ್ಮ ವಿಮಾನವನ್ನು ಹಿಂದಕ್ಕೆ ತೆಗೆದುಕೊಳ್ಳಲು ಅನುಮತಿಸುವುದಿಲ್ಲವಾದ್ದರಿಂದ, ಅವರು ತಮ್ಮ ಬಾಡಿಗೆ ಪಾವತಿಗಳನ್ನು ಕಳೆದುಕೊಳ್ಳುತ್ತಾರೆ.

ಇದನ್ನೂ ಓದಿ: Go First: ತತ್​ಕ್ಷಣದಿಂದಲೇ ಎಲ್ಲಾ ಟಿಕೆಟ್ ಬುಕಿಂಗ್ ನಿಲ್ಲಿಸಿ: ಗೋ ಫಸ್ಟ್ ಏರ್​ಲೈನ್ಸ್​ಗೆ ಡಿಜಿಸಿಎ ಆದೇಶ

NCLT ಕಾರ್ಪೊರೇಟ್ ಇನ್ಸಾಲ್ವೆನ್ಸಿ ರೆಸಲ್ಯೂಷನ್ ಪ್ರಕ್ರಿಯೆ (CIRP) ಮತ್ತು ದಿವಾಳಿತನ ನಿರ್ಣಯ ಪ್ರಕ್ರಿಯೆಯ (IRP) ಪ್ರಾರಂಭಿಸಲು ನಿರ್ದೇಶಿಸಿದೆ. ಇದರ ಜೊತೆಗೆ ಗೋ ಫರ್ಸ್ಟ್ ತನ್ನ ವೆಚ್ಚವನ್ನು ಪೂರೈಸಲು ₹5 ಕೋಟಿಯನ್ನು IRP ಯಲ್ಲಿ ಠೇವಣಿ ಮಾಡಲು ಕೇಳಿಕೊಂಡಿದೆ ಎಂದು CNBC ವರದಿ ಮಾಡಿದೆ.

ಗೋ ಫಸ್ಟ್ ವಿಮಾನ ಮೇ 19 ರವರೆಗೆ ರದ್ದು

2023 ಮೇ19ರವರೆಗೆ ನಿಗದಿಯಾಗಿದ್ದ ಗೋ ಫಸ್ಟ್ ಫ್ಲೈಟ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ. ವಿಮಾನ ರದ್ದತಿಯಿಂದ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆಎಂದು ಗೋ ಫಸ್ಟ್ ಹೇಳಿಕೆಯಲ್ಲಿ ತಿಳಿಸಿದೆ.
ಏರ್‌ಲೈನ್‌ನ ಪ್ರಕಾರ, ಶೀಘ್ರದಲ್ಲೇ ಪೂರ್ಣ ಮರುಪಾವತಿಯನ್ನು ನೀಡಲಾಗುತ್ತದೆ.


ವಿಮಾನ ರದ್ದತಿಯು ತನ್ನ ಪ್ರಯಾಣಿಕರ ಪ್ರಯಾಣದ ಯೋಜನೆಗಳನ್ನು ಅಡ್ಡಿಪಡಿಸಿರಬಹುದು.ವಿಮಾನಯಾನ ಸಂಸ್ಥೆಯು ತನ್ನಿಂದಾಗುವ ಎಲ್ಲಾ ಸಹಾಯವನ್ನು ಒದಗಿಸಲು ಬದ್ಧವಾಗಿದೆ. ಕಂಪನಿಯು ತನ್ನ ಪ್ರಯಾಣಿಕರಿಗೆ ತಿಳಿದಿರುವಂತೆ, ತಕ್ಷಣದ ಪರಿಹಾರ ಮತ್ತು ಕಾರ್ಯಾಚರಣೆಗಳ ಪುನರುಜ್ಜೀವನಕ್ಕಾಗಿ ಅರ್ಜಿಯನ್ನು ಸಲ್ಲಿಸಿದೆ. ವಿಮಾನಯಾನ ಸಂಸ್ಥೆಯು ಶೀಘ್ರದಲ್ಲೇ ಬುಕಿಂಗ್ ಅನ್ನು ಪುನರಾರಂಭಿಸಲು ಸಾಧ್ಯವಾಗುತ್ತದೆ. ನಿಮ್ಮ ತಾಳ್ಮೆಗಾಗಿ ಧನ್ಯವಾದಗಳು. ದಯವಿಟ್ಟು 1800 2100 999 ನಲ್ಲಿ ನಮ್ಮ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ ಅಥವಾ ನಾವು ನಿಮಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ನಮಗೆ ತಿಳಿಸಲು feedback@flygofirst.com ಗೆ ಬರೆಯಿರಿ ಎಂದು ಗೋ ಫಸ್ಟ್ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:31 pm, Wed, 10 May 23