ಜಾನ್ ಹೈ ತೋ ಜಹಾನ್ ಹೈ ಎಂದ ಮೋದಿ ಲಾಕ್‌ಡೌನ್ ಸಡಿಲಿಕೆಗೆ ಮುಂದಾಗಿದ್ದೇಕೆ?
ದೆಹಲಿ: ದೇಶದಲ್ಲಿ ಮೇ 17ರವರೆಗೂ ಲಾಕ್‌ಡೌನ್ ಇದೆ. ಆದ್ರೆ ನಿನ್ನೆಯಿಂದ್ಲೇ ಲಾಕ್‌ಡೌನ್ ಅನ್ನೋದು ಆಲ್ಮೋಸ್ಟ್ ಸಡಿಲಿಕೆಯಾಗಿದೆ. ಪ್ರಧಾನಿ ಮೋದಿ ಕೂಡ ಲಾಕ್ಡೌನ್ನ ಭಾಗಶಃ ಸಡಿಲಿಸೋ ತೀರ್ಮಾನ ಕೈಗೊಂಡಿದ್ದಾರೆ. ಮೋದಿ ನಿರ್ಧಾರದ ಹಿಂದೆ ಹತ್ತಾರು ಲೆಕ್ಕಾಚಾರಗಳಿವೆ. ಆ ನಿರ್ಧಾರಗಳೇನು? ಹಂತಹಂತವಾಗಿ ಲಾಕ್‌ಡೌನ್ ಸಡಿಲಿಕೆಗೆ ಏನ್ ಕಾರಣ ಅನ್ನೋದ್ರ ಡೀಟೆಲ್ಸ್ ಇಲ್ಲಿದೆ. ಲಾಕ್‌ಡೌನ್ ಸಡಿಲಿಕೆ ಆಯ್ತು ಅಂತಾ ದೇಶದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ, ಭಾರತ ಇನ್ನೂ ಕಿಲ್ಲರ್ ಕೊರೊನಾ ವಿರುದ್ಧ ಗೆದ್ದಿಲ್ಲ. ಆಗಲೇ ಲಾಕ್‌ಡೌನ್ ಸಡಿಲಿಸಿಬಿಟ್ಟಿದ್ದಾರೆ. ಇಷ್ಟು ಬೇಗ […]
ದೆಹಲಿ: ದೇಶದಲ್ಲಿ ಮೇ 17ರವರೆಗೂ ಲಾಕ್‌ಡೌನ್ ಇದೆ. ಆದ್ರೆ ನಿನ್ನೆಯಿಂದ್ಲೇ ಲಾಕ್‌ಡೌನ್ ಅನ್ನೋದು ಆಲ್ಮೋಸ್ಟ್ ಸಡಿಲಿಕೆಯಾಗಿದೆ. ಪ್ರಧಾನಿ ಮೋದಿ ಕೂಡ ಲಾಕ್ಡೌನ್ನ ಭಾಗಶಃ ಸಡಿಲಿಸೋ ತೀರ್ಮಾನ ಕೈಗೊಂಡಿದ್ದಾರೆ. ಮೋದಿ ನಿರ್ಧಾರದ ಹಿಂದೆ ಹತ್ತಾರು ಲೆಕ್ಕಾಚಾರಗಳಿವೆ. ಆ ನಿರ್ಧಾರಗಳೇನು? ಹಂತಹಂತವಾಗಿ ಲಾಕ್‌ಡೌನ್ ಸಡಿಲಿಕೆಗೆ ಏನ್ ಕಾರಣ ಅನ್ನೋದ್ರ ಡೀಟೆಲ್ಸ್ ಇಲ್ಲಿದೆ.
ಲಾಕ್‌ಡೌನ್ ಸಡಿಲಿಕೆ ಆಯ್ತು ಅಂತಾ ದೇಶದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ, ಭಾರತ ಇನ್ನೂ ಕಿಲ್ಲರ್ ಕೊರೊನಾ ವಿರುದ್ಧ ಗೆದ್ದಿಲ್ಲ. ಆಗಲೇ ಲಾಕ್‌ಡೌನ್ ಸಡಿಲಿಸಿಬಿಟ್ಟಿದ್ದಾರೆ. ಇಷ್ಟು ಬೇಗ ಲಾಕ್‌ಡೌನ್ ಸಡಿಲಿಕೆ ಮಾಡೋಕೆ ಕಾರಣವೇನು ಅನ್ನೋದೇ ಹಲವ್ರ ಪ್ರಶ್ನೆಯಾಗಿದೆ.
ಆರ್ಥಿಕತೆ ಚೇತರಿಕೆಗಾಗಿ ಪ್ರಧಾನಿ ಮೋದಿ ಪ್ಲ್ಯಾನ್! ಲಾಕ್‌ಡೌನ್ ಸಡಿಲಿಕೆಗೆ ಆರ್ಥಿಕತೆ ಚೇತರಿಕೆಯೇ ಪ್ರಮುಖ ಕಾರಣ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ, ಜಾನ್ ಹೈ ತೋ ಜಹಾನ್ ಹೈ ಎಂದಿದ್ದ ಮೋದಿ, ಇದ್ದಕ್ಕಿದ್ದಂತೆ ರಿಸ್ಕಿ ನಿರ್ಧಾರ ಕೈಗೊಳ್ಳೋಕೆ ಪ್ರಮುಖ ಕಾರಣವೇ, ಗುಣಮುಖರಾಗ್ತಿರೋರ ಸಂಖ್ಯೆ. ಅದು ಹೇಗೆ ಅಂದ್ರೆ..
‘ಲಾಕ್’ ಸಡಿಲಿಕೆಗೆ ಕಾರಣಗಳೇನು? ದೇಶದಲ್ಲಿ ಕೊರೊನಾದಿಂದ ಶೇ.27.5ರಷ್ಟು ಮಂದಿ ಗುಣಮುಖರಾದ್ರೆ, ಕರ್ನಾಟಕದಲ್ಲಿ 651 ಸೋಂಕಿತರ ಪೈಕಿ 321 ಮಂದಿ ಗುಣಮುಖರಾಗಿದ್ದಾರೆ. ಇನ್ನು ದೇಶದಲ್ಲಿ ಮೇ ಅಂತ್ಯದೊಳಗೆ ಶೇ.50ರಷ್ಟು ಸೋಂಕಿತರು ಗುಣಮುಖರಾಗುವ ಭರವಸೆ ಇದ್ದು, ಇನ್ನುಳಿದವ್ರು ಗುಣಮುಖರಾಗಲು ಜೂನ್ವರೆಗೂ ಕಾಲಾವಕಾಶ ಬೇಕಾಗಬಹುದು.
ಇದಿಷ್ಟೇ ಅಲ್ಲದೆ ಕೊರೊನಾ ಸೋಂಕಿತರಲ್ಲಿ ಶೇ.3.2ರಷ್ಟು ಮಂದಿ ಮಾತ್ರ ಸಾವಿಗೀಡಾಗಿದ್ದಾರೆ. ಇದು ಇಡೀ ವಿಶ್ವಕ್ಕೆ ಹೋಲಿಸಿದ್ರೆ ಕಡಿಮೆ ಸಾವಿನ ಪ್ರಮಾಣವಾಗಿದೆ. ಇನ್ನು ಕೊರೊನಾ ಪಾಸಿಟಿವ್ ಕೇಸ್ ನಿಯಂತ್ರಿಸುವಲ್ಲಿ ದೇಶ ಯಶಸ್ವಿಯಾಗಿದೆ. ಜೊತೆಗೆ ರೆಡ್ ಜೋನ್ಗಳಲ್ಲಿ ದೊಡ್ಡ ಕೈಗಾರಿಕೆ, ಮಧ್ಯಮ & ಸಣ್ಣ ಕೈಗಾರಿಕೆಗಳಿದ್ದು, ಇಲ್ಲೇ ಹೆಚ್ಚು ಆರ್ಥಿಕ ವ್ಯವಹಾರ ನಡೆಯುತ್ತದೆ. ಹೀಗಾಗಿ ಕಂಟೇನ್ಮೆಂಟ್ ಜೋನ್ಗಳನ್ನ ಮಾತ್ರ ಬಿಟ್ಟು ರೆಡ್ ಜೋನ್ಗಳಲ್ಲೂ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ.
ಈ 42ದಿನಗಳ ಲಾಕ್‌ಡೌನ್ ದೇಶವನ್ನೇ ಅಲ್ಲಕಲ್ಲೋಲ ಮಾಡಿದೆ. ಆರ್ಥಿಕತೆಯ ಅಧಃಪತನವಾಗಿದೆ. ಲಕ್ಷಾಂತರ ನೌಕರರನ್ನ ಬೀದಿಗೆ ತಂದು ನಿಲ್ಲಿಸಿದೆ. ಸಾವಿರಾರು ಮಂದಿಯನ್ನ ಹಸಿವಿನಿಂದ ಕಂಗೆಡಿಸಿದೆ. ಹೀಗೆ ಒಂದಾ.. ಎರಡಾ.. ಹತ್ತಾರು ಸಮಸ್ಯೆಗಳ ಸುಳಿ ದೇಶದ ಜನರನ್ನ ಹಿಂಡಿ ಹಿಪ್ಪೆ ಮಾಡಿದೆ. ಸಂದಿಗ್ಧತೆಯ ಸಂಕೋಲೆಯಲ್ಲಿ ಸಿಲುಕಿಸಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಲಾಕ್ಡೌನ್ಗೆ ಭಾಗಶಃ ರಿಲೀಫ್ ಕೊಟ್ಟಿದೆ. ಕೋಮಾಗೆ ಜಾರಿರೋ ದೇಶದ ಆರ್ಥಿಕತೆಯನ್ನ ಮೇಲೆತ್ತಲು ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ.
Published On - 8:22 am, Tue, 5 May 20