ಕ್ಷಿಪಣಿ ದಾಳಿಗೂ ಮುನ್ನ ಇರಾನ್ ವಾಯು ಪ್ರದೇಶದಲ್ಲಿ ಹಾರಾಟ ನಡೆಸಿದ್ದ ಏರ್​ ಇಂಡಿಯಾ ವಿಮಾನಗಳು

ಇಸ್ರೇಲ್​ ಮೇಲೆ ಇರಾನ್ ಪ್ರತೀಕಾರದ ದಾಳಿಯನ್ನು ನಡೆಸುವುದಕ್ಕೂ ಮುನ್ನ ಎರಡು ಏರ್​ ಇಂಡಿಯಾ ವಿಮಾನಗಳು ಇರಾನ್ ವಾಯುನೆಲೆಯಲ್ಲಿ ಹಾರಾಟ ನಡೆಸಿದ್ದರು, ಒಂದೊಮ್ಮೆ ಆ ಸಮಯದಲ್ಲಿ ವಿಮಾನಗಳು ಅಲ್ಲಿಗೆ ಹೋಗಿದ್ದರೆ ಪ್ರಯಾಣಿಕರ ಗತಿ ಏನಾಗುತ್ತಿತ್ತು ಎನ್ನುವ ಕಳವಳ ವ್ಯಕ್ತವಾಗಿದೆ. ಇರಾನ್ ಇಸ್ರೇಲ್ ಮೇಲೆ 300ಕ್ಕೂ ಅಧಿಕ ಕ್ಷಿಪಣಿಗಳಿಂದ ದಾಳಿ ನಡೆಸಿತ್ತು.

ಕ್ಷಿಪಣಿ ದಾಳಿಗೂ ಮುನ್ನ ಇರಾನ್ ವಾಯು ಪ್ರದೇಶದಲ್ಲಿ ಹಾರಾಟ ನಡೆಸಿದ್ದ ಏರ್​ ಇಂಡಿಯಾ ವಿಮಾನಗಳು
ಏರ್ ಇಂಡಿಯಾ

Updated on: Apr 16, 2024 | 2:05 PM

ಇಸ್ರೇಲ್(Israel)​ ಮೇಲೆ ಇರಾನ್​ ಕ್ಷಿಪಣಿ ದಾಳಿ ನಡೆಸುವುದಕ್ಕೂ ಕೆಲವು ಗಂಟೆಗಳ ಮುನ್ನ ಎರಡು ಏರ್​ ಇಂಡಿಯಾ(Air India) ವಿಮಾನಗಳು ಇರಾನ್​ ವಾಯುನೆಲೆಯಲ್ಲಿ ಹಾರಾಟ ನಡೆಸಿದ್ದವು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಎರಡು ವಿಮಾನಗಳು 116 ಹಾಗೂ 131 ಮಂದಿಯನ್ನು ಹೊತ್ತು ಪ್ರಯಾಣ ಬೆಳೆಸಿತ್ತು. ಒಂದು ವಿಮಾನವು ನ್ಯೂಯಾರ್ಕ್​ನಿಂದ ಮುಂಬೈಗೆ ಮತ್ತೊಂದು ಮುಂಬೈನಿಂದ ಲಂಡನ್​ಗೆ ಪ್ರಯಾಣ ಬೆಳಸಿದ್ದವು. ಒಂದೊಮ್ಮೆ ಆ ಸಮಯದಲ್ಲಿ ವಿಮಾನಗಳು ಅಲ್ಲಿದ್ದರೆ ಅಷ್ಟೊಂದು ಪ್ರಯಾಣಿಕರ ಗತಿ ಏನಾಗುತ್ತಿತ್ತು.

ಇರಾನ್ ಏಪ್ರಿಲ್​ 13ರಂದು ಕನಿಷ್ಠ 300 ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಹಾರಿಸಿತ್ತು. ಏಪ್ರಿಲ್ 1 ರಂದು ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಭಾಗವಾಗಿರುವ ಕಟ್ಟಡಕ್ಕೆ ಫೈಟರ್ ಜೆಟ್‌ಗಳು ಹೊಡೆದಾಗ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಉಂಟಾಗಿತ್ತು.

ಏರ್ ಇಂಡಿಯಾ ವಿಮಾನಗಳು, ಬೋಯಿಂಗ್ 777-232 ಮತ್ತು ಬೋಯಿಂಗ್ 777ER, ಸರಿಸುಮಾರು 280 ಮತ್ತು 330 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ. ಇರಾನ್ ಇಸ್ರೇಲ್ ಮೇಲೆ 100ಕ್ಕೂಹೆಚ್ಚು ಡ್ರೋನ್​ಗಳನ್ನು ಹಾರಿಸಿದೆ. ಇರಾನ್ ದಾಳಿಯ ನಂತರ ಇಸ್ರೇಲ್ ರಕ್ಷಣಾ ಪಡೆ ತೀವ್ರ ಕಟ್ಟೆಚ್ಚರವಹಿಸಿದೆ. ಇಸ್ರೇಲಿ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲೇ ಡ್ರೋನ್ ಮತ್ತು ಕ್ಷಿಪಣಿದಾಳಿಗಳನ್ನು ತಡೆಹಿಡಿಯಲಾಗಿದೆ ಎಂದು ಹೇಳಿದ್ದರು.

ಮತ್ತಷ್ಟು ಓದಿ: Israel Iran War: ಇಸ್ರೇಲ್​ ಮೇಲೆ ಇರಾನ್​ನಿಂದ ಕ್ಷಿಪಣಿ ದಾಳಿ

ಡ್ರೋನ್​ಗಳು ಹಾಗೂ ಕ್ಷಿಪಣಿಗಳನ್ನು ಗಾಳಿಯಲ್ಲಿ ಹೊಡೆದುರುಳಿಸುವಲ್ಲಿ ಅಮೆರಿಕ ಹಾಗೂ ಬ್ರಿಟಿಷ್ ವಾಯುಪಡೆಗಳು ಇಸ್ರೇಲ್​ಗೆ ಸಹಾಯ ಮಾಡಿವೆ. ಇಸ್ರೇಲ್ ದಕ್ಷಿಣ ಭಾಗದಲ್ಲಿರುವ ಸೇನಾ ನೆಲೆಯಲ್ಲಿ ಸಣ್ಣಪುಟ್ಟ ಹಾನಿಗಳಾಗಿವೆ. ಈ ದಾಳಿಯಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ.

ಏರ್ ಇಂಡಿಯಾದ ವಕ್ತಾರರು ವಿಮಾನಯಾನವು ತನ್ನ ಪ್ರಯಾಣಿಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ಹೇಳಿದರು.

ದಾಳಿಯ ದೃಷ್ಟಿಯಿಂದ ಮಧ್ಯಪ್ರಾಚ್ಯದ ಅನೇಕ ದೇಶಗಳು ತಮ್ಮ ವಾಯುನೆಲೆಯನ್ನು ಮುಚ್ಚಿವೆ. ಇಸ್ರೇಲ್​ಮ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಮತ್ತು ಯುಎಸ್​ ಸೆಕ್ರೆಟರಿ ಜನರಲ್ ಆಂಟೊನಿಯೊ ಗುಟೆರಸ್ ಇರಾನ್ ದಾಳಿಯನ್ನು ಖಂಡಿಸಿದ್ದಾರೆ. ಇರಾನ್ ದಾಳಿಯ ಕುರಿತು ಇಸ್ರೇಲ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us