Go First: ತತ್​ಕ್ಷಣದಿಂದಲೇ ಎಲ್ಲಾ ಟಿಕೆಟ್ ಬುಕಿಂಗ್ ನಿಲ್ಲಿಸಿ: ಗೋ ಫಸ್ಟ್ ಏರ್​ಲೈನ್ಸ್​ಗೆ ಡಿಜಿಸಿಎ ಆದೇಶ

DGCA Order To Go First Airlines: ಇನ್ಸಾಲ್ವೆನ್ಸಿ ಅರ್ಜಿ ಸಲ್ಲಿಸಿರುವ ಗೋ ಫಸ್ಟ್ ಏರ್​ಲೈನ್ಸ್ ಕೂಡಲೇ ಟಿಕೆಟ್ ಬುಕಿಂಗ್ ನಿಲ್ಲಿಸಬೇಕೆಂದು ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಅದೇಶ ಹೊರಡಿಸಿದೆ. ಹಾಗೆಯೇ, ವಿಮಾನ ಹಾರಾಟ ನಿಲ್ಲಿಸಿದ್ದಕ್ಕೆ ಕಾರಣ ಕೇಳಿ ಶೋಕಾಸ್ ನೋಟೀಸ್ ಕೂಡ ಈ ಮೊದಲು ನೀಡಲಾಗಿದೆ.

Go First: ತತ್​ಕ್ಷಣದಿಂದಲೇ ಎಲ್ಲಾ ಟಿಕೆಟ್ ಬುಕಿಂಗ್ ನಿಲ್ಲಿಸಿ: ಗೋ ಫಸ್ಟ್ ಏರ್​ಲೈನ್ಸ್​ಗೆ ಡಿಜಿಸಿಎ ಆದೇಶ
ಗೋ ಫಸ್ಟ್ ಏರ್​ಲೈನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 08, 2023 | 4:08 PM

ನವದೆಹಲಿ: ಹಣಕಾಸು ಬಿಕ್ಕಟ್ಟಿಗೆ ಸಿಲುಕಿ ದಿವಾಳಿ ತಡೆಗೆ ಮನವಿ ಅರ್ಜಿ ಸಲ್ಲಿಸಿರುವ ಗೋ ಫಸ್ಟ್ ಏರ್​ಲೈನ್ಸ್​ಗೆ (Go First Airlines) ಡಿಜಿಸಿಎ ಶೋಕಾಸ್ ನೀಡಿದೆ. ವಿಮಾನ ಸೇವೆಯನ್ನು ಸುರಕ್ಷಿತವಾಗಿ ಕೈಗೊಳ್ಳಲು ವಿಫಲರಾಗಿದ್ದಕ್ಕೆ ಕಾರಣ ಕೇಳಿ ಡಿಜಿಸಿಎ ನೋಟೀಸ್ ಜಾರಿ ಮಾಡಿದೆ. ಹಾಗೆಯೇ, ತತ್​ಕ್ಷಣದಿಂದಲೇ ನೇರವಾಗಿ ಅಥವಾ ಪರೋಕ್ಷವಾಗಿ ಆಗಲೀ ಟಿಕೆಟ್ ಬುಕಿಂಗ್ ಮತ್ತು ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದೂ ನಾಗರಿಕ ವಿಮಾನಯಾನ ಮಹಾ ನಿರ್ದೇನಾಲಯ (DGCA- Directorate General of Civil Aviation) ಸೋಮವಾರ ಆದೇಶ ಹೊರಡಿಸಿದೆ. ಅನಿರ್ದಿಷ್ಟಾವಧಿಯವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ. ವಿಮಾನ ಹಾರಾಟ ನಿಲ್ಲಿಸಲು ಕಾರಣ ಕೇಳಿ ನೀಡಲಾದ ಶೋಕಾಸ್ ನೋಟೀಸ್​ಗೆ ಗೋ ಫಸ್ಟ್ ಏರ್​ಲೈನ್ಸ್ ಉತ್ತರ ನೀಡಬೇಕಿದೆ. ಈ ಉತ್ತರ ಬಂದ ಬಳಿಕ ವಿಮಾನ ಸಂಸ್ಥೆಯ ಪರವಾನಿಗೆಯನ್ನು ಮುಂದುವರಿಸುವುದೋ ಅಥವಾ ಹಿಂಪಡೆಯುವುದೋ ಎಂಬುದನ್ನು ನಿರ್ಧರಿಸಲಾಗುತ್ತದೆ.

ಒಂದು ಕಾಲದಲ್ಲಿ ಭಾರತದ ಪ್ರಮುಖ ವೈಮಾನಿಕ ಸಂಸ್ಥೆಗಳಲ್ಲಿ ಒಂದಾಗಿದ್ದ ಗೋ ಫಸ್ಟ್ ಏರ್​ಲೈನ್ಸ್ ಮೇ 3ರಂದು ತಾತ್ಕಾಲಿಕವಾಗಿ ಸೇವೆ ನಿಲ್ಲಿಸಿತು. ಇನ್ಸಾಲ್ವೆನ್ಸಿ ಮತ್ತು ಬ್ಯಾಂಕ್ರಪ್ಟ್ಸಿ ಕಾಯ್ದೆ ಅಡಿ ಕಾರ್ಪೊರೆಟ್ ಇನ್ಸಾಲ್ವೆನ್ಸಿಗೆ ಅರ್ಜಿ ಹಾಕಿತು. ಮೇ 4ಮತ್ತು 5ರ ಎಲ್ಲಾ ವಿಮಾನ ಹಾರಾಟ ರದ್ದು ಮಾಡಿತು. ಟಿಕೆಟ್ ಬುಕಿಂಗ್ ಕೂಡ ನಿಲ್ಲಿಸಿತು. ಬಳಿಕ ಮೇ 15ರವರೆಗೂ ವಿಮಾನ ಹಾರಾಟದ ಸ್ಥಗಿತ ಮುಂದುವರಿಸಿದೆ.

ಇದನ್ನೂ ಓದಿ: ONDC: ಕಡಿಮೆ ಬೆಲೆಗೆ ಊಟ ಸಿಗುತ್ತೆ; ಆದ್ರೆ ಟೈಮಿಗೆ ಸರಿಯಾಗಿ ಬರುತ್ತಾ? ಸ್ವಿಗ್ಗಿ, ಜೊಮಾಟೋಗಳ ಅಖಾಡಕ್ಕೆ ಒಎನ್​ಡಿಸಿ

ಏನಿದು ಇನ್ಸಾಲ್ವೆನ್ಸಿ ಮತ್ತು ಬ್ಯಾಂಕ್ರಪ್ಟ್ಸಿ?

ಬ್ಯಾಂಕ್ರಪ್ಟ್ಸಿ ಎಂದರೆ ದಿವಾಳಿಯಾಗುವುದು. ಸಾಲಗಾರರಿಂದ ಪಡೆದ ಸಾಲವನ್ನು ಮರಳಿಸಲು ಸಾಧ್ಯವಿಲ್ಲ ಎಂದು ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಘೋಷಿಸಿಕೊಂಡರೆ ಅದು ದಿವಾಳಿತನದ ಪ್ರಕಟವಾಗುತ್ತದೆ. ಇನ್ನು, ಇನ್ಸಾಲ್ವೆನ್ಸಿ ಎಂದರೆ ಸಾಲವನ್ನು ಸರಿಯಾದ ಸಮಯಕ್ಕೆ ಕಟ್ಟಲು ಆಗುವುದಿಲ್ಲ ಎಂದು ಘೋಷಿಸಿಕೊಳ್ಳುವುದು.

ಇಲ್ಲಿ ಗೋ ಫಸ್ಟ್ ಏರ್​ಲೈನ್ಸ್ ತಾನು ದಿವಾಳಿ ಎಂದು ಘೋಷಿಸಿಕೊಂಡಿಲ್ಲ, ಬದಲಾಗಿ ಇನ್ಸಾಲ್ವೆನ್ಸಿ ಅರ್ಜಿ ಹಾಕಿರುವುದಾಗಿ ಹೇಳಿದೆ. ಸಾಲದ ಮರುಪಾವತಿಯ ನಿಯಮದಲ್ಲಿ ತುಸು ಸಡಿಲತೆಗೆ ಗೋ ಫಸ್ಟ್ ಪ್ರಯತ್ನಿಸುತ್ತಿದೆ.

ಗೋ ಫಸ್ಟ್ ಏರ್​ಲೈನ್ಸ್​ಗೆ 15 ದಿನ ಕಾಲಾವಕಾಶ

ದಿಢೀರನೇ ವಿಮಾನ ಹಾರಾಟ ನಿಲ್ಲಿಸಲು ಸಕಾರಣ ಏನು ಎಂದು ಕೇಳಿ ಗೋ ಫಸ್ಟ್ ಏರ್​ಲೈನ್ಸ್​ಗೆ ಡಿಜಿಸಿಎ ಶೋಕಾಸ್ ನೋಟೀಸ್ ನೀಡಿದೆ. ಇದಕ್ಕೆ ಉತ್ತರ ಕೊಡಲು 15 ದಿನಗಳ ಕಾಲಾವಕಾಶವನ್ನೂ ನೀಡಿದೆ. ಆ ಗಡುವಿನಲ್ಲಿ ಉತ್ತರ ಕೊಡಲು ವಿಫಲವಾದರೆ ಗೋ ಫಸ್ಟ್ ಏರ್​ಲೈನ್ಸ್​ನ ಭವಿಷ್ಯವನ್ನು ಡಿಜಿಸಿಎ ನಿರ್ಧರಿಸಲಿದೆ. ವಿಮಾನ ಸೇವೆ ಸ್ಥಗಿತಗೊಳಿಸಲು ನೀಡಲಾಗುವ ಕಾರಣ ಸಮರ್ಪಕ ಎನಿಸದಿದ್ದರೆ ಗೋ ಫಸ್ಟ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ: Tenant Rights: ಮನೆ ಓನರ್ ಕಿರಿಕ್ ಮಾಡುತ್ತಾರಾ? ಬಾಡಿಗೆದಾರರಿಗಿರುವ 10 ಹಕ್ಕುಗಳ ಬಗ್ಗೆ ತಿಳಿದಿರಿ

ವಿಮಾನ ಮಾಲೀಕರ ವರ್ತನೆಗೆ ಗೋ ಫಸ್ಟ್ ಬೇಸರ; ಬೇರೆ ಕಡೆ ಕೆಲಸ ನೋಡುತ್ತಿರುವ ಉದ್ಯೋಗಿಗಳು

ಗೋ ಫಸ್ಟ್ ಏರ್​ಲೈನ್ಸ್​ನ 28 ವಿಮಾನಗಳು ಎಂಜಿನ್ ವೈಫಲ್ಯದ ಕಾರಣಕ್ಕೆ ಸ್ಥಗಿತಗೊಂಡಿದ್ದು ಸಂಸ್ಥೆಯ ನಷ್ಟಕ್ಕೆ ಕಾರಣವಾಗಿದೆ. ಅದೇ ಕಾರಣಕ್ಕೆ ಎಲ್ಲಾ ವಿಮಾನ ಹಾರಾಟ ನಿಲ್ಲಿಸಿ ಹಣಕಾಸು ಅಸಹಾಯಕತೆ ಸ್ಥಿತಿ ಘೋಷಿಸಿಕೊಳ್ಳುವಂತಾಗಿದೆ. ಈ ಎಲ್ಲಾ ವಿಮಾನಗಳನ್ನು ಗೋ ಫಸ್ಟ್ ಬಾಡಿಗೆಗೆ ಪಡೆದು ಓಡಿಸುತ್ತಿದ್ದಂತಹವು. ಇದೀಗ ನಿಲ್ಲಿಸಲಾಗಿರುವ ವಿಮಾನಗಳನ್ನು ಅದರ ಮಾಲೀಕರು ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದಾರೆ. ಹಾಗಂತ ಗೋ ಫಸ್ಟ್ ಏರ್​ಲೈನ್ಸ್ ಅಲವತ್ತುಕೊಂಡಿದೆ.

ಇನ್ನು, ಗೋ ಫಸ್ಟ್ ಏರ್​ಲೈನ್ಸ್​ನ ಭವಿಷ್ಯ ಮಸುಕಾಗಿರುವ ಹಿನ್ನೆಲೆಯಲ್ಲಿ ಅದರ ಪೈಲಟ್ ಮತ್ತಿತರ ಸಿಬ್ಬಂದಿ ಈಗ ಬೇರೆ ಕೆಲಸ ನೋಡಿಕೊಳ್ಳುತ್ತಿದ್ದಾರೆನ್ನುವ ವರದಿಗಳು ಬಂದಿವೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:43 pm, Mon, 8 May 23

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?